ಮಹೀಂದ್ರ ಗ್ರೂಪಿಗೆ ಆನಂದ್ ಮಹೀಂದ್ರ ಚೇರ್ಮನ್?

ಮಹೀಂದ್ರ ಗ್ರೂಪಿನ ಚೇರ್ಮನ್ ಕೇಶುಬ್ ಮಹೀಂದ್ರ ನಿವೃತ್ತಿ ನಂತರ ಕಂಪನಿಯ ಈ ಅತ್ಯುನ್ನತ ಸ್ಥಾನವನ್ನು ಆನಂದ್ ಮಹೀಂದ್ರ ಅಲಂಕರಿಸಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಕಂಪನಿಯ ವಾರ್ಷಿಕ ಸಭೆಯಲ್ಲಿ ತನ್ನ ನಿವೃತ್ತಿ ನಿರ್ಧಾರ ಘೋಷಿಸುವುದಾಗಿ ಕೇಶುಬ್ ತಿಳಿಸಿದ್ದಾರೆ.

ಮಹೀಂದ್ರ ಕಂಪನಿಯ ಪ್ರಗತಿಯ ಪ್ರಮುಖ ರೂವಾರಿಯಾದ ಕೇಶುಬ್ 1963ರಿಂದ ಮಹೀಂದ್ರ ಗ್ರೂಪಿನ ಚೇರ್ಮನ್ ಸ್ಥಾನವನ್ನು ಅಲಂಕರಿಸಿದ್ದರು. ಕೇಶುಬ್ ನೇತೃತ್ವದಲ್ಲಿ ಕಂಪನಿಯು ವಾಹನೋದ್ಯಮಕ್ಕೆ ಪ್ರವೇಶಿಸಿದ ನಂತರ ಹಲವು ವಲಯಗಳಲ್ಲಿ ಪಾರಮ್ಯ ಮೆರೆದಿದೆ.

ಚೇರ್ಮನ್ ಸ್ಥಾನಕ್ಕೆ ರಾಜಿನಾಮೆ ನೀಡಿದ ಮೇಲೂ ವಿಶ್ರಾಂತ ಮುಖ್ಯಸ್ಥರಾಗಿ ಕೇಶುಬ್ ಕಂಪನಿಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. "ಬಿಸಿನೆಸ್ ಲೀಡರುಗಳಿಗೆ ಕೇಶುಬ್ ರೋಲ್ ಮಾಡೆಲ್. ಸಾಮಾಜಿಕ ಬದ್ದತೆ, ತತ್ವಾದರ್ಶಗಳ ಮೂಲಕ ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ" ಎಂದು ಮಾವನ ಬಗ್ಗೆ ಆನಂದ್ ಮಹೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಕಳೆದ 21 ವರ್ಷಗಳಿಂದ ಕೇಶುಬ್ ಮಹೀಂದ್ರ ಜೊತೆ ಕೆಲಸ ಮಾಡುವ ಸದಾವಕಾಶ ನನಗೆ ದೊರಕಿದ್ದು, ಅವರಿಂದ ಸಾಕಷ್ಟು ಅತ್ಯುನ್ನತ ಸಂಗತಿಗಳನ್ನು ಕಲಿತಿದ್ದೇನೆ. ನಿವೃತ್ತಿಯ ನಂತರವೂ ಅವರ ಸಲಹೆ, ಸೂಚನೆ, ಮಾರ್ಗದರ್ಶನದ ಅಗತ್ಯ ನಮಗಿದೆ" ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

ಆಟೋಮೊಬೈಲ್ಸ್, ಟ್ರಾಕ್ಟರ್ಸ್, ವಾಹನ ಬಿಡಿಭಾಗಗಳ ಉದ್ದಿಮೆಗಳಲ್ಲಿ, ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್, ಹಣಕಾಸು ಸೇವಾಸಂಸ್ಥೆ ಮತ್ತು ವೈದ್ಯಕೀಯ ಸೆಕ್ಟರ್ ಸೇರಿದಂತೆ ಹಲವು ವಿಭಾಗಗಳಲ್ಲಿ ಮಹೀಂದ್ರ ಗ್ರೂಪ್ ಕಂಪನಿಯು ಕಾರ್ಯನಿರ್ವಹಿಸುತ್ತಿದೆ.

ಜೊತೆಗೆ ಮಹೀಂದ್ರವು ದೇಶದ ಪ್ರಮುಖ ಯುಟಿಲಿಟಿ ವಾಹನ ತಯಾರಿಕಾ ಕಂಪನಿಯಾಗಿದೆ. ಬೊಲೆರೊ, ಸ್ಕಾರ್ಪಿಯೊ, ಕ್ಷೈಲೊ, ಎಕ್ಸ್ ಯುವಿ 500 ಮುಂತಾದ ಎಸ್‌ಯುವಿಗಳನ್ನು, ಕೃಷಿ ಕ್ಷೇತ್ರಕ್ಕೆ ಅವಶ್ಯವಿರುವ ಟ್ರಾಕ್ಟರ್, ಸಾರಿಗೆ ಕ್ಷೇತ್ರಕ್ಕೆ ಬಸ್, ಟ್ರಕ್ ಮತ್ತು ಹಗುರ ವಾಣಿಜ್ಯ ವಾಹನಗಳನ್ನು ಕಂಪನಿಯು ನಿರ್ಮಾಣ ಮಾಡುತ್ತಿದೆ. ವೆರಿಟೊ ಮೂಲಕ ಪ್ರಯಾಣಿಕ ಕಾರು ಮಾರುಕಟ್ಟೆಗೂ ಕಂಪನಿ ಲಗ್ಗೆಯಿಟ್ಟಿದೆ.

Most Read Articles

Kannada
English summary
Anand Mahindra, the Vice Chairman of the Mahindra Group is set to take the top job later this year after chairman Keshub Mahindra announced his decision to retire. The Mahindra Group has emerged as a leader in several sectors after starting as an automobile manufacturer under the leadership of Keshub Mahindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X