ಬೆಂಗಳೂರಿಗರು ಫುಲ್‌ಖುಷ್, ವಾರಾಂತ್ಯಕ್ಕೆ ಆಟೋಕ್ರಾಸ್
ರಾಷ್ಟ್ರೀಯ ಆಟೊಕ್ರಾಸ್ ಚಾಂಪಿಯನ್‌ಷಿಪ್ ಕಾರು ಹಾಗೂ ಬೈಕ್ ರೇಸ್ ಸ್ಪರ್ಧೆಯ ಪ್ರಥಮ ಆವೃತ್ತಿ ಇದಾಗಿದೆ. ಈ ಸ್ಪರ್ಧೆಯ ಮೊದಲ ಸುತ್ತು ಬೆಂಗಳೂರು ಮಾತ್ರವಲ್ಲದೇ ಚೆನ್ನೈ, ಕೊಯಮತ್ತೂರು, ಕೊಚ್ಚಿನ್ ಮತ್ತು ಮುಂಬಯಿನಲ್ಲೂ ನಡೆಯಲಿದೆ. ಅಂತಿಮ ಸುತ್ತು ಡಿಸೆಂಬರ್ ತಿಂಗಳಲ್ಲಿ ಮತ್ತೆ ಬೆಂಗಳೂರಿನಲ್ಲಿ ನಡೆಯಲಿದೆ.
ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ(ಎಫ್ಎಂಎಸ್‌ಸಿಐ)ಆಯೋಜಿಸಿದ ಈ ಕಾರು ಮತ್ತು ಬೈಕು ರೇಸಿನಲ್ಲಿ ಹರ್ಲಿ ಡೇವಿಡ್‌ಸನ್ ಮತ್ತು ಹಲವು ವಿದೇಶಿ ಬೈಕುಗಳು ಮತ್ತು ಕಾರುಗಳು ಭಾಗವಹಿಸಲಿವೆ. ಸ್ವಿಫ್ಟ್, ಎಸ್ಟಿಮ್ ಹ್ಯಾಚ್ ಬ್ಯಾಕ್ ಕಾರುಗಳಿಂದ ಹಿಡಿದು, ಸೆಡಾನ್, ಮಲ್ಟಿ ಪರ್ಪೊಸ್ ವೆಹಿಕಲ್ ಕೂಡ ಈ ರೇಸಿಂಗ್‌ನಲ್ಲಿರಲಿವೆ.
ಕೇವಲ ಮೋಟರ್ ಸ್ಪೋರ್ಟ್ ಮಾತ್ರವಲ್ಲದೇ ರಾಕ್ ಬ್ಯಾಂಡ್ ಪರಿಕ್ರಮ ತಂಡವೂ ವಾಹನ ಸಾಹಸ ಪ್ರದರ್ಶಿಸಲಿದೆ. ಕಾರನ್ನು ನಿಯಂತ್ರಿಸುವ ಡ್ರೈವರ್ ಕೌಶಲ್ಯ ಈ ರೇಸಿನಲ್ಲಿ ಪ್ರಮುಖ ಮಾನದಂಡವಾಗಲಿದೆ.
ಈಗಾಗಲೇ ಸುಮಾರು ನೂರು ಮಂದಿ ಹೆಸರು ನೊಂದಾಯಿಸಿದ್ದಾರೆ. ಅದರಲ್ಲಿ 12 ಮಹಿಳಾ ಸ್ಪರ್ಧಿಗಳೂ ಕೂಡ ಇದ್ದಾರೆ. ನಿಮಗೂ ಭಾಗವಹಿಸುವ ಬಯಕೆಯಿದ್ದರೆ ಇಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









