ಆಡಿ ಕ್ಯೂ3 ಕ್ರಾಸೊವರ್ ಬಂತು, ದರ 26.21 ಲಕ್ಷ ರು.

Posted By:

ಐಷಾರಾಮಿ ಕಾರು ಕಂಪನಿ ಆಡಿ, ದೇಶದ ರಸ್ತೆಗೆ ಆಡಿ ಕ್ಯೂ3 ಎಂಬ ನೂತನ ಸಣ್ಣ ಕ್ರಾಸೊವರ್ ಕಾರನ್ನು ಪರಿಚಯಿಸಿದೆ. ಇದರ ಆರಂಭಿಕ ಎಕ್ಸ್ ಶೋರೂಂ ದರ 26.21 ಲಕ್ಷ ರುಪಾಯಿ. ಆಡಿ ಕ್ಯೂ3 ಹೈಎಂಡ್ ಆವೃತ್ತಿಯ ಎಕ್ಸ್ ಶೋರೂಂ ದರ 31.41 ಲಕ್ಷ ರುಪಾಯಿ ಇದೆ.

ನೂತನ ಆಡಿ ಕ್ಯೂ3 ಕಾರು ದೇಶದಲ್ಲಿರುವ ಕಂಪನಿಯ 19 ಅಧಿಕೃತ ಶೋರೂಂಗಳಲ್ಲಿ ದೊರಕಲಿದೆ. ಆದರೆ ಕಂಪನಿಯು ಆರಂಭಿಕವಾಗಿ ಕೇವಲ 500 ಆಡಿ ಕ್ಯೂ3 ಕಾರು ಬುಕ್ಕಿಂಗ್ ಮಾಡಲು ಲಭ್ಯವಿದೆ. ಶೀಘ್ರದಲ್ಲಿ ಆಡಿ ಕ್ಯೂ3 ಕಾರು ತಮ್ಮದಾಗಿಸಿಕೊಳ್ಳಬೇಕೆಂದು ಬಯಸುವರು ತ್ವರೆ ಮಾಡಬಹುದು.

To Follow DriveSpark On Facebook, Click The Like Button

ಕಂಪನಿಯು ಈಗ ಕ್ಯೂ3 ಆವೃತ್ತಿಯನ್ನು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಪರಿಚಯಿಸಿದೆ. ನೂತನ ಕ್ಯೂ3 ಕಾರು 2.0 ಟಿಡಿಐ ಕ್ಯೂಟ್ರೊ ಡೀಸೆಲ್ ಎಂಜಿನ್ ಹೊಂದಿದೆ. ಇದು 177 ಪಿಎಸ್ ಪವರ್ ಮತ್ತು 380 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಕ್ಯೂ3 ಕಾರು 7 ಸ್ಪೀಡಿನ ಡ್ಯೂಯಲ್ ಕ್ಲಚ್ ಡಿಎಸ್ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಆಡಿ ಕಂಪನಿಯು ನೂತನ ಕ್ಯೂ3 ಮೂಲಕ ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಸಮರ್ಥ ಪೈಪೋಟಿ ಒಡ್ಡಲಿದೆ. ಯಾಕೆಂದರೆ ಈ ಕಾರು ಬಿಎಂಡಬ್ಲ್ಯುವಿನ ಎಕ್ಸ್1 ಆವೃತ್ತಿಗೆ ನೇರ ಎದುರಾಳಿ. ಬಿಎಂಡಬ್ಲ್ಯು ಎಕ್ಸ್1 ಕಾರಿಗಿಂತ ಆಡಿ ಕ್ಯೂ3 ಕೊಂಚ ದುಬಾರಿಯಾಗಿದ್ದರೂ, ನೂತನ ಕ್ವಾಟ್ರೊ ಆಲ್ ವೀಲ್ ಡ್ರೈವ್ ಸಿಸ್ಟಮ್ ಕ್ಯೂ3 ಕಾರಿಗೆ ಬೆಂಬಲ ನೀಡಿದೆ.

ನೂತನ ಆಡಿ ಕ್ಯೂ3 ಮೂಲಕ ದೇಶದ ಐಷಾರಾಮಿ ಸ್ಪೋರ್ಟ್ಸ್ ಯುಟಿಲಿಟಿ ಮಾರುಕಟ್ಟೆಯು ಹೆಚ್ಚು ಶಕ್ತಿಶಾಲಿಯಾಗಿದೆ. "ನೂತನ ಆಡಿ ಕ್ಯೂ3 ಕಾರು ಕಂಪನಿಯ ಅಗ್ರಸ್ಥಾನ ತಲುಪುವ ಕಾರ್ಯತಂತ್ರಕ್ಕೆ ಸಾಥ್ ನೀಡಲಿದೆ" ಎಂದು ಆಡಿ ಇಂಡಿಯಾ ಮುಖ್ಯಸ್ಥ ಮೈಕಲ್ ಪಾರ್ಷ್ಕೆ ಹೇಳಿದ್ದಾರೆ.

English summary
Audi has launched compact luxury SUV Audi Q3 in India at Rs.26.21 lakhs. The new compact suv, taking BMW's X1 head on. Mercedes-Benz, the third German luxury player does not have a competing product in this segment that is expected to generate good volumes.
Story first published: Thursday, June 7, 2012, 10:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark