23 ಬಿಗ್ ಲಾಂಚ್; 2012ರಲ್ಲಿ ಬಿಡುಗಡೆಯಾದ ಕಾರುಗಳಿವು!

Posted By:

2012ನೇ ಇಸವಿ ಅಂತ್ಯಕಾಣುತ್ತಿರುವಂತೆಯೇ ಎಲ್ಲರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಇದರಂತೆ ಡಿಸೆಂಬರ್ ತಿಂಗಳಲ್ಲಿ ಬಹುತೇಕರು ಒಂದು ವರ್ಷದಲ್ಲಿ ನಡೆದ ವಿಚಾರಗಳ ಬಗ್ಗೆ ಮೆಲುಕು ಹಾಕುತ್ತಾರೆ. ಕೆಲವರು ತಮ್ಮ ಕೆಟ್ಟ ಚಟಗಳನ್ನು ಬಿಟ್ಟು ಹೊಸ ವರ್ಷದಲ್ಲಿ ಹೊಸ ಜೀವನ ಆರಂಭಿಸಲು ಪಣತೊಟ್ಟಿರುತ್ತಾರೆ.

ಹಾಗಿರುವಾಗ ಆಟೋ ಮೊಬೈಲ್ ಜಗತ್ತಿನಲ್ಲಿ ಕನ್ನಡಿಗರ ಕೈಗನ್ನಡಿಯಾಗಿರುವ ಡ್ರೈವ್ ಸ್ಪಾರ್ಕ್ 2012ನೇ ಸಾಲಿನಲ್ಲಿ ರಿಲೀಸ್ ಆದ ಎಲ್ಲ ಕಾರುಗಳ ಸಂಪೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಿದೆ. ಪ್ರಸಕ್ತ ಸಾಲಿನಲ್ಲಿ ವಿವಿಧ ಕಂಪನಿಗಳಿಂದಾಗಿ ಒಟ್ಟು 23 ಕಾರುಗಳು ಲಾಂಚ್ ಆಗಿದ್ದವು.

ಈ ಪೈಕಿ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಎಂದಿನಂತೆ ಅಧಿಪತ್ಯವನ್ನು ಮುಂದವರಿಸಿದ್ದರೆ ಇತರ ವಾಹನ ತಯಾರಕ ಕಂಪನಿಗಳು ಸಹ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಮಾರುತಿಯ ಅತಿ ಅಗ್ಗದ ಆಲ್ಟೊ ಸೇರಿದಂತೆ ಬಿಎಂಡಬ್ಲ್ಯುನ ಪ್ರೀಮಿಯಂ ಕಾರುಗಳು ದೇಶದ ಕಾರು ಖರೀದಿ ಗ್ರಾಹಕರಲ್ಲಿ ಹೊಸ ಅನುಭವಕ್ಕೆ ಕಾರಣವಾಗಿತ್ತು.

ಇವೆಲ್ಲದರ ನಡುವೆ ಇಂಧನ ಬೆಲೆಯೇರಿಕೆ ಬಿಸಿ ತಟ್ಟುತ್ತಿರುವಂತೆಯೇ ಕಾರುಗಳ ಮಾರಾಟದ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಇದರ ಮುಂದಿವರಿದ ಭಾಗವೆಂಬಂತೆ ದೇಶದಲ್ಲಿ ಡೀಸೆಲ್ ಕಾರುಗಳ ಬೇಡಿಕೆ ಗಣನೀಯವಾಗಿ ವರ್ಧಿಸಿತ್ತು. ಇದನ್ನೇ ಪ್ರಮುಖ ಅಸ್ತ್ರವಾಗಿ ಬಳಸಿದ್ದ ಬಹುತೇಕ ಕಂಪನಿಗಳು ಡೀಸೆಲ್ ಎಂಜಿನ್ ಕಾರುಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾರಂಭಿಸಿತ್ತು.

ಈ ಹಿಂದಿನ ವರ್ಷದಂತೆ ವಾಹನ ತಯಾರಕ ಕಂಪನಿಗಳ ನಡುವೆ ಪ್ರಬಲ ಪೈಪೋಟಿ ಕಂಡುಬಂದಿತ್ತು. ಹಬ್ಬದ ಸೀಸನ್ ಸೇರಿದಂತೆ ಕ್ರಿಸ್ಮಸ್ ಸಮಯದಲ್ಲಿ ಕಾರುಗಳಿಗೆ ಭಾರಿ ರಿಯಾಯಿತಿ ದರ ಘೋಷಿಸಲಾಗಿದೆ. ಇದು ಹೊಸ ವರ್ಷದಿಂದ ಬೆಲೆಯೇರಿಕೆ ಬಿಸಿ ತಟ್ಟಲಿದೆ ಎಂಬುದಕ್ಕೆ ಸ್ಪಷ್ಟ ಮುನ್ಸೂಚನೆ ಮಾತ್ರವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಭಾರತೀಯ ಮಾರುಕಟ್ಟೆಯಲ್ಲಿ ಕಾರು ಕಂಪನಿಗಳು ಮಿಶ್ರಫಲವನ್ನು ಕಂಡಿದೆ. ಹಾಗಿದ್ದರೂ ಗ್ರಾಹಕರಿಗೆ ಶ್ರೇಷ್ಠ ಸೇವೆ ನೀಡುವಲ್ಲಿ ಯಶಸ್ವಿಯಾಗಿರುವುದಂತೂ ನಿಜ. ಇಲ್ಲಿದೆ ನೋಡಿ 2012ನೇ ಸಾಲಿನಲ್ಲಿ ಬಿಡುಗಡೆಯಾದ ಕಾರುಗಳ ಸಂಪೂರ್ಣ ಪಟ್ಟಿ (ದರ, ಮೈಲೇಜ್ ಹಾಗೂ ಹೆಚ್ಚಿನ ಮಾಹಿತಿಯನ್ನು ಕೊಡಲಾಗಿದೆ)

1. ಹೊಸ ಮಹೀಂದ್ರ ವೆರಿಟೊ (Mahindra New Verito)

1. ಹೊಸ ಮಹೀಂದ್ರ ವೆರಿಟೊ (Mahindra New Verito)

ದರ ಮಾಹಿತಿ: 5.27 ಲಕ್ಷ ರು.

ಮೈಲೇಜ್: 21.03 kmpl

ದೇಶದ ಪ್ರಮುಖ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಆದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಕಾರು ಆದ ವೆರಿಟೊವನ್ನು ದೇಶದ ಮಾರುಕಟ್ಟೆಗೆ ಇದೇ ವರ್ಷದಲ್ಲಿ ಪರಿಚಯಿಸಿತ್ತು.

2. ನಿಸ್ಸಾನ್ ಇವಾಲಿಯಾ (Nissan Evalia)

2. ನಿಸ್ಸಾನ್ ಇವಾಲಿಯಾ (Nissan Evalia)

ದರ ಮಾಹಿತಿ: 8.5 ಲಕ್ಷ ರು.

ಮೈಲೇಜ್: 16.5 kmpl

ಜಪಾನ್ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ದೇಶದಲ್ಲಿ ಎಂಪಿವಿ ಸೆಗ್ಮೆಂಟ್‌ನ ಅತ್ಯಾರ್ಷಕ ಇವಾಲಿಯಾ ಕಾರನ್ನು ಪರಿಚಯಿಸಿತ್ತು. 10 ಲಕ್ಷದೊಳಗಿನ ಬಜೆಟ್‌ನಲ್ಲಿ ಆಗಮಿಸಿರುವ ಇವಾಲಿಯಾ ಉತ್ತಮ ಇಂಟಿರಿಯರ್ ಹಾಗೂ ಕಾರು ಹ್ಯಾಂಡ್ಲಿಂಗ್ ವಿಷಯದಲ್ಲಿ ಅದ್ಭುತವೆನಿಸಿದೆ.

3. ರೆನೊ ಡಸ್ಟರ್ (Renault Duster)

3. ರೆನೊ ಡಸ್ಟರ್ (Renault Duster)

ದರ ಮಾಹಿತಿ: 7.2 ಲಕ್ಷ

ಮೈಲೇಜ್: 20.46 kmpl

ಫ್ರಾನ್ಸ್‌ನ ಪ್ರಮುಖ ಕಾರು ತಯಾರಕ ಕಂಪನಿಯಾದ ರೆನೊ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅತಿ ಜನಪ್ರಿಯ ಎಸ್‌ಯುವಿ ಡಸ್ಟರ್ ಕಾರನ್ನು ಇದೇ ವರ್ಷ ಪರಿಚಯಿಸಿತ್ತು. ಅನೇಕ ವಿಚಾರಗಳಲ್ಲಿ ರೆನೊ ಡಸ್ಟರ್ ಪ್ರಾಮುಖ್ಯವೆನಿಸಿದೆ. ಅಲ್ಲದೆ ದೇಶದ ಜನಪ್ರಿಯ ಟಾಟಾ ಸಫಾರಿ ಹಾಗೂ ಮಹೀಂದ್ರದ ಸ್ಕಾರ್ಪಿಯೊಗೆ ಪ್ರಬಲ ಸ್ಪರ್ಧೆ ಒಡ್ಡುವಲ್ಲಿ ಯಶಸ್ವಿಯಾಗಿತ್ತು.

4. ಮಾರುತಿ ಸುಜುಕಿ ರಿಟ್ಜ್ (Maruti Suzuki New Ritz)

4. ಮಾರುತಿ ಸುಜುಕಿ ರಿಟ್ಜ್ (Maruti Suzuki New Ritz)

ದರ ಮಾಹಿತಿ: 5.31

ಮೈಲೇಜ್: 19.1 kmpl

ತನ್ನ ಹಿಂದಿನ ಆವೃತ್ತಿಯ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಮಾರುತಿ ಸುಜುಕಿ ತನ್ನ ಹೊಸ ಡೀಸೆಲ್ ಆವೃತ್ತಿಯಾದ ರಿಟ್ಜ್ ಮಾದರಿಯನ್ನು ಪರಿಚಯಿಸಿತ್ತು. ದೇಶದಲ್ಲಿ ಡೀಸೆಲ್ ಆವೃತ್ತಿಗಳಿಗೆ ಭಾರಿ ಬೇಡಿಕೆ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

5. ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್ (Mahindra Ssangyong Raxton)

5. ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್ (Mahindra Ssangyong Raxton)

ದರ ಮಾಹಿತಿ: 17.67 ಲಕ್ಷ ರು.

ಮೈಲೇಜ್: 12.4 kmpl

ಕೊರಿಯಾದ ಮುಂಚೂಣಿಯ ವಾಹನ ತಯಾರಕ ಕಂಪನಿಯಾದ ಸ್ಯಾಂಗ್ಯೊಂಗ್ ತನ್ನ ಅದ್ಭುತ ಪ್ರೀಮಿಯಂ ಎಸ್‌ಯುವಿ ರೆಕ್ಸ್ಟಾನ್ ಕಾರನ್ನು ಇದೇ ವರ್ಷ ಪರಿಚಯಿಸಿತ್ತು. ನಿಮ್ಮ ಮಾಹಿತಿಗಾಗಿ, ಸ್ಯಾಂಗ್ಯೊಂಗ್ ಕಂಪನಿಯು ಮಹೀಂದ್ರ ಜತೆ ಪಾಲುದಾರಿಕೆಯನ್ನು ಹೊಂದಿದ್ದು, ದೇಶದಲ್ಲಿ ಎಸ್‌ಯುವಿ ಕಾರನ್ನು ಪರಿಚಯಿಸಿದೆ.

6. ಟಾಟಾ ಸಫಾರಿ ಸ್ಟ್ರೋಮ್ (Tata Safari Storm)

6. ಟಾಟಾ ಸಫಾರಿ ಸ್ಟ್ರೋಮ್ (Tata Safari Storm)

ದರ ಮಾಹಿತಿ: 9.95 ಲಕ್ಷ ರು.

ಬಿರುಗಾಳಿಯೆಬ್ಬಿಸುವ ರೀತಿಯಲ್ಲಿ ದೇಶದ ಅಗ್ರ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್, ತನ್ನ ಸಫಾರಿ ಸ್ಟ್ರೋಮ್ ಕಾರನ್ನು ಬಿಡುಗಡೆಗೊಳಿಸಿತ್ತು. 2.2 ಲೀಟರ್ ಎಂಜಿನ್ ಹೊಂದಿರುವ ಸಫಾರಿ ಅನೇಕ ವಿಚಾರಗಳಲ್ಲಿ ತನ್ನ ಪೂರ್ವಿಕರನ್ನು ಹಿಂದಕ್ಕೆ ತಳ್ಳಿದೆ.

7. ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ (Mercedes Benz B-Class)

7. ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ (Mercedes Benz B-Class)

ದರ ಮಾಹಿತಿ: 20 ಲಕ್ಷ ರು.

ಭಾರತೀಯ ಮಾರುಕಟ್ಟೆಯಲ್ಲಿ ಒಂದರ ಬಳಿಕ ಒಂದರಂತೆ ಅತಿ ದುಬಾರಿ ಕಾರುಗಳನ್ನು ಪರಿಚಯಿಸುತ್ತಿರುವ ಜರ್ಮನಿಯ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಈ ಬಾರಿ ತನ್ನ ಆವೃತ್ತಿಯ ಅಗ್ಗದ ಕಾರನ್ನು ಬಿಡುಗಡೆ ಮಾಡಿರುವುದು ವಿಶೇಷವೆನಿಸಿತ್ತು. ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಆಕರ್ಷಕ ಹ್ಯಾಚ್‌ಬ್ಯಾಕ್ ಕಾರಾಗಿದೆ. ಇದರ ಜತೆಗೆ ಮುಂದಿನ ವರ್ಷ ಎಂಟ್ರಿ ಲೆವೆಲ್ ಎ-ಕ್ಲಾಸ್ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

8. ಮಾರುತಿ ಸುಜುಕಿ 800 (Maruti Suzuki Alto 800)

8. ಮಾರುತಿ ಸುಜುಕಿ 800 (Maruti Suzuki Alto 800)

ಮೈಲೇಜ್: 22.2 kmpl

ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ 2012ನೇ ಸಾಲಿನಲ್ಲೂ ತನ್ನ ಅತಿ ಜನಪ್ರಿಯ ಆಲ್ಟೊ 800 ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸಿತ್ತು. 2.24 ಲಕ್ಷ ರೂಪಾಯಿ ದರದೊಳಗಿನ ಆಲ್ಟೊ ಅತಿ ಹೆಚ್ಚು ಮಾರಾಟ ಕಾಣುವ ಮೂಲಕ ನೂತನ ದಾಖಲೆ ಸ್ಥಾಪಿಸಿತ್ತು. ಜನ ಸಾಮಾನ್ಯರ ಕಾರು ಎಂದೇ ಬಿಂಬಿಸಲ್ಪಟ್ಟಿರುವ ಆಲ್ಟೊ 800 ಅತ್ಯುತ್ತಮ ವಿನ್ಯಾಸ ಹಾಗೂ ಉತ್ತಮ ಇಂಧನ ಕ್ಷಮತೆಯನ್ನು ಹೊಂದಿದೆ. ಕಂಪನಿಯು ಪೆಟ್ರೋಲ್ ಹಾಗೂ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು.

9. ಆಡಿ ಕ್ಯೂ3 (Audi Q3)

9. ಆಡಿ ಕ್ಯೂ3 (Audi Q3)

ದರ ಮಾಹಿತಿ: 26.71

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಿರುವ ಜರ್ಮನಿಯ ಕಾರು ತಯಾರಕ ಕಂಪನಿಯಾದ ಆಡಿ ಈ ಬಾರಿ ಕ್ಯೂ 3 ಶ್ರೇಣಿಯ ಕಾರನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿತ್ತು. ಪ್ರಮುಖವಾಗಿ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಬಿಡುಗಡೆ ಮಾಡಿರುವ ಕ್ಯೂ3 ಪ್ರೀಮಿಯಂ ಕಾರು ಬಾಲಿವುಡ್ ಸೆಲೆಬ್ರಿಟಿಗಳಲ್ಲೂ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

10. ಆಡಿ ಎಸ್4 (Audi S4)

10. ಆಡಿ ಎಸ್4 (Audi S4)

ದರ ಮಾಹಿತಿ: 45 ಲಕ್ಷ ರು.

ಲಗ್ಷುರಿ ಸೆಗ್ಮೆಂಟ್‌ನಲ್ಲಿ ಮತ್ತೊಂದು ಪರೀಕ್ಷೆಗೆ ಮುಂದಾಗಿದ್ದ ಆಡಿ ಎಸ್4 ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಹೆಚ್ಚು ಶಕ್ತಿವರ್ಧಕ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪ್ರಮುಖ ಫೀಚರ್ ಆಗಿದೆ.

11. ಬಿಎಂಡಬ್ಲ್ಯು 3 ಸೀರಿಸ್ (BMW 3 Series)

11. ಬಿಎಂಡಬ್ಲ್ಯು 3 ಸೀರಿಸ್ (BMW 3 Series)

ದರ ಮಾಹಿತಿ: 28.9 ಲಕ್ಷ ರು.

ಐಷಾರಾಮಿ ಕಾರು ತಯಾರಕರ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿರುವ ಬಿಎಂಡಬ್ಲ್ಯು ಈ ವರ್ಷ ಆಕರ್ಷಕ ಸೆಡಾನ್ 3ನೇ ಶ್ರೇಣಿಯ ಕಾರನ್ನು ಪರಿಚಯಿಸಿತ್ತು. ಈ ಮೂಲಕ ಲಗ್ಷುರಿ ಸೆಗ್ಮೆಂಟ್‌ನಲ್ಲಿ ಮತ್ತೊಂದು ಅದ್ಭುತ ಕಾರಿನ ಪ್ರವೇಶವಾಗಿತ್ತು. ಇನ್ನೂ ವಿಶೇಷವೆಂದರೆ ಬಿಎಂಡಬ್ಲ್ಯುಗೆ ಸಚಿನ್ ತೆಂಡೂಲ್ಕರ್ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದರು.

12. ಮಿನಿ ಕೂಪರ್ (Mini Cooper)

12. ಮಿನಿ ಕೂಪರ್ (Mini Cooper)

ದರ ಮಾಹಿತಿ: 25 ಲಕ್ಷ ರು.

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಂಪನಿಗಳು ಲಗ್ಗೆಯಿಟ್ಟಿರುವಂತೆಯೇ ಕೆಲವು ನೂತನ ಕಾರುಗಳ ಆಗಮನ ಕೂಡಾ ಆಗಿತ್ತು. ಜರ್ಮನಿಯ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ದೇಶಿಯ ಮಾರುಕಟ್ಟೆಗೆ ಮಿನಿ ಕೂಪರ್ ಕಾರು ಪರಿಚಯಿಸಿತ್ತು.

13. ಮಹೀಂದ್ರ ಕ್ವಾಂಟೊ (Mahindra Quanto)

13. ಮಹೀಂದ್ರ ಕ್ವಾಂಟೊ (Mahindra Quanto)

ದರ ಮಾಹಿತಿ: 5.82 ಲಕ್ಷ ರು.

