ಹೊಸ ವರುಷದಲ್ಲಿ ಟೊಯೊಟಾ ಕಾರು ನೀಡದು ಹರುಷ

Toyota Kirloskar Motor Price Hike in January 2012
ಹೊಸ ವರ್ಷ ಟೊಯೊಟಾ ಕಾರು ಖರೀದಿದಾರರಿಗೆ ಹರುಷ ತರುವ ನಿರೀಕ್ಷೆಯಿಲ್ಲ. ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯು ಜನವರಿ ಒಂದರಿಂದ ಕಾರುಗಳ ದರವನ್ನು ಶೇಕಡ 3ರಷ್ಟು ಹೆಚ್ಚಿಸಲು ನಿರ್ಧರಿಸಿವೆ. ಜಪಾನಿನ ಯೆನ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದೇ ದರ ಹೆಚ್ಚಳ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.

"ರೂಪಾಯಿ ಮತ್ತು ಯೆನ್ ಮೌಲ್ಯಗಳ ನಡುವೆ ಕುಸಿತ ಕಂಡಿರುವುದರಿಂದ ಕಂಪನಿಯು ಟೊಯೊಟಾ ಕಾರು ದರವನ್ನು ಸುಮಾರು ಶೇಕಡ 1.5ರಿಂದ ಶೇಕಡ 3ರಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಸಂದೀಪ್ ಸಿಂಗ್ ಹೇಳಿದ್ದಾರೆ.

ಯಾವ ಕಾರಿಗೆ ಎಷ್ಟು ಶೇಕಡವಾರು ದರ ಹೆಚ್ಚಿಸಲಾಗುವುದು ಎನ್ನುವುದನ್ನು ಈ ತಿಂಗಳ ಮೂರನೇ ವಾರದಲ್ಲಿ ಪ್ರಕಟಿಸುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಅತ್ಯಧಿಕ ಮಾರಾಟದ ಫಾರ್ಚ್ಯುನರ್ ಸ್ಪೂರ್ಟ್ ಯುಟಿಲಿಟಿ ವೆಹಿಕಲ್ ದರ ಸುಮಾರು 50 ಸಾವಿರ ರುಪಾಯಿ ಹೆಚ್ಚಾಗಲಿದೆ.

ಇದೀಗ ಕಂಪನಿಯ ಕಾರು ದರಗಳು ಇಂತಿವೆ. ಟೊಯೊಟಾ ಲಿವಾ ದರ ಸುಮಾರು 3.99 ಲಕ್ಷ ರುಪಾಯಿಯಿಂದ 5.99 ಲಕ್ಷ ರುಪಾಯಿವರೆಗಿದೆ. ಟೊಯೊಟಾ ಎಟಿಯೋಸ್ ದರ 4.99 ಲಕ್ಷ ರು.ನಿಂದ 7.87 ಲಕ್ಷ ರು.ವರೆಗಿದೆ. ಕೊರೊಲಾ ಆಲ್ಟಿಸ್ ದರ ಸುಮಾರು 10.63 ಲಕ್ಷ ರು.ನಿಂದ 14.75 ಲಕ್ಷ ರು. ಇದೆ. ಫಾರ್ಚ್ಯುನರ್ ದರ 20.45 ಲಕ್ಷ ರು. ಮತ್ತು ಇನ್ನೊವಾ ದರ ಸುಮಾರು 8.48 ಲಕ್ಷ ರು. ನಿಂದ 12.81 ಲಕ್ಷ ರುಪಾಯಿ ಇದೆ.

ಈ ಕಾರುಗಳ ದರ ಗರಿಷ್ಠ ಐವತ್ತು ಸಾವಿರ ರು.ವರೆಗೆ ಜನವರಿಯಿಂದ ಏರಿಕೆ ಕಾಣಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Toyota Kirloskar Motor will increase car prices up to 3 per cent from January 2012. In this highest increase will be of Rs 50,000 for the Fortuner SUV. Toyota Liva, Etios, Corolla Altis, Fortuner and Innova Price will hike 1.5-3 per cent.
Story first published: Tuesday, December 6, 2011, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X