ಷೆವರ್ಲೆ ಸೈಲ್ ಯುವಿಎ ಲಾಂಚ್; ದರ 4.44 ಲಕ್ಷ ರು

Posted By:

ಭಾರತೀಯ ಮಾರುಕಟ್ಟೆಯನ್ನು ಪ್ರಮುಖವಾಗಿಯೂ ಟಾರ್ಗೆಟ್ ಮಾಡಿಕೊಂಡಿರುವ ಅಮೆರಿಕದ ಪ್ರತಿಷ್ಠಿತ ಕಾರು ತಯಾರಕ ಕಂಪನಿ ಜನರಲ್ ಮೋಟಾರ್ಸ್, ಈ ಹಬ್ಬದ ಸಂಭ್ರಮದಲ್ಲಿ ಷೆವರ್ಲೆ ಸೈಲ್ ಯುವಿಎ ಕಾರನ್ನು ಲಾಂಚ್ ಮಾಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯ ಎಂಜಿನ್‌ಗಳಲ್ಲಿ ಒಟ್ಟು ಏಳು ವೆರಿಯಂಟ್‌ಗಳಲ್ಲಿ ಗ್ರಾಹಕರನ್ನು ತಲುಪಲಿದ್ದು, ದೆಹಲಿ ಎಕ್ಸ್ ಶೋರೂಂಗಳಲ್ಲಿ 4.44 ಲಕ್ಷ ರೂಪಾಯಿಗಳಾಗಿರಲಿದೆ.

ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಪ್ರಸ್ತುತ ಷೆವರ್ಲೆ ಸೈಲ್ ಕಾರಿಗೆ ಭಾರಿ ಬೇಡಿಕೆ ಕಂಡುಬಂದಿದ್ದು, ಇದೀಗ ಭಾರತೀಯ ಮಾರುಕಟ್ಟೆಯಲ್ಲೂ ಸದ್ದು ಮಾಡುವ ನಿರೀಕ್ಷೆಯಿದೆ. ಡ್ಯುಯಲ್ ಕಲರ್ ಫ್ಯಾಬ್ರಿಕ್, ಕ್ರೋಮ್ ಹೈಲೈಟ್ಸ್ ಹಾಗೂ 25ಕ್ಕಿಂತಲೂ ಹೆಚ್ಚು ಸ್ಟಾರ್ಟ್ ಸ್ಟೋರೆಜ್‌ ಫೀಚರ್‌ಗಳೊಂದಿಗೆ ಆಗಮನವಾಗಿದೆ. ಅಲ್ಲದೆ 248 ಲೀಟರ್ ವೊಲ್ಯಮ್ ಬೂಟ್‌ ಹೊಸ ಯುವಿಎಯಿಂದ ಸಾಮಾಗ್ರಿಗಳನ್ನು ಸಾಗಿಸಲು ಹೆಚ್ಚಿನ ಸ್ಥಳವಕಾಶ ದೊರಕಲಿದೆ.

To Follow DriveSpark On Facebook, Click The Like Button

ವಾರಂಟಿ: ಷೆವರ್ಲೆ ಸೈಲ್‌ಗೆ ಜಿಎಂ ಆಕರ್ಷಕ ಆಫರ್ ಮುಂದಿರಿಸಿದ್ದು, 1,00,000 ಕಿಲೋ ಮೀಟರ್ ಹಾಗೂ ಮೂರು ವರ್ಷಗಳ ವಾರಂಟಿ ದೊರಕಲಿದೆ. ಇದರ ಜತೆ ಐದು ವರ್ಷಗಳ ಪವರ್‌ಟ್ರೈನ್ ಸುರಕ್ಷತೆ ವಾರಂಟಿ ಹಾಗೂ 3 ವರ್ಷಗಳ ಷೆವರ್ಲೆ ಭರವಸೆ ಕೂಡಾ ದೊರಕಲಿದೆ.

ಷೆವರ್ಲೆ ಸೈಲ್ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

English summary
Chevrolet Sail UVA has been launched with prices starting at Rs 4.44 lakh (ex-showroom Delhi) and will be available as both petrol and diesel models in a total of seven variants
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark