ನಂ.1 ಸ್ಥಾನಕ್ಕೆ ರೇಸ್; ಆಲ್ಟೊ vs ಕ್ವಿಡ್ ವಿಜೇತರು ಯಾರು?

By Nagaraja

ಸಮಕಾಲೀನ ವಾಹನ ಮಾರುಕಟ್ಟೆಯಲ್ಲಿ ಒಂದರ ಬಳಿಕ ಒಂದರಂತೆ ಹೊಸ ಹೊಸ ಕಾರುಗಳ ಪ್ರವೇಶ ಆಗುತ್ತಲೇ ಇದೆ. ಇದರೊಂದಿಗೆ ಪೈಪೋಟಿಯ ತೀವ್ರತೆಯು ಹೆಚ್ಚಿದೆ. ಕಳೆದ ಕೆಲವು ವರ್ಷಗಳ ವಾಹನ ಇತಿಹಾಸ ಪುಟವನ್ನು ತೆರೆದು ನೋಡಿದಾಗ ಅನೇಕ ಹೊಸ ಬ್ರಾಂಡ್ ಗಳ ಪ್ರವೇಶವಾಗಿದೆ. ಇದರಲ್ಲಿ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯೂ ಒಂದಾಗಿದೆ.

Also Read : ಫಿಗೊ ಆಸ್ಪೈರ್ vs ಸ್ವಿಫ್ಟ್ ಡಿಜೈರ್; ಯಾವ ಕಾರು ಅತ್ಯುತ್ತಮ?

ಈಗಾಗಲೇ ಡಸ್ಟರ್ ಗಳಂತಹ ಜನಪ್ರಿಯ ಎಸ್‌ಯುವಿ ಮಾದರಿಗಳನ್ನು ದೇಶಕ್ಕೆ ಪರಿಚಯಿಸಿರುವ ರೆನೊ, ಮಗದೊಂದು ಸಣ್ಣ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಅದುವೇ ರೆನೊ ಕ್ವಿಡ್. ಇದು ಅಂತಿಂಥ ಕಾರಲ್ಲ. ಸಣ್ಣ ಕಾರುಗಳಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ದೇಶದ ನಂ.1 ಆಲ್ಟೊ 800 ಮಾದರಿಗೆ ನೇರ ಪೈಪೋಟಿಯನ್ನೇ ಒಡ್ಡಲಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಾರುತಿ ಆಲ್ಟೊ ಎಂಬ ರೇಸ್ ಕುದುರೆಯನ್ನು ಹಿಂದಿಕ್ಕುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ವಿಸ್ತಾರವಾದ ಮಾರಾಟ ವಲಯ, ನಂಬಿಕೆಗ್ರಸ್ತ ಗ್ರಾಹಕರು, ಸರ್ವೀಸ್ ಸೆಂಟರ್, ಸ್ಪರ್ಧಾತ್ಮಕ ಬೆಲೆ ಹೀಗೆ ಒಂದಲ್ಲ ಎರಡಲ್ಲ ಹಲವು ಬಗೆಯಲ್ಲಿ ಮಾರುತಿ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದುಕ್ಕುತ್ತಲೇ ಬಂದಿದೆ. ಹಾಗಿದ್ದರೆ ನೂತನ ಕ್ವಿಡ್ ಕಾರಿಗೆ ಮಾರುತಿಯ ಅಪಾರ ಸಾನಿಧ್ಯವನ್ನು ಹಿಂದಿಕ್ಕಲು ಸಾಧ್ಯವೇ? ಬನ್ನಿ ನೋಡೋಣ...

ಬೆಲೆ

ಬೆಲೆ

ಸಹಜವಾಗಿಯೇ ಮಾರುತಿಯಂತಹ ದೊಡ್ಡ ಬ್ರಾಂಡ್ ಎದುರಿಸಲು ರೆನೊ ಸಾಕಷ್ಟು ಪೂರ್ವ ತಯಾರಿ ನಡೆಸಬೇಕಾಗಿದೆ. ಇದರಲ್ಲಿ ಬೆಲೆ ನಿರ್ಣಾಯಕ ಪಾತ್ರ ವಹಿಸಲಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ರೆನೊ ಕ್ವಿಡ್ 3ರಿಂದ 4 ಲಕ್ಷ ರು.ಗಳ ವರೆಗಿನ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ. ಇನ್ನೊಂದೆಡೆ ಆಲ್ಟೊ ಪ್ರಾರಂಭಿಕ ಬೆಲೆ 2.53 ಲಕ್ಷ ರು.ಗಳಾಗಿದ್ದು, ಟಾಪ್ ಎಂಡ್ 3.69 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ವಿನ್ಯಾಸ: ರೆನೊ ಕ್ವಿಡ್

