ಟೊಯೋಟಾ ಇಟಿಯೋಸ್ ಲಿವಾ ಮಾರ್ಚ್ ನಲ್ಲಿ ರಸ್ತೆಗೆ

Toyota etios liva launch
ಬಹುನಿರೀಕ್ಷಿತ ಟೊಯೋಟಾ ಲಿವಾ ಮಾರ್ಚ್ ನಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ. ಹೀಗಾಗಿ ಇಟಿಯೋಸ್ ಸೆಡಾನ್ ಖರೀದಿಯ ಕನಸಿನಲ್ಲಿರುವವರು ಲಿವಾದತ್ತಲೂ ಒಲವು ತೋರಬಹುದಾಗಿದೆ. ಟೊಯೋಟಾ ಮೋಟಾರ್ಸ್ ಕಳೆದ ತಿಂಗಳು ಹೊರತಂದ ಪುಟ್ಟ ಕಾರ್ ಇಟಿಯೋಸ್ ಸೆಡಾನ್ ಆವೃತ್ತಿಗೆ ಗ್ರಾಹಕರಿಗೆ ಅತ್ಯುತ್ತಮ ಬೇಡಿಕೆ ಕಂಡು ಬಂದಿದೆ. ಹೀಗಾಗಿ ಕಂಪನಿಯೂ ಇಟಿಯೋಸ್ ಉತ್ಪಾದನೆಯನ್ನೂ ಹೆಚ್ಚಿಸಲು ನಿರ್ಧರಿಸಿದೆ.

ಈಗ ಇಟಿಯೋಸ್ ಗ್ರಾಹಕರ ಕೈಗೆ ತಲುಪಲು ಸುಮಾರು 7-8 ತಿಂಗಳು ಕಾಯುವ ಅನಿವಾರ್ಯತೆಯಿದೆ. ಇದನ್ನು ತಪ್ಪಿಸಲು ಲಿವಾ ಕಾರನ್ನು ಗ್ರಾಹಕರು ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. 1,200 ಸಿಸಿಯ ಲಿವಾ ಕಾರ್ ಸುಮಾರು 4 ಲಕ್ಷ ರೂಪಾಯಿ ಆಸುಪಾಸಿನಲ್ಲಿ ದೊರಕುತ್ತದೆ. ಹೆಚ್ಚು ಜನರು ಲಿವಾ ಇಷ್ಟಪಡಲು ದರ ಕೂಡ ಪ್ರಮುಖ ಕಾರಣವಾಗುವ ನಿರೀಕ್ಷೆಯಿದೆ. ಕಂಪನಿಯು ಮಾರ್ಚ್ ನಲ್ಲಿ ಲಿವಾ ಹೊರತರಲು ಉದ್ದೇಶಿಸಿರುವ ಹಿಂದಿನ ಮರ್ಮವೆಂದರೆ ಇಟಿಯೋಸ್ ಬುಕ್ಕಿಂಗ್ ಮಾಡಿ ವೇಟಿಂಗ್ ಪಿರೇಡ್ ಕಡಿಮೆ ಮಾಡುವುದಾಗಿದೆ.

ಇಟಿಯೋಸ್ ಬಿಸಿದೋಸೆ: ಕಳೆದ ತಿಂಗಳು ಕಂಪನಿ ಹೊರತಂದ ಇಟಿಯೋಸ್ ಕುರಿತು ಕಂಪನಿಗೆ ಸಿಹಿಸುದ್ದಿಗಳೂ ಬರುತ್ತಿವೆಯಂತೆ. ಮಾರುಕಟ್ಟೆಯಲ್ಲಿ ಈಗ ಬಿಸಿದೋಸೆಯಂತೆ ಇಟಿಯೋಸ್ ಮಾರಾಟವಾಗುತ್ತಿದೆಯಂತೆ! ಇಲ್ಲಿವರೆಗೆ ಸುಮಾರು 18,500 ಇಟಿಯೋಸ್ ಕಾರ್ ಬುಕ್ಕಿಂಗ್ ಆಗಿವೆ. ಗ್ರಾಹಕರ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅನುಸರಿಸಲಾಗುವುದು ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

ಬೆಂಗಳೂರು ಘಟಕಕ್ಕೆ ಹೂಡಿಕೆ: ಬೆಂಗಳೂರಿನಲ್ಲಿರುವ ಉತ್ಪಾದನಾ ಘಟಕಕ್ಕೆ ಸುಮಾರು 3,200 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಇಟಿಯೋಸ್ ಉತ್ಪಾದನೆ ಹೆಚ್ಚಿಸಲಾಗುವುದೆಂದೂ ಕಂಪನಿ ಹೇಳಿದೆ. ಕಂಪನಿಯು ಇಲ್ಲಿ ಈ ವರ್ಷದಲ್ಲಿ ಸುಮಾರು 70 ಸಾವಿರ ಇಟಿಯೋಸ್ ಮತ್ತು ಲಿವಾ ಕಾರ್ ಗಳನ್ನು ಉತ್ಪಾದಿಸಲಿದೆ ಎಂದು ಕಂಪನಿ ಪ್ರಕಟಿಸಿದೆ. ಫೆಬ್ರವರಿಯಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ

ಬೆಂಗಳೂರಿನಲ್ಲಿರುವ ಘಟಕ ವರ್ಷಕ್ಕೆ ಸುಮಾರು 2 ಲಕ್ಷ ಯೂನಿಟ್ ಉತ್ಪಾದಿಸಲಿದ್ದು ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಕಾರ್ಯತಂತ್ರವನ್ನೂ ಕಂಪನಿ ಹೊಂದಿದೆ. ದೇಶದ ಕಾರ್ ಮಾರುಕಟ್ಟೆಯಲ್ಲಿ ಕಂಪನಿಯ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ನೂತನ ಎರಡು ಕಾರ್ ಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಈಗ ದೇಶಿಯ ವಾಹನ ಮಾರುಕಟ್ಟೆಯಲ್ಲಿ ಕಂಪನಿಯ ಮಾರುಕಟ್ಟೆ ಪಾಲು ಒಂದಂಕಿ ಇದ್ದು ಕನಿಷ್ಠ ಶೇಕಡಾ 10ಕ್ಕಾದರೂ ಮುಟ್ಟಿಸುವ ಗುರಿ ಹೊಂದಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು 3ರಿಂದ 4.5 ಲಕ್ಷ ಯೂನಿಟ್ ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಲಿವಾದ ಕುರಿತು ಒಂದಿಷ್ಟು: ನಿಜ ಹೇಳಬೇಕೆಂದರೆ ಟೊಯೋಟಾ ಕಂಪನಿ ಇಲ್ಲಿವರೆಗೆ ಕಡಿಮೆ ದರದ ಕಾರ್ ಮೇಲೆ ಯಾವತ್ತೂ ಭರವಸೆ ಇಟ್ಟಿರಲಿಲ್ಲ. ಮೊದಲ ಬಾರಿಗೆ ಎಂಬಂತೆ ಟೊಯೋಟಾ ಇಟಿಯೋಸ್ ಲಿವಾದ ಮೇಲೆ ಕಂಪನಿ ಸಾಕಷ್ಟು ಭರವಸೆ ಇಟ್ಟಿದೆ. ನೂತನ ಹ್ಯಾಚ್ ಬ್ಯಾಕ್ ಮಾದರಿಯ ದರ ಕಡಿಮೆಯಾದರೂ ಸುರಕ್ಷತೆ ಮತ್ತು ಆರಾಮದಾಯಕತೆ ಫೀಚರ್ ಗಳಲ್ಲಿ ಯಾವುದೇ ಕೊರತೆ ಉಂಟುಮಾಡಲಾಗಿಲ್ಲ. ಮಾರುತಿ, ಹ್ಯುಂಡೈ ಮತ್ತು ಟಾಟಾದ ಕಾರ್ ಗಳೊಂದಿಗೆ ಲಿವಾ ಪೈಪೋಟಿ ನಡೆಸುವ ನಿರೀಕ್ಷೆಯಿದೆ.

ನೂತನ ಲಿವಾ 1.2 ಲೀಟರ್ ಎಂಜಿನ್ ಹೊಂದಿರಲಿದ್ದು ಸುಮಾರು 80 ಹಾರ್ಸ್ ಪವರ್ ನೀಡುವ ನಿರೀಕ್ಷೆಯಿದೆ. ಈ ಕಾರ್ 890 ಕೆ.ಜಿ. ಭಾರವಿದ್ದೂ ಸುಲಭವಾಗಿ ಚಾಲನೆ ಮಾಡಬಹುದಾಗಿದೆ ಎಂದು ಕಂಪನಿ ಹೇಳಿದೆ. [ಆಟೋಮೊಬೈಲ್ಸ್]

Most Read Articles

Kannada
English summary
The enthralling booking for Etios has made Toyota to offer its Liva as an alternative. The car is expected for launch this March while Toyota has derived plans to hike the production of Etios.
Story first published: Wednesday, January 19, 2011, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X