ಇದು ಪ್ರಸಕ್ತ ಸಾಲಿನಲ್ಲಿ ಬಿಡುಗಡೆಗೊಂಡ ಶ್ರೇಷ್ಠ ಎಸ್‌ಯುವಿ ಕಾರು ಎಂದೇ ಪರಿಗಣಿಸಬಹುದು. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಈ ಪ್ರಯೋಗವು ಭಾರಿ ಯಶಸ್ವಿ ಕಾಣುವಲ್ಲಿ ಯಶಸ್ವಿಯಾಗಿತ್ತು. ತನ್ನ ಜನಪ್ರಿಯ ಕ್ಸೈಲೋ ಪ್ಲಾಟ್ ಫಾರ್ಮ್‌ನಲ್ಲಿಯೇ ಮಿನಿ ಕ್ಸೈಲೋ ತಯಾರಿಸಲಾಗಿತ್ತು. ನಾಲ್ಕು ಮೀಟರ್ ಉದ್ದದೊಳಗೆ ಕಾರು ನಿರ್ಮಿಸಿರುವುದರಿಂದ ತೆರಿಗೆ ರಿಯಾಯಿತಿ ಕೂಡಾ ಪಡೆದುಕೊಳ್ಳಬಹುದಾಗಿದೆ.

14. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga)

14. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga)

ದರ ಮಾಹಿತಿ: 5.89

ದೇಶದ ಮುಂಚೂಣಿಯ ಮ್ಯಾಗಜಿನ್‌ನಿಂದ ವರ್ಷದ ಶ್ರೇಷ್ಠ ಫ್ಯಾಮಿಲಿ

ಕಾರು ಎಂಬ ಪ್ರಶಸ್ತಿಗೆ ಭಾಜನವಾಗಿರುವ ಮಾರುತಿ ಸುಜಿಕಿಯ ಎರ್ಟಿಗಾ ಕಾರು ಕಳೆದ ಎಪ್ರಿಲ್ ತಿಂಗಳಲ್ಲಿ ಲಾಂಚ್ ಆಗಿತ್ತು. ಲೈಫ್ ಯುಟಿಲಿಟಿ ವೆಹಿಕಲ್ (ಎಲ್‌ಯುವಿ) ಸೆಗ್ಮೆಂಟ್‌ನಲ್ಲಿ ಸೇರಿದ ಈ ಕಾರು ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆ.

15. ರೆನೊ ಪಲ್ಸ್ (Renault Pulse)

15. ರೆನೊ ಪಲ್ಸ್ (Renault Pulse)

ದರ ಮಾಹಿತಿ: 5.77 ಲಕ್ಷ ರು.

ರೆನೊ ಇಂಡಿಯಾದಿಂದ ಮೊದಲ ಹ್ಯಾಚ್‌ಬ್ಯಾಕ್ ಕಾರಾದ ಪಲ್ಸ್ ಕೂಡಾ ಇದೇ ವರ್ಷ ಲಾಂಚ್ ಆಗಿತ್ತು. ಫ್ರಾನ್ಸ್‌ನ ಈ ವಾಹನ ತಯಾರಕ ಕಂಪನಿಯಿಂದ ಪ್ರತಿಸ್ಪರ್ದಿಗಳ ವಿರುದ್ಧ ಹೆಚ್ಚು ಒತ್ತಡ ಸೃಷ್ಟಿ ಮಾಡಲು ಸಾಧ್ಯವಾಗಿತ್ತು.

16. ರೆನೊ ಸ್ಕಾಲಾ (Renault Scala)

16. ರೆನೊ ಸ್ಕಾಲಾ (Renault Scala)

ದರ ಮಾಹಿತಿ: 6.99 ಲಕ್ಷ ರು.

ರೆನೊ ಸ್ಕಾಲಾ ಸೆಡಾನ್ ಕಾರು ಇದೇ ವರ್ಷದಲ್ಲಿ ದೇಶದ ರಸ್ತೆಗಿಳಿದಿತ್ತು. ರೆನೊ ಸ್ಕಾಲಾ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ.

17. ಷೆವರ್ಲೆ ಸ್ಪಾರ್ಕ್ (Chevrolet Spark)

17. ಷೆವರ್ಲೆ ಸ್ಪಾರ್ಕ್ (Chevrolet Spark)

ದರ ಮಾಹಿತಿ: 3.16 ಲಕ್ಷ ರು.

ಪರಿಷ್ಕೃತ ಷೆವರ್ಲೆ ಸ್ಪಾರ್ಕ್ ಕೂಡಾ ಗ್ರಾಹಕರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಜನರಲ್ ಮೋಟಾರ್ಸ್‍‌ನ ಈ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಹೆಚ್ಚಿನ ಸೌಲಭ್ಯ ಆಳವಡಿಸಲಾಗಿದೆ.

18. ಸೈಲ್ ಯು-ವಿಎ (Sail U-VA)

18. ಸೈಲ್ ಯು-ವಿಎ (Sail U-VA)

ದರ ಮಾಹಿತಿ: 4.4 ಲಕ್ಷ ರು.

ಷೆವರ್ಲೆಯ ಎಲ್ಲ ಹೊಸತನದ ಸೈಲ್ ಯು-ವಿಎ ತನ್ನ ಚೀನಾದ ಪಾಲುದಾರಿಕೆ ಸಂಸ್ಥೆಯಾದ SAIC ಜತೆಸೇರಿ ಬಿಡುಗಡೆ ಮಾಡಲಾಗಿತ್ತು.

19. ಫೋರ್ಡ್ ಫಿಗೊ (Ford New Figo)

19. ಫೋರ್ಡ್ ಫಿಗೊ (Ford New Figo)

ದರ ಮಾಹಿತಿ: 3.8 ಲಕ್ಷ ರು.

ವರ್ಷನ್ 2 ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್ ಕಾರು ದೇಶದ ಬಿಡುಗಡೆಯಾದ ಬೆನ್ನಲ್ಲೇ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಹಿಂದಿನ ಮಾದರಿಯನ್ನು ಫೋರ್ಡ್ ಕಂಪನಿ 2010ರಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಬಂದಿರುವ ನೂತನ ಫಿಗೊ ಮಾಡೆಲ್ ಪ್ರಮುಖವಾಗಿಯೂ ಕಾಸ್ಮೆಟಿಕ್ಸ್ ಬದಲಾವಣೆಗಳ ಮೂಲಕ ರಸ್ತೆಗಿಳಿದಿದೆ.

20. ಹ್ಯುಂಡೈ ಐ20 (Hyundai New i-20)

20. ಹ್ಯುಂಡೈ ಐ20 (Hyundai New i-20)

ದರ ಮಾಹಿತಿ: 4.7 ಲಕ್ಷ ರು.

ಬಹುನಿರೀಕ್ಷಿತ ಹ್ಯುಂಡೈ ಐ20 ಫ್ಲೂಡಿಕ್ ಹ್ಯಾಚ್ ಬ್ಯಾಕ್ ಅನಿರೀಕ್ಷಿತವಾಗಿ ಸೈಲೆಂಟಾಗಿ ಆಗಮಿಸಿದೆ. 2012ರ ಐ20 ಫ್ಲೂಡಿಕ್ ಸುಮಾರು 12 ಆವೃತ್ತಿಗಳಲ್ಲಿ ದೊರಕಲಿದೆ. ಇದರ ಆರಂಭಿಕ ದರ 4.73 ಲಕ್ಷ ರುಪಾಯಿ. ಟಾಪ್ ಎಂಡ್ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿ ದರ 7.6 ಲಕ್ಷ ರುಪಾಯಿ ಇದೆ.

21. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ (Maruti Suzuki Swift DZire)

21. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ (Maruti Suzuki Swift DZire)

ದರ ಮಾಹಿತಿ: 4.79 ಲಕ್ಷ ರು.

ಮಾರುತಿ ಸುಜುಕಿಯು ತನ್ನ ಜನಪ್ರಿಯ ಸ್ವಿಫ್ಟ್ ಡಿಜೈರ್ ಪರಿಷ್ಕೃತ ಆವೃತ್ತಿಯನ್ನು ಇದೇ ವರ್ಷ ರಸ್ತೆಗಿಳಿಸಿತ್ತು. ಮಾರುತಿಯ ಈ ಕಾಂಪಾಕ್ಟ್ ಸೆಡಾನ್ ಕಾರು ನಾಲ್ಕು ಮೀಟರ್ ಉದ್ದ ಮಾತ್ರವಾಗಿದೆ. ಹೊಸತನದ ಎಕ್ಸ್‌ಟೀರಿಯರ್ ಲುಕ್ ಜನಪ್ರಿಯತೆಗೆ ಕಾರಣವಾಗಿದೆ.

22. ಟಾಟಾ ಇಂಡಿಕಾ ಇ-ವಿ2 (Tata Indica e-v2)

22. ಟಾಟಾ ಇಂಡಿಕಾ ಇ-ವಿ2 (Tata Indica e-v2)

ಮೈಲೇಜ್: 25 kmpl

ಸದ್ಯ ರಸ್ತೆಯಲ್ಲಿರುವ ಕಾರುಗಳ ಪೈಕಿ ಟಾಟಾ ಇಂಡಿಕಾ ಇ-ವಿ2 ಶ್ರೇಷ್ಠ ಮೈಲೇಜ್ ನೀಡುವ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಇಂಡಿಕಾ ಇವಿ2 ಪ್ರತಿ ಲೀಟರ್‌ಗೆ 25 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

23. ಹ್ಯುಂಡೈ ಎಲಂಟ್ರಾ (Hyundai Elantra)

23. ಹ್ಯುಂಡೈ ಎಲಂಟ್ರಾ (Hyundai Elantra)

ದರ ಮಾಹಿತಿ: 12.51 ಲಕ್ಷ ರು.

ದೇಶದ ಮಾರುಕಟ್ಟೆಯಲ್ಲಿ ಮಾರುತಿಗೆ ಪ್ರಬಲ ಪ್ರತಿಸ್ಪರ್ದಿಯೆನಿಸಿರುವ ಹ್ಯುಂಡೈ ಎಲಂಟ್ರಾ ಮೂಲಕ ತಿರುಗೇಟು ನೀಡಲು ಪ್ರಯತ್ನಿಸಿತ್ತು. ಟೊಯೊಟಾ ಕರೊಲ್ಲ ಹಾಗೂ ಸ್ಕೋಡಾ ಲೌರಾಗಳಂತಹ ಎದುರಾಳಿಗಳನ್ನು ಹಿಂದಿಕ್ಕಿದ್ದ ಎಲಂಟ್ರಾ, ಸೆಡಾನ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರೆನಿಸಿತ್ತು.

Top Car Launches In 2012

Top Car Launches In 2012

ಮೇಲೆ ಕೊಡಲಾದ 2012ನೇ ಸಾಲಿನಲ್ಲಿ ಬಿಡುಗಡೆಯಾದ ಎಲ್ಲ 23 ಕಾರುಗಳ ಸಂಪೂರ್ಣ ಪಟ್ಟಿ ಕಾರು ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆಯೆಂಬ ಭರವಸೆಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ತಂಡ ಹೊಂದಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಅನುಭವವನ್ನು ಹಂಚಿಕೊಳ್ಳಿರಿ

English summary
2012 was a very intresting year for Indian automobile industry. 2012 has seen almost every major car company in the country launch new models. Here are some top launches from 2012. Related Articles

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more