ವಿನ್ಯಾಸ: ರೆನೊ ಕ್ವಿಡ್

ಡಿಸೈನ್ ವಿಚಾರಕ್ಕೆ ಬಂದಾಗ ದಶಕಗಳಷ್ಟು ಕಾಲ ಭಾರತ ಮಾರುಕಟ್ಟೆಯಲ್ಲಿ ನೆಲೆಯೂರಿಯುವ ಹಾಗೂ ಕಾಲಕಾಲಕ್ಕೆ ಬದಲಾವಣೆಗಳನ್ನು ಪಡೆಯುತ್ತಲೇ ಬಂದಿರುವ ಮಾರುತಿ ಆಲ್ಟೊಗಿಂತಲೂ ಪರಿಣಾಮಕಾರಿ ವಿನ್ಯಾಸವನ್ನು ಕ್ವಿಡ್ ಪಡೆದಿದೆ ಎಂಬುದನ್ನು ಒತ್ತಿ ಹೇಳಲೇಬೇಕಾಗುತ್ತದೆ. ತನ್ನನ್ನು ತಾನೇ ಮಿನಿ ಎಸ್‌ಯವಿ ಶೈಲಿಯ ಕಾರು ಎಂದು ವಿಶ್ಲೇಷಿಸುತ್ತಿರುವ ಕ್ವಿಡ್ ಹೆಚ್ಚಿನ ಗ್ರೌಂಡ್ ಕ್ಲಿಯರನ್ಸ್ ಸಹ ಪಡೆದುಕೊಂಡಿರಲಿದೆ. ಒಟ್ಟಿನಲ್ಲಿ ಆಕ್ರಮಣಕಾರಿ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ.

ವಿನ್ಯಾಸ: ಆಲ್ಟೊ 800

ವಿನ್ಯಾಸ: ಆಲ್ಟೊ 800

'ಓಲ್ಡ್ ಈಸ್ ಗೋಲ್ಡ್' ಎಂಬ ರೀತಿಯಲ್ಲಿ ಒಂದು ಸರಳ, ಸುಂದರ ಹಾಗೂ ನೈಜತೆಯನ್ನು ಪ್ರತಿಬಿಂಬಿಸುವ ವಿನ್ಯಾಸ ನೀತಿ ಆಲ್ಟೊಗೆ ವರದಾನವಾಗಲಿದೆ. ಈ ವೆರೆಗಿನ ಯಶಸ್ಸಿನಲ್ಲೂ ವಿನ್ಯಾಸ ಪಾತ್ರವು ಮಹತ್ವದ್ದಾಗಿತ್ತು ಎಂಬುದನ್ನು ಮರೆಯಬಾರದು.

ವೈಶಿಷ್ಟ್ಯಗಳು: ಕ್ವಿಡ್

ವೈಶಿಷ್ಟ್ಯಗಳು: ಕ್ವಿಡ್

ಆಲ್ಟೊಗೆ ಹೋಲಿಸಿದಾಗ ಸಾಲು ಸಾಲು ವೈಶಿಷ್ಟ್ಯಗಳನ್ನು ರೆನೊ ಕ್ವಿಡ್ ನಲ್ಲಿ ಪಡೆಯಬಹುದಾಗಿದೆ.

  • 2 ಡಿನ್ ಆಡಿಯೋ ಸಿಸ್ಟಂ ಜೊತೆ ಬ್ಲೂಟೂತ್,
  • ಪವರ್ ವಿಂಡೋ,
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • ಮೀಡಿಯಾ-ನೇವ್ ನೇವಿಗೇಷನ್,
  • ಏಳು ಇಂಚುಗಳ ಟಚ್ ಸ್ಕ್ರೀನ್ ಡಿಸ್ ಪ್ಲೇ,
  • 13 ಇಂಚುಗಳ ಚಕ್ರ,
  • 180 ಎಂಎಂ ಗ್ರೌಂಡ್ ಕ್ಲಿಯರನ್ಸ್,
  • ಆಕ್ಸ್, ಯುಎಸ್‌ಬಿ ಕನೆಕ್ಟಿವಿಟಿ,
  • ಸೆಂಟ್ರಲ್ ಲಾಕಿಂಗ್,
  • ವೈಶಿಷ್ಟ್ಯ: ಮಾರುತಿ ಆಲ್ಟೊ 800

    ವೈಶಿಷ್ಟ್ಯ: ಮಾರುತಿ ಆಲ್ಟೊ 800

    ಒಂದು ಮಧ್ಯಮ ವರ್ಗದ ಗ್ರಾಹಕನ ಬಯಕೆಗಳಿಗೆ ಅನುಸಾರವಾಗಿ ಮಾರುತಿ ಆಲ್ಟೊ 800 ಕಾರಿನಲ್ಲೂ ಆಡಿಯೋ ಸಿಸ್ಟಂ, ಯುಎಸ್‌ಬಿ, ಆಕ್ಸ್ ಕನೆಕ್ಟಿವಿಟಿ, ಫ್ಯಾಬ್ರಿಕ್ ಸೀಟು ಹಾಗೂ ಪವರ್ ಸ್ಟೀರಿಂಗ್ ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ.

    ಎಂಜಿನ್: ರೆನೊ ಕ್ವಿಡ್

    ಎಂಜಿನ್: ರೆನೊ ಕ್ವಿಡ್

    ನೂತನ ರನೊ ಕ್ವಿಡ್ 800 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 57 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

    ಎಂಜಿನ್: ಆಲ್ಟೊ 800

    ಎಂಜಿನ್: ಆಲ್ಟೊ 800

    ಇನ್ನೊಂದೆಡೆ ಮಾರುತಿ ಆಲ್ಟೊದಲ್ಲಿರುವ 796 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ 47 ಅಶ್ವಶಕ್ತಿ ಉತ್ಪಾದಿಸಲಿದೆ.ಇದರಲ್ಲೂ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಕಂಡುಬರಲಿದೆ. ಆದರೆ ಇತ್ತೀಚೆಗಷ್ಟೇ ತಾಜಾತನ ತುಂಬಿದ್ದ ಮಾರುತಿ ಆಲ್ಟೊ ಕೆ10 ಮಾದರಿಯಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಆಯ್ಕೆಯನ್ನು ಒದಗಿಸುತ್ತಿದ್ದು, ಧನಾತ್ಮಕ ಅಂಶವಾಗಿ ಪರಿಣಮಿಸಲಿದೆ.

    ಮೈಲೇಜ್

    ಮೈಲೇಜ್

    ಸದ್ಯ ತಿಳಿದಿರುವ ಪ್ರಕಾರ ರೆನೊ ಕ್ವಿಡ್ ಪ್ರತಿ ಲೀಟರ್ ಗೆ 25 ಕೀ.ಮೀ. ವರೆಗೆ ಮೈಲೇಜ್ ನೀಡಲಿದೆ. ಹಾಗಿದ್ದರೂ ಈ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಹೊರಬರಬೇಕಾಗಿದೆ. ಇನ್ನೊಂದೆಡೆ ಮಾರುತಿ 800 ಪ್ರತಿ ಲೀಟರ್ ಗೆ 21.38 ಕೀ.ಮೀ. ಮೈಲೇಜ್ ನೀಡಲಿದೆ.

    ಸುರಕ್ಷತೆ

    ಸುರಕ್ಷತೆ

    ಎಂಟ್ರಿ ಲೆವೆಲ್ ಕಾರು ಆಗಿರುವುದರಿಂದ ಹೆಚ್ಚಿನ ಭದ್ರತೆಗಳನ್ನು ಕಾರಿನಲ್ಲಿ ನಿರೀಕ್ಷಿಸುವಂತಿಲ್ಲ. ಹಾಗಿದ್ದರೂ ಎರಡೂ ಮಾದರಿಗಳು ಐಚ್ಛಿಕ ಏರ್ ಬ್ಯಾಗ್ ಆಯ್ಕೆಯನ್ನು ನೀಡಲಿದೆ ಎಂಬುದೊಂದೇ ಖುಷಿ.

    ಅಂತಿಮ ತೀರ್ಪು

    ಅಂತಿಮ ತೀರ್ಪು

    ರೆನೊ-ನಿಸ್ಸಾನ್ ಸಿಎಂಎಫ್-ಎ ತಳಹದಿಯಲ್ಲಿ ನಿರ್ಮಾಣಗೊಂಡಿರುವ ನೂತನ ಕ್ವಿಡ್ ಎಲ್ಲ ಹಂತದಲ್ಲೂ ಮಾರುತಿ ಆಲ್ಟೊ 800 ಕಾರನ್ನು ಮೀರಿಸಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗಿದ್ದರೂ ಈ ಮೊದಲೇ ತಿಳಿಸಿರುವಂತೆಯೇ ತಿಂಗಳೊಂದರಲ್ಲಿ ಸರಾಸರಿ 20,000ಕ್ಕೂ ಹೆಚ್ಚು ಮಾರಾಟಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಹಾಗೂ ದೇಶದೆಲ್ಲೆಡೆ ವಿಸ್ತಾರವಾದ ಮಾರಾಟ ಜಾಲವನ್ನು ಹೊಂದಿರುವ ಆಲ್ಟೊ 800 ವೈಭವವನ್ನು ಹಿಂದಿಕ್ಕುವುದು ಅಷ್ಟು ಸುಲಭದ ಮಾತಲ್ಲ. ಈ ಎಲ್ಲದರ ನಿಟ್ಟಿನಲ್ಲಿ ಕಾರಿನ ಗುಣಮಟ್ಟತೆ, ಎಂಜಿನ್, ನಿರ್ವಹಣೆ, ಮೈಲೇಜ್ ಹಾಗೂ ಬೆಲೆಯು ನಿರ್ಣಾಯಕ ಪಾತ್ರ ವಹಿಸಲಿದೆ. ಒಟ್ಟಿನಲ್ಲಿ ಈ ಎಲ್ಲದಕ್ಕೂ ಮುಂದಿನ ಕೆಲವು ದಿನಗಳಲ್ಲೇ ಸ್ಪಷ್ಟ ಉತ್ತರ ಲಭ್ಯವಾಗಲಿದೆ.

    ಇವನ್ನೂ ಓದಿ

    ಆಲ್ಟೊ 800 vs ನ್ಯಾನೋ; ಒಂದು ಸಿಂಪಲ್ ಗೈಡ್


Most Read Articles

Kannada
English summary
Renault Kwid Vs Maruti Alto 800: Let's find out comparing both the cars' pricing, features, design, engine specification and safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X