ಷೆವರ್ಲೆ ಬೀಟ್ ಸ್ಪಾರ್ಕ್ ಕಾರು ದುಬಾರಿ!!

Posted By:
ಜನವರಿ ತಿಂಗಳಿನಿಂದ ಅನ್ವಯವಾಗುವಂತೆ ದೇಶದಲ್ಲಿ ಕಾರು ದರಗಳನ್ನು ಶೇಕಡ 1-2ರಷ್ಟು ಹೆಚ್ಚಿಸಲು ಜನರಲ್ ಮೋಟರ್ಸ್ ನಿರ್ಧರಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ಪ್ರಕಟಿಸಿದೆ.

2012 ಹೊಸ ವರ್ಷ ಆರಂಭದಿಂದ ಷೆವರ್ಲೆ ಬೀಟ್ ಡೀಸೆಲ್ ಕಾರಿನ ದರ ಸುಮಾರು 15 ಸಾವಿರ ರು. ಹೆಚ್ಚಾಗಲಿದೆ ಎಂದು ಕಂಪನಿಯ ಉಪಾಧ್ಯಕ್ಷರಾದ ಪಿ ಬಾಲೆಂದ್ರನ್ ಹೇಳಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕಂಪನಿಗೆ ಹಿನ್ನಡೆಯಾಗಿದೆ. ಹೀಗಾಗಿ ಕಾರು ದರ ಹೆಚ್ಚಿಸುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಅಂದರೆ ನವೆಂಬರ್ ನಲ್ಲಿ ಕಂಪನಿಯು ಒಟ್ಟು 8,440 ಕಾರುಗಳನ್ನು ದೇಶದಲ್ಲಿ ಮಾರಾಟ ಮಾಡಿತ್ತು. ಜನರಲ್ ಮೋಟರ್ಸ್ ಷೆವರ್ಲ್ ಬ್ರಾಂಡ್ ನಡಿ ಷೆವರ್ಲೆ ಸ್ಪಾರ್ಕ್, ಬೀಟ್, ಆವಿಯೊ, ಆವಿಯೊ ಯು-ವಿಎ, ಆಪ್ಟ್ರಾ ಮ್ಯಾಗ್ನಂ, ಕ್ರೂಝ್, ಟವೆರಾ ಮತ್ತು ಕ್ಯಾಪ್ಟಿವಾ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಜನವರಿ ತಿಂಗಳಿನಿಂದ ಕಾರು ದರ ಹೆಚ್ಚಿಸುವುದಾಗಿ ಹಲವು ಕಂಪನಿಗಳು ಈಗಾಗಲೇ ಪ್ರಕಟಿಸಿವೆ. ಟೊಯೊಟಾ ಕಿರ್ಲೊಸ್ಕರ್ ಕಂಪನಿಯು ಮುಂದಿನ ತಿಂಗಳಿನಿಂದ ಕಾರು ದರಗಳನ್ನು ಶೇಕಡ 3ರಷ್ಟು ಹೆಚ್ಚಿಸಲಿದೆ. 

English summary
General Motors India decided to increase its car prices by 1 – 2 percent by January 2012. Reason: Diminishing value of rupee and increase in the commodity prices main reason to increasing car price. January onwards Spark, Beat, Aveo, Aveo U-VA, Optra Magnum, Cruze, Tavera and Captiva price will hike.
Story first published: Wednesday, December 7, 2011, 12:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark