ಫೇಸ್‌ಬುಕ್ ಜನಕನ ಮಾಜಿ ಮತ್ತು ಹಾಲಿ ಪ್ರೇಯಸಿಯರು

Posted By:

ರಾಜ್ಯದ ಮುಖ್ಯಮಂತ್ರಿಯಾಗಿ ಸನ್ಮಾನ್ಯ ಡಿವಿ ಸದಾನಂದ ಗೌಡರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ಅವರ ಪ್ರೇಯಸಿ ಬಗ್ಗೆ ಬರೆದಿದ್ದೇವು. ಇತ್ತೀಚೆಗೆ ಮದುವೆಯಾದ ಫೇಸ್‌ಬುಕ್ ಜನಕ ಮಾರ್ಕ್ ಝುಕರ್‌ಬರ್ಗ್ ಮಾಜಿ ಮತ್ತು ಹಾಲಿ ಪ್ರೇಯಸಿಯರ ಕುರಿತು ಕನ್ನಡ ಡ್ರೈವ್ ಸ್ಪಾರ್ಕ್ ಬೆಳಕುಚೆಲ್ಲುತಿದೆ.

ಫೇಸ್‌ಬುಕ್ ತಾಣದ ಸಂಸ್ಥಾಪಕ ಮಾರ್ಕ್ ಝಕರ್‌ಬರ್ಗ್ ಪ್ರೇಯಸಿ ಪ್ರಿಸಿಲ್ಲಾ ಚಾನ್ ಜೊತೆ ಇತ್ತೀಚೆಗೆ ಮದುವೆಯಾಗಿದ್ದಾರೆ. ಇದೇ ಸಮಯದಲ್ಲಿ ಅವರ ಮೊದಲ ಕಾರು ಮತ್ತು ಈಗಿನ ಕಾರು(ಮಾಜಿ ಪ್ರೇಯಸಿ ಮತ್ತು ಹಾಲಿ ಪ್ರೇಯಸಿ) ಯಾವುದೆಂದು ನಿಮಗೆ ಗೊತ್ತೆ?.

ಮಾರ್ಕ್ ಝಕರ್‌ಬರ್ಗ್ ಮೊದಲ ಕಾರು ಟೊಯೊಟಾ ಕ್ಯಾಮ್ರೆ. ಈ ಮೊದಲ ಕಾರಿನ ವಿಡಿಯೋ ಯೂಟ್ಯೂಬಿನಲ್ಲಿ ಬಹುಜನರ ವೀಕ್ಷಣೆ ಪಡೆದುಕೊಳ್ಳುತಿದೆ. ಅದರ ಸೈಡ್ ಮಿರರಿಗೆ ಅಂಟಿಸಿರುವ ಗಮ್ ಟೇಪ್, ಬಾಡಿ ಮೇಲೆ ಗೀರುಗಳು ಕಾಣಸಿಗುತ್ತವೆ. ಬಹುಶಃ ಆತ ತನ್ನ ಕಾಲೇಜು ದಿನಗಳಲ್ಲಿ ಈ ಕಾರನ್ನು ಬೇಕಾಬಿಟ್ಟಿಯಾಗಿ ಡ್ರೈವ್ ಮಾಡಿರಬೇಕು.

ಯೂಟ್ಯೂಬ್ ವಿಡಿಯೋದಲ್ಲಿ ಸಿಕ್ಕ ಮಾರ್ಕ್ ಝಕರ್‌ಬರ್ಗ್ ಟೊಯೊಟಾ ಕ್ಯಾಮ್ರಿ ಕಾರಿನ ರಿಜಿಸ್ಟ್ರೇಷನ್ ಸಂಖ್ಯೆ 3ECY551. ವಾಹನ ಲೋಕದಲ್ಲಿ ಝಕರ್ ಬರ್ಗ್ ನೂತನ ಪ್ರೇಯಸಿ ಅಕ್ಯೂರಾ ಟಿಎಸ್ಎಕ್ಸ್. ಇದೇ ಕಾರಲ್ಲಿ ಮಾರ್ಕ್ ಝಕರ್‌ಬರ್ಗ್ ಮತ್ತು ಪ್ರಿಸಿಲ್ಲಾ ಚಾನ್ ಸಾಕಷ್ಟು ಸುತ್ತಾಡಿದ್ದಾರೆ.

ಇದು ಹೋಂಡಾ ಪ್ರೀಮಿಯಂ ಕಾರು ವಿಭಾಗದ ಎಂಟ್ರಿ ಲೆವೆಲ್ ಐಷಾರಾಮಿ ಸೆಡಾನ್ ಕಾರಾಗಿದೆ. ಇದರ ದರ ಸುಮಾರು 30 ಸಾವಿರ ಡಾಲರ್. ಇದು 2.4 ಲೀಟರ್ ಇನ್ ಲೈನ್ 4 ಸಿಲಿಂಡರ್ ಎಂಜಿನ್ ಮತ್ತು 5 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಷ್‌ಮಿಷನ್ ಹೊಂದಿದೆ.

ವಾಹನ ವೆಬ್ಸೈಟಿಗೆ ವಾಹನಗಳೇ ಸರ್ವಸ್ವ. ಆದರೆ ಬರೀ ಕಾರು, ಬೈಕು, ಟ್ರಕ್, ಎಂಜಿನ್, ಮೈಲೇಜ್ ಇತ್ಯಾದಿ ವಿಷಯಗಳು ಓದುಗರಿಗೆ ಬೋರ್ ಹೊಡೆಸದಿರಲಿ ಎಂದು ಆಗೋಮ್ಮೆ ಈಗೋಮ್ಮೆ ಸೆಲೆಬ್ರಿಟಿಗಳ ವಾಹನಗಳನ್ನು ಪರಿಚಯಿಸುತ್ತೇವೆ. ವಾಹನಗಳನ್ನೇ ಪ್ರೇಯಸಿ, ಪ್ರಿಯತಮ, ನಲ್ಲ, ನಲ್ಲೆ ಎಂದೆಲ್ಲ ಕರೆಯುತ್ತೇವೆ. ಇದನ್ನು ನೀವು ಲೈಕ್ ಮಾಡುವಿರೆಂಬ ನಂಬಿಕೆ ನಮ್ಮದು.

ಅಂದ ಹಾಗೆ, ಕನ್ನಡ ಚಿತ್ರನಟ ದರ್ಶನ್ ಹೊಸ ಪ್ರೇಯಸಿ ಬಗ್ಗೆ ನಿಮಗೆ ಗೊತ್ತಿದೆಯೇ?

English summary
Facebook founder and CEO Mark Zuckerberg who got married last day reportedly had a Toyota Camry as his first car. Currently, Zuckerberg owns an Acura TSX, an entry-level luxury sedan from Honda's premium car division. The $30,000 priced car is powered by a 2.4 litre in-line 4 cylinder engine mated to a 5 -speed automatic transmission.
Story first published: Tuesday, May 22, 2012, 13:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark