ಕೊನೆಗೂ ಬಂದೇ ಬಿಡ್ತು ಒಂದು ಉತ್ತಮ ಟಾಟಾ ಕಾರು - ಜೆಸ್ಟ್ ವಿಮರ್ಶೆ

Written By:

ಸ್ವದೇಶಿ ಸಂಸ್ಥೆ ಟಾಟಾ ಮೋಟಾರ್ಸ್ ಸಂಸ್ಥೆಯ ಏಳಿಗೆಯನ್ನು ಎಲ್ಲರೂ ಬಯಸುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟ ಹೊಂದಿರುವ ಹೊರತಾಗಿಯೂ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗೆ ಇದುವರೆಗೆ ಪ್ರಯಾಣಿಕ ಕಾರು ವಿಭಾಗದಲ್ಲಿ ಹೆಚ್ಚೇನು ಸಾಧನೆ ಮಾಡಲಾಗಲಿಲ್ಲ.

ಆದರೆ ಹಿಂದಿನೆಲ್ಲ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಟಾಟಾ ಸಂಸ್ಥೆಯು ಹೊಸತಾದ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರನ್ನು 2014 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ತದಾ ಬಳಿಕ ಭರ್ಜರಿ ಬಿಡುಗಡೆ ಕಂಡಿರುವ ಟಾಟಾ ಜೆಸ್ಟ್, ತನ್ನ ಹಳೆಯ ಟ್ಯಾಕ್ಸಿ ಪಟ್ಟವನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದೆಯೇ ಎಂಬುದು ಕಟ್ಟಕಡೆಗೆ ಮೂಡಿಬಂದಿರುವ ಪ್ರಶ್ನೆಯಾಗಿದೆ.

ಅಂತಿಮವಾಗಿ ಬಂದೇ ಬಿಡ್ತು ಒಂದು ಉತ್ತಮ ಟಾಟಾ ಕಾರು - ಜೆಸ್ಟ್ ವಿಮರ್ಶೆ

ಹೀಗೆ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗಿದ ನಮ್ಮ ವಿಮರ್ಶಕರ ಮುಂದೆ ದೊರಕಿರುವ ಉತ್ತರವೇ 'ಟಾಟಾ ಜೆಸ್ಟ್' ಎಕ್ಸ್‌ಎಂಎ (ಆಟೋಮ್ಯಾಟಿಕ್) ಡೀಸೆಲ್ ಟಾಪ್ ಎಂಡ್ ವೆರಿಯಂಟ್. ನಿಮ್ಮ ಮಾಹಿತಿಗಾಗಿ, ಇದು ನೂತನ ಟಾಟಾ ಜೆಸ್ಟ್‌ನಲ್ಲಿ ಎಂಎಂಟಿ ತಂತ್ರಗಾರಿಕೆ ಇರುವ ಏಕಮಾತ್ರ ವೆರಿಯಂಟ್ ಆಗಿದೆ. ಹಾಗಿದ್ದರೆ ಬನ್ನಿ ನಮ್ಮ ಜೆಸ್ಟ್ ಪಯಣದತ್ತ ಕಣ್ಣಾಯಿಸೋಣವೇ..

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ನೋಟದ ವಿಚಾರದಲ್ಲಿ ಹೊಸ ಜೆಸ್ಟ್ ವಿರುದ್ದ ದೂಸ್ರಾ ಮಾತೇ ಇಲ್ಲದಂತಾಗಿದೆ. ಒಂದು ಕಾಂಪಾಕ್ಟ್ ಸೆಡಾನ್‌ಗೆ ಬೇಕಾದ ಎಲ್ಲ ಘಟಕಗಳನ್ನು ಟಾಟಾ ಜೆಸ್ಟ್ ಹೊಂದಿರುತ್ತದೆ. ಇದರ ಆಕರ್ಷಕ ಹನಿಕಾಂಬ್ ಗ್ರಿಲ್ ಮತ್ತು ದೊಡ್ಡದಾದ ಹೆಡ್ ಲ್ಯಾಂಪ್ ಮತ್ತು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ನಿಮ್ಮ ಗಮನ ಸೆಳೆಯಲಿದೆ.

 ವಿನ್ಯಾಸ - ಬದಿ

ವಿನ್ಯಾಸ - ಬದಿ

ಬದಿಯಿಂದ ನೋಡಿದಾಗ ಮೊದಲು ಗಮನಕ್ಕೆ ಬರುವ ವಿಚಾರವೆಂದರೆ ಇದರ 1,570 ಎಂಎಂ ಎತ್ತರವನ್ನು ಹೊಂದಿರುತ್ತದೆ. 'ಟಾಲ್ ಬಾಯ್' ವಿನ್ಯಾಸ ಕಾಪಾಡಿಕೊಂಡಿರುವ ಹೊಸ ಜೆಸ್ಟ್, ಉತ್ತಮ ಗ್ರೌಂಡ್ ಕ್ಲಿಯರನ್ಸ್ (165 ಎಂಎಂ) ಸಹ ಪಡೆದುಕೊಂಡಿದೆ. ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಡೋರ್ ಲೈನ್ ಕಾರಿಗೆ ಕ್ರೀಡಾತ್ಮಕ ವಿನ್ಯಾಸ ನೀಡುವಲ್ಲಿ ಯಶ ಕಂಡಿದೆ. ಕಪ್ಪು ವರ್ಣದ ಬಿ ಪಿಲ್ಲರ್ ಮತ್ತು 15 ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವೀಲ್ ಕೂಡಾ ಎದ್ದು ಕಾಣಿಸುತ್ತದೆ.

ವಿನ್ಯಾಸ - ಹಿಂದುಗಡೆ

ವಿನ್ಯಾಸ - ಹಿಂದುಗಡೆ

ಹಿಂಭಾಗ ಸ್ವಲ್ಪ ಒತ್ತಿದಂತೆ ಭಾಸವಾಗುತ್ತಿದ್ದರೂ ಸಮತೋಲನ ಕಾಪಾಡುವಲ್ಲಿ ಜೆಸ್ಟ್ ಯಶಸ್ವಿಯಾಗಿದೆ. ಇಲ್ಲಿ ಟೈಲ್ ಲ್ಯಾಂಪ್ ವಿಶೇಷವಾಗಿ ಎದ್ದು ಕಾಣಿಸುತ್ತಿದೆ.

 ಎಂಜಿನ್

ಎಂಜಿನ್

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವೆರಿಯಂಟ್‌ಗಳಲ್ಲಿ ಟಾಟಾ ಜೆಸ್ಟ್ ಲಭ್ಯವಿರುತ್ತದೆ.

ಡೀಸೆಲ್

1248 ಸಿಸಿ, 4 ಸಿಲಿಂಡರ್, ಬಿಎಸ್ IV, ಟರ್ಬೊಚಾರ್ಜ್ಡ್, ವಿಜಿಟಿ, 90 ಅಶ್ವಶಕ್ತಿ (200 ಎನ್‌ಎಂ ಟಾರ್ಕ್), ಮ್ಯಾನುವಲ್ 5 ಸ್ಪೀಡ್, ಎಎಂಟಿ,

1248 ಸಿಸಿ, 4 ಸಿಲಿಂಡರ್, ಬಿಎಸ್ IV, ಟರ್ಬೊಚಾರ್ಜ್ಡ್, ವಿಜಿಟಿ, 75 ಅಶ್ವಶಕ್ತಿ (190 ಎನ್‌ಎಂ ಟಾರ್ಕ್), ಮ್ಯಾನುವಲ್ 5 ಸ್ಪೀಡ್, ಎಎಂಟಿ,

ಪೆಟ್ರೋಲ್

1193 ಸಿಸಿ, ರೆವೊಟ್ರಾನ್, ಟರ್ಬೊಚಾರ್ಜ್ಡ್ ಎಂಪಿಎಫ್‌ಐ, 4 ಸಿಲಿಂಡರ್, ಬಿಎಸ್ IV,90 ಅಶ್ವಶಕ್ತಿ (140 ಎನ್‌ಎಂ ಟಾರ್ಕ್), ಮ್ಯಾನುವಲ್ 5 ಸ್ಪೀಡ್

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರಿನ ಪೆಟ್ರೋಲ್ ಹಾಗೂ ಡೀಸೆಲ್ ವರ್ಷನ್ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ. ಅದೇ ರೀತಿ ಡೀಸೆಲ್ ಟಾಪ್ ಎಂಡ್ ವೆರಿಯಂಟ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಸೌಲಭ್ಯವನ್ನು ಹೊಂದಿರುತ್ತದೆ. ಎಎಂಟಿ ವರ್ಷನ್ ತಾಂತ್ರಿಕವಾಗಿ ಮ್ಯಾನುವಲ್ ಗೇರ್ ಬಾಕ್ಸ್‌ಗೆ ಸಮಾನವಾಗಿ ಕೆಲಸ ಮಾಡುತ್ತದೆ. ಇಲ್ಲಿ ಕ್ಲಚ್ ಪೆಡಾಲ್‌ನ ಅಗತ್ಯವಿಲ್ಲ ಬದಲಾಗಿ ವೇಗವರ್ಧನೆ ಮತ್ತು ಬ್ರೇಕ್ ಪೆಡ್ಯಾಲ್ ಮಾತ್ರ ನಿಯಂತ್ರಿಸಿದರೆ ಸಾಕು. ವಿಶೇಷವೆಂದರೆ ಎಎಂಟಿ ವರ್ಷನ್‌ನಲ್ಲಿ ಕಾರಿನ ಇಂಧನ ಕ್ಷಮತೆಗೆ ಯಾವುದೇ ಘಾಸಿಯುಂಟಾಗಿಲ್ಲ.

ನಿಮ್ಮ ಮಾಹಿತಿಗಾಗಿ ಜಾಗತಿಕವಾಗಿ ಬಹುತೇಕ ಎಲ್ಲ ಎಎಂಟಿ ಕಾರುಗಳಲ್ಲಿ ಡ್ಯುಯಲ್ ಕ್ಲಚ್ ತಾಂತ್ರಿಕತೆಯನ್ನು ಬಳಕೆ ಮಾಡಲಾಗುತ್ತದೆ. ಇದು ಗೇರ್ ಬಾಕ್ಸ್ಇನ್ನಷ್ಟು ನಯವಾಗಿ ಕಾರ್ಯಾಚರಿಸಲು ಸಾಧ್ಯವಾಗುತ್ತದೆ. ಆದರೆ ಟಾಟಾದಲ್ಲಿ ಒಂದು ಕ್ಲಚ್ ಸಿಸ್ಟಂ ಮಾತ್ರ ಇದ್ದು, ಕಡಿಮೆ ವೇಗದಲ್ಲಿ ಕೆಲವೊಮ್ಮೆ ತಳ್ಳಿದಂತೆ ಅನುಭವವಾಗುತ್ತದೆ.

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಟಾಟಾ ಜೆಸ್ಟ್‌ನಲ್ಲಿ ಇಟಲಿಯ ಐಕಾನಿಕ್ ಮ್ಯಾಗ್ನೆಟ್ಟಿ ಮರೆಲ್ಲಿಯ (Magneti Marelli) 5 ಸ್ಪೀಡ್ ಎಎಂಟಿ ಬಳಕೆ ಮಾಡಲಾಗಿದೆ. ಅಲ್ಲದೆ ಇದನ್ನು ಭಾರತೀಯ ರಸ್ತೆ ಪರಿಸ್ಥಿತಿಗೆ ಅನುಸಾರವಾಗಿ ವಿಶೇಷವಾಗಿ ಟ್ಯೂನ್ ಮಾಡಲಾಗಿದೆ. ನಿಮ್ಮ ಮಾಹಿತಿಗಾಗಿ ಮಾರುತಿ ಸೆಲೆರಿಯೊ ಕಾರಿಗೂ ಇದೇ ಸಂಸ್ಥೆ ಎಎಂಟಿ ಯುನಿಟ್ ವಿತರಿಸುತ್ತಿದೆ. ಟಾಟಾ ಇದನ್ನು ವಿಶೇಷವಾಗಿ ಎಕ್ಸ್‌ಎಂಎ ಎಫ್ ಟ್ರಾನಿಕ್ ಎಂದು ಹೆಸರಿಸಿದೆ.

ಇದು ಆಟೋ, ಸ್ಪೋರ್ಟ್, ಟಿಪ್‌ಟ್ರಾನಿಕ್‌ಗಳೆಂಬ (ಮ್ಯಾನುವಲ್) ಮೂರು ಮೋಡ್‌ಗಳನ್ನು ಹೊಂದಿರುತ್ತದೆ. ಇಲ್ಲಿ ನಿಧಾನವಾದ ಟ್ರಾಫಿಕ್ ವೇಳೆ ಆಟೋ ಮೋಡ್ ಉತ್ತಮವಾಗಿ ಕೆಲಸ ಮಾಡಲಿದ್ದು, ಸ್ವಲ್ಪ ಹೆಚ್ಚಿನ ವೇಗದ ಟ್ರಾಫಿಕ್ ಹಾಗೂ ಹೈವೇಗಳಲ್ಲಿ ಆಟೋ ಮೋಡ್ ಸೂಕ್ತವೆನಿಸಲಿದೆ.

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಟಾಟಾ ಜೆಸ್ಟ್ ಕಾರನ್ನು ಟಿಪ್‌ಟ್ರಾನಿಕ್ ಎಂಬ ಮ್ಯಾನುವಲ್ ಮೋಡ್‌ನಲ್ಲಿಯೂ ಓಡಿಸಬಹುದಾಗಿದೆ. ಇಲ್ಲಿ ಕಾರಿನ ವೇಗಕ್ಕೆ ಅನುಸಾರವಾಗಿ ಮ್ಯಾನುವಲ್ ಆಗಿ ಗೇರ್ ಹೆಚ್ಚು, ಕಡಿಮೆ ಮಾಡಬೇಕಾಗುತ್ತದೆ. ಹಾಗಿದ್ದರೂ ಹೊಸ ಬಳಕೆದಾರರಿಗೆ ಪ್ರಾರಂಭದಲ್ಲಿ ಇದರ ಬಳಕೆ ಸ್ವಲ್ಪ ಕಷ್ಟಕರವಾಗಬಹುದು.

ಚಾಲನೆ

ಚಾಲನೆ

ಆರಾಮದಾಯಕ ಚಾಲನೆ ಹಾಗೂ ಹ್ಯಾಂಡ್ಲಿಂಗ್‌ಗಾಗಿ ಸಸ್ಫೆಷನ್ ವಿಶೇಷವಾಗಿ ಟ್ಯೂನ್ ಮಾಡಲಾಗಿದೆ. ಹಾಗಿದ್ದರೂ ಎತ್ತರ ಹಾಗೂ ಕಡಿದಾದ ತಿರುವುಗಳಲ್ಲಿ ಅಷ್ಟೊಂದು ರೋಚಕತೆಯ ಅನುಭವ ನೀಡುವುದಿಲ್ಲ. ಆದರೆ ಸಾಮಾನ್ಯ ರೋಡ್ ಹಂಪ್ ಮತ್ತು ಸ್ಪೀಡ್ ಬ್ರೇಕರ್‌ಗಳಲ್ಲಿ ಪ್ರಯಾಣಿಕರಿಗೆ ಆರಾಮದಾಯಕತೆ ನೀಡಲಿದೆ.

ಚಾಲನೆ

ಚಾಲನೆ

ಸ್ಪೀಡ್ ಬ್ರೇಕರುಗಳನ್ನು ಇದು ಮುಂದುಗಡೆ ಸ್ವತಂತ್ರ ಕಾಯಿಲ್ ಸ್ಪ್ರಿಂಗ್ ಸಸ್ಪೆಷನ್ ಹೊಂದಿದೆ. ಅದೇ ರೀತಿ ಹಿಂದುಗಡೆ ಟ್ವಿಸ್ಟ್ ಕಾಯಿಲ್ ಸ್ಪ್ರಿಂಗ್ ವ್ಯವಸ್ಥೆ ಕೆಲಸ ಮಾಡಲಿದೆ.

ಕ್ಯಾಬಿನ್

ಕ್ಯಾಬಿನ್

ಕಾರು ಪ್ರಯಾಣದ ವಿಚಾರದಲ್ಲಿ ಕ್ಯಾಬಿನ್ ಪಾತ್ರ ಬಹಳ ಮಹತ್ವದ್ದಾಗಿದೆ. ಇದೇ ಕಾರಣಕ್ಕಾಗಿ ಗುಣಮಟ್ಟತೆಗೆ ಟಾಟಾ ಹೆಚ್ಚಿನ ಆದ್ಯತೆ ಕೊಟ್ಟಿದೆ. ಒಟ್ಟಾರೆ ವಿನ್ಯಾಸ ಅತ್ಯುತ್ತಮವಾಗಿದ್ದರೂ ಹ್ಯುಂಡೈ ಎಕ್ಸ್‌ಸೆಂಟ್‌ಗೆ ಹೋಲಿಸಿದರೆ ಫಿಟ್ ಆಂಡ್ ಫಿನಿಶ್ ವಿಚಾರದಲ್ಲಿ ಕೆಲವೊಂದು ಲೋಪದೋಷಗಳು ಇಲ್ಲೂ ಕಂಡುಬಂದಿದೆ.

ಇದರಲ್ಲಿರುವ ಎಸಿ ವೆಂಟ್ಸ್, ಡ್ಯಾಶ್ ಬೋರ್ಡ್, ಸರಿಯಾದ ಜಾಗದಲ್ಲಿ ಪವರ್ ವಿಂಡೋ ಸ್ವಿಚ್ ಲಗತ್ತಿಸಿರುವುದು ಮುಂತಾದ ವೈಶಿಷ್ಟ್ಯಗಳು ನಮ್ಮ ಗಮನ ಸೆಳೆದಿವೆ.

 ಕ್ಯಾಬಿನ್

ಕ್ಯಾಬಿನ್

ಭಾರತೀಯ ಗ್ರಾಹಕರ ಸೆಳೆತಕ್ಕೆ ಅನುಗುಣವಾಗಿ ಟಾಟಾ ಜೆಸ್ಟ್‌ನಲ್ಲಿ ಟು ಟೋನ್ ಬೀಜ್, ಗ್ರೇ ಹೋದಿಕೆ ಮತ್ತು ಡ್ಯಾಶ್ ಬೋರ್ಡ್ ಥೀಮ್ ಹೊಂದಿದೆ. ಇನ್ನು ಕಾರಿನ ಸೀಟುಗಳು ಹೆಚ್ಚು ಆರಾಮದಾಯಕವೆನಿಸಿದೆ. ಹಿಂದುಗಡೆ ಪ್ರಯಾಣಿಕರಿಗೂ ಹೊಂದಾಣಿಸಬಹುದಾದ ಹೆಡ್ ರೆಸ್ಟ್ ಕೂಡಾ ಇರಲಿದೆ.

ಹಾಗಿದ್ದರೂ ಚಾಲಕ ಸೀಟು ಎತ್ತರ ಹೊಂದಾಣಿಕೆಯ ಕೊರತೆ ಕಾಡುತ್ತಿದೆ. ಇದರಲ್ಲಿ ಐದು ಮಂದಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ. ಇದು ಟಾಟಾ ಗ್ರಾಹಕರಿಗೆ ನಿಜಕ್ಕೂ ಅನುದಾನವಾಗಿ ಪರಿಣಮಿಸಲಿದೆ.

ಮುನ್ನಡೆ - ಆಡಿಯೋ ಸಿಸ್ಟಂ

ಮುನ್ನಡೆ - ಆಡಿಯೋ ಸಿಸ್ಟಂ

ಟಾಟಾ ಜೆಸ್ಟ್‌ನಲ್ಲಿ ಹರ್ಮಾನ್ ವಿನ್ಯಾಸಿತ 8 ಸ್ಪೀಡ್ ಮಾಹಿತಿ ಮನರಂಜನಾ ಸಿಸ್ಟಂ ಆಳವಡಿಸಲಾಗಿದೆ. ಇದರ ಬಳಕೆ ತುಂಬಾನೇ ಸರಳವಾಗಿದ್ದು ನಮ್ಮ ಮನಗೆಲ್ಲುವಲ್ಲಿ ಕಾರಣವಾಗಿದೆ. ಇದರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ವ್ಯವಸ್ಥೆಯು ಇರಲಿದ್ದು, ಪ್ರಯಾಣಿಕರು ತಮ್ಮ ಸವಾರಿಯ ವೇಳೆ ನಿಜಕ್ಕೂ ಉತ್ತಮ ಸಮಯ ಕಳೆಯಲಿದ್ದಾರೆ.

ಶಬ್ದ ಕಡಿಮೆ

ಶಬ್ದ ಕಡಿಮೆ

ಇನ್ನು ಇತರ ಕಾರುಗಳಿಗೆ ಹೋಲಿಸಿದಾಗ ಕಾರಿನೊಳಗೆ ಎಂಜಿನ್ ಶಬ್ದ ಕಡಿಮೆಯಾಗಿದೆ. ಸಾಮಾನ್ಯವಾಗಿ ಡೀಸೆಲ್ ಕಾರುಗಳು ಹೆಚ್ಚು ಎಂಜಿನ್ ನಾಯ್ಸ್ ಹೊಂದಿರುತ್ತದೆ. ಆದರೆ ಟಾಟಾ ಜೆಸ್ಟ್ ಅತ್ಯುತ್ತಮ ಕ್ಯಾಬಿನ್ ಅನುಭವ ನೀಡುವಲ್ಲಿ ಯಶ ಕಂಡಿದ್ದು, ನಾಯ್ಸ್ ವೈಬ್ರೇಷನ್ ಮತ್ತು ಹಾರ್ಶ್‌ನೆಸ್ (NVH) ಕಡಿಮೆಯಾಗಿದೆ.

ಹೆಡ್‌ಲ್ಯಾಂಪ್

ಹೆಡ್‌ಲ್ಯಾಂಪ್

ಟಾಟಾ ಹೆಡ್ ಲ್ಯಾಂಪ್ ನಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತಿದ್ದು, ರಾತ್ರಿ ಪಯಣದಲ್ಲೂ ಅತ್ಯುತ್ತಮ ಗೋಚರತೆಯನ್ನು ನೀಡುತ್ತಿದೆ. ಇದು ನಿಮ್ಮ ಚಾಲನಾ ಒತ್ತಡವನ್ನು ಕಡಿಮೆ ಮಾಡಲಿದೆ.

ಡ್ರೈವ್‌ಸ್ಪಾರ್ಕ್ ಸಲಹೆ: ರಾತ್ರಿ ವೇಳೆಯಲ್ಲಿ ಪಯಣಿಸುವಾಗ ಸ್ವಲ್ಪ ಎಡಭಾಗಕ್ಕೆ ನೋಡಿದರೆ ಮುಂಭಾಗದ ವಾಹನಗಳ ಹೈ ಬೀಮ್ ಪ್ರಕಾಶಮಾನ ಬೆಳಕನ್ನು ಸಾಧ್ಯವಾದಷ್ಟು ತಪ್ಪಿಸಬಹುದಾಗಿದೆ. ಇದೇ ವೇಳೆ ರಸ್ತೆಯ ಎಡಭಾಗದ ಲೇನ್ ತಪ್ಪದಂತೆ ಎಚ್ಚರ ವಹಿಸಿ.

ಇನ್ಸ್ಟ್ರುಮೆಂಟಲ್ ಕ್ಲಸ್ಟರ್

ಇನ್ಸ್ಟ್ರುಮೆಂಟಲ್ ಕ್ಲಸ್ಟರ್

ಟಾಟಾ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಚಾಲಕ ಸ್ನೇಹಿ ಎಂದೇ ಹೇಳಬಹುದು. ಇದರ ಸ್ಪೀಡೋ, ಟ್ಯಾಕೋ ಮೀಟರ್‌ಗಳು ಸರಳ ಹಾಗೂ ಅಚ್ಚುಕಟ್ಟಾಗಿದೆ. ಇದು ಬಹು ಮಾಹಿತಿ ಪರದೆಗಳು, ಗೇರ್ ಬದಲಾವಣೆ, ಡೋರ್ ವಾರ್ನಿಂಗ್, ಟ್ರಿಪ್ ಮೀಟರ್, ಇಂಧನ ಎಕಾನಮಿ ಮುಂತಾದ ಮಾಹಿತಿಗಳನ್ನು ನೀಡುತ್ತದೆ. ನಿರ್ದಿಷ್ಟ ಪ್ರಯಾಣದ ಮೈಲೇಜ್ ಮಾಹಿತಿ ಕೂಡಾ ನೀವು ಸೆಟ್ ಮಾಡಿಕೊಳ್ಳಬಹುದಾಗಿದೆ.

ವಿಂಡೋ ಸ್ವಿಚ್

ವಿಂಡೋ ಸ್ವಿಚ್

ಈ ಮೊದಲೇ ತಿಳಿಸಿರುವಂತೆಯೇ ವಿಂಡೋ ಬಟನ್ ಬಳಕೆ ತುಂಬಾನೇ ಸುಲಭವಾಗಿದ್ದು, ಕೈಗೆಟಕುವಂತಿದೆ. ಚಾಲನೆ ವೇಳೆಯಲ್ಲೂ ಇದರ ಬಳಕೆ ಸಲೀಸಾಗಿದೆ.

ಸೀಟು ಕೆಳಗಡೆಯೂ ಜೆಸ್ಟ್ ಮ್ಯಾಜಿಕ್

ಸೀಟು ಕೆಳಗಡೆಯೂ ಜೆಸ್ಟ್ ಮ್ಯಾಜಿಕ್

ಪ್ರಯಾಣಿಕ ಸೀಟು ಕೆಳಗಡೆಯೂ ಬಾಟಲ್ ಹೋಲ್ಡರ್ ಮತ್ತು ಸ್ಟೋರೆಜ್ ನೀಡಿರುವುದಕ್ಕಾಗಿ ಜೆಸ್ಟ್‌ಗೆ ನಾವು ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು.

ಹಿನ್ನಡೆ - ಬೂಟ್ ಸ್ಪೇಸ್

ಹಿನ್ನಡೆ - ಬೂಟ್ ಸ್ಪೇಸ್

390 ಲೀಟರ್ ಲಗ್ಗೇಜ್ ಜಾಗ ಇರುವ ಹೊರತಾಗಿಯೂ ಜೆಸ್ಟ್ ಬೂಟ್ ಸ್ಪೇಸ್‌ನ ವಿನ್ಯಾಸ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸುತ್ತಿದೆ. ಅದೇ ರೀತಿ ಹೆಚ್ಚುವರಿ ಚಕ್ರವು ಲಗ್ಗೇಜ್ ಜಾಗವನ್ನು ಕಸಿದುಕೊಂಡಿರುವುದನ್ನು ಕಾಣಬಹುದು.

ಎತ್ತರ ಹೊಂದಾಣಿಕೆ

ಎತ್ತರ ಹೊಂದಾಣಿಕೆ

ಈ ಮೊದಲೇ ತಿಳಿಸಿರುವಂತೆಯೇ ಚಾಲಕರಿಗೆ ಮುಂಭಾಗದ ಎತ್ತರ ಹೊಂದಾಣಿಸುವ ಸೀಟಿನ ಕೊರತೆ ಕಾಡಲಿದೆ. ನಿಮ್ಮ ಗಮನಕ್ಕೆ ಡ್ಯಾಶ್ ಬೋರ್ಡ್ ಸ್ವಲ್ಪ ಎತ್ತರದಲ್ಲಿರುವುದರಿಂದ ಕಡಿಮೆ ಎತ್ತರದ ಚಾಲಕರಿಗೆ ಸ್ವಲ್ಪ ಕಷ್ಟಕರವೆನಿಸಬಹುದು. ಅದೇ ರೀತಿ ಫ್ರಂಟ್ ಸೀಟು ಬೆಲ್ಟ್ ಹೊಂದಾಣಿಕೆ ಇರುತ್ತಿದ್ದಲ್ಲಿ ಇನ್ನು ಉತ್ತಮವಾಗಿರುತ್ತಿತ್ತು.

ಮಿರರ್

ಮಿರರ್

ರಿಯರ್ ವ್ಯೂ ಮಿರರ್ ಸ್ವಲ್ಪ ಚಿಕ್ಕದಾಗಿದ್ದು, ಹಿಂದುಗಡೆಯ ಚಿತ್ರಣಗಳು ಮಿಸ್ ಆಗುವ ಆತಂಕವಿದೆ. ಔಟ್‌ಸೈಡ್ ರಿಯರ್ ವ್ಯೂ ಮಿರರ್ ಸಹ ಇದಕ್ಕೆ ಸಮಾನವಾದ ತೊಂದರೆಗಳನ್ನು ಎದುರಿಸುತ್ತಿದೆ.

ಮೋಡ್ ಆಯ್ಕೆ

ಮೋಡ್ ಆಯ್ಕೆ

ಒಂದು ವೇಳೆ ಗೇರ್ ಬಾಕ್ಸ್‌ನಲ್ಲಿರುವ ಸ್ಪೋರ್ಟ್ಸ್ ಮೋಡ್ ಆಯ್ಕೆ ಸ್ಟೀರಿಂಗ್ ವೀಲ್‌ನಲ್ಲೇ ನೀಡುತ್ತಿದ್ದರೆ ಇದರ ಉಪಯುಕ್ತತೆ ವಿಭಿನ್ನವಾಗಿರುತ್ತಿತ್ತು. ಒಂದು ರೀತಿಯಲ್ಲಿ ಚಾಲಕರಿಗೆ ಎಫ್1 ರೇಸ್ ಗಾಡಿ ಶೈಲಿಯ ಅನುಭವ ನೀಡುತ್ತಿತ್ತು. ಪ್ರಸ್ತುತ ಇದನ್ನು ಗೇರ್ ಸೆಲೆಕ್ಟರ್ ಹಿಂದುಗಡೆ ಲಗತ್ತಿಸಲಾಗಿದೆ.

ಗೋಚರತೆ

ಗೋಚರತೆ

ಟಾಟಾ ಜೆಸ್ಟ್ 'ಎ' ಪಿಲ್ಲರ್ ಸ್ವಲ್ಪ ದಪ್ಪವಾಗಿದ್ದು, ಇದು ಕಾರ್ನರ್ ಹಾಗೂ ಬದಿಗಳಲ್ಲಿ ತಿರುವಿನ ವೇಳೆ ಚಾಲಕರಿಗೆ ನಿಭಾಯಿಸುವುದು ಸ್ವಲ್ಪ ತ್ರಾಸದಾಯಕವಾಗಲಿದೆ.

ಬಾಟಲಿ

ಬಾಟಲಿ

ಡೋರ್ ಪಾಕೆಟ್‌ನಲ್ಲಿರುವ ಏಕ ಮಾತ್ರ ಬಾಟಲಿ ಸ್ಟೋರೆಜ್ ಕೆಟ್ಟದಾಗಿದ್ದು, ಇದನ್ನು ನಿಭಾಯಿಸುವುದು ಕಷ್ಟಕರವಾಗಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

ಟಾಟಾ ಜೆಸ್ಟ್ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 23 ಮೈಲೇಜ್ ನೀಡಲಿದೆ ಎಂದು ವಾದಿಸಿದರೂ ನೈಜ ರಸ್ತೆ ಪರಿಸ್ಥಿತಿಯಲ್ಲಿ 18ರಿಂದ 19 ಕೀ.ಮೀ. ವರೆಗೂ ಮೈಲೇಜ್ ದೊರಕಲಿದೆ. ಆದರೆ ಮ್ಯಾನುವಲ್ ಮೋಡ್‌ನಲ್ಲಿ ಇದು 14 ಕೀ.ಮೀ.ಗಳಿಗೆ ಇಳಿಕೆಯಾಗಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಹಿಂದಿನ ಟಾಟಾ ಕಾರುಗಳಿಗೆ ಹೋಲಿಸಿದರೆ ಹೊಸ ಜೆಸ್ಟ್, ಮಾರುತಿಯ ಜನಪ್ರಿಯ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್ ಮತ್ತು ಹ್ಯುಂಡೈ ಎಕ್ಸ್‌ಸೆಂಟ್‌ಗಳಂತಹ ಮಾದರಿಗಳಿಗೆ ತೊಡೆ ತಟ್ಟಿ ಪೈಪೋಟಿ ನೀಡಲಿದೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಾಗಾಗಿ ಮುಂಬರುವ ದಿನಗಳೇ ಟಾಟಾ ಜೆಸ್ಟ್ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದಕ್ಕೆ ಉತ್ತರ ಕೊಡಲಿದೆ.

ನಿಸ್ಸಂಶಯವಾಗಿಯೂ ಟಾಟಾ ಜೆಸ್ಟ್ ಎಎಂಟಿ ವರ್ಷನ್ ಸಂಸ್ಥೆಯ ಪಾಲಿಗೆ 'ಟ್ರಂಪ್ ಕಾರ್ಡ್' ಆಗಿ ಪರಿಣಮಿಸಲಿದ್ದು, ಖರೀದಿಗಾರರ ಮನ ಸೆಳೆಯಲಿದೆ. ಅಲ್ಲದೆ ಈ ವರೆಗೆ ನಿರ್ಮಾಣವಾಗಿರುವ ಅತ್ಯುತ್ತಮ ಟಾಟಾ ಕಾರು ಎಂದೇ ಜೆಸ್ಟ್ ಕಾರನ್ನು ವ್ಯಾಖ್ಯಾನಿಸಬಹುದು.

ಒಟ್ಟಿನಲ್ಲಿ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಮತ್ತು ಕನೆಕ್ಟ್ ನೆಕ್ಸ್ಟ್ ವಿನ್ಯಾಸ ಸಿದ್ಧಾಂತದ ಅಡಿಯಲ್ಲಿ ನಿರ್ಮಾಣವಾಗಿರುವ ಟಾಟಾ ಜೈಸ್ಟ್, ಹಣಕ್ಕೆ ತಕ್ಕ ಮೌಲ್ಯ ನೀಡಲಿದೆ.

 

English summary
Expert review of Tata Zest diesel automatic (XMA F-Tronic AMT). Read our in-depth review of Tata Zest diesel AMT here.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark