ಮಹೀಂದ್ರ ಕಂಪನಿಯ ಮಾಲಿನ್ಯ ಸರ್ಟಿಫಿಕೆಟ್ ಇನ್ ವ್ಯಾಲಿಡ್!!

M&M Federal Emissions Certification validity End
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಅಮೆರಿಕ ಸರಕಾರದ ಪರಿಸರ ರಕ್ಷಣೆ ಏಜೆನ್ಸಿ(ಇಪಿಎ)ಯಿಂದ ಪಡೆದ ಫೆಡರಲ್ ಎಮಿಷನ್ ಸರ್ಟಿಫಿಕೆಟ್ ವ್ಯಾಲಿಡಿಟಿ ಡಿಸೆಂಬರ್ ವೇಳೆಗೆ ಮುಗಿಯಲಿದೆ. ಹೀಗಾಗಿ ಕಂಪನಿಯು ಹೊಸ ಸರ್ಟಿಫಿಕೆಟ್ ಗಾಗಿ ಮತ್ತೆ ಅರ್ಜಿ ಸಲ್ಲಿಸಬೇಕಿದೆ.

ಕಂಪನಿಯು ಈಗಾಗಲೇ ಟೆಕ್ಸಾಸ್ ನಲ್ಲಿರುವ ಗ್ಲೋಬಲ್ ವೆಹಿಕಲ್ ಕಂಪನಿ(ಜಿವಿ) ಜೊತೆಗೆ ನ್ಯಾಯಿಕ ಹೋರಾಟವನ್ನು ಮಾಡುತ್ತಿದೆ. ಇದು ವಿತರಣೆ ಮತ್ತು ಮಾರಾಟ ಸಂಬಂಧ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ.

ಅಮೆರಿಕ ಮಾರುಕಟ್ಟೆಯಲ್ಲಿ ಪಿಕಪ್ ಮಾರಾಟ ಮಾಡಲು 1845ರೊಲ್ಲಿ ಇಪಿಎ ಸರ್ಟಿಫಿಕೆಟ್ ಪಡೆದಿತ್ತು. ವರದಿಯೊಂದರ ಪ್ರಕಾರ ಕಂಪನಿಯು ಮತ್ತೆ ತನ್ನ ವಾಹನ(ಟಿಆರ್20 ಮತ್ತು ಟಿಆರ್40 ಪಿಕಪ್)ಗಳನ್ನು ಇಪಿಎಗೆ ಕಳುಹಿಸಿ ಟೆಸ್ಟ್ ಮಾಡಿಸಿ ಸರ್ಟಿಫಿಕೆಟ್ ಪಡೆಯಬೇಕಿದೆ.

ಭಾರತದಲ್ಲಿ ಪಿಕಪ್ ಹೆಚ್ಚು ಜನಪ್ರಿಯ ವಾಹನವಲ್ಲ. ಆದರೆ ಅಮೆರಿಕವು ಪಿಕಪ್ ವಾಹನಗಳಿಗೆ ವಿಶ್ವದ ಬೃಹತ್ ಮಾರುಕಟ್ಟೆಯಾಗಿದೆ. ಮಹೀಂದ್ರ ಕಂಪನಿಯ ಪಿಕಪ್ ಗಳು ಇಂಧನ ದಕ್ಷತೆಯಲ್ಲಿ ಹಿಂದಿರುವುದರಿಂದ ಹೆಚ್ಚು ಜನಪ್ರಿಯವಾಗಿಲ್ಲ. ನೂತನ ಸರ್ಟಿಫಿಕೆಟ್ ಪಡೆಯಲು ಈ ಪಿಕಪ್ ಗಳಿಗೆ ಸಾಧ್ಯವಿದೆಯೇ ಕಾದುನೋಡಬೇಕಿದೆ.

Most Read Articles

Kannada
English summary
M&M US federal emissions certificate validity end this Month. Company to apply for a re-certification for federal emissions to Environmental Protection Agency (EPA) of the American government.
Story first published: Friday, December 16, 2011, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X