ಭೀಕರ ಅಪಘಾತದಲ್ಲಿ ಫೆರಾರಿ ಕಾರು ಚಿಂದಿ

Posted By:

ರಷ್ಯಾದಲ್ಲಿ ಮತ್ತೊಂದು ಭೀಕರ ಸ್ಪೋರ್ಟ್ಸ್ ಕಾರು ಅಪಘಾತಗೊಂಡಿದೆ. ಅಪಘಾತದ ಭೀಕರತೆಗೆ ಸಾಕ್ಷಿಯಾಗಿ ಗಟ್ಟಿಮುಟ್ಟಿಗೆ ಹೆಸರುವಾಸಿಯಾದ ಫೆರಾರಿ 616 ಸ್ಕಗೆಲ್ಟಿ ಕಾರು ಎರಡು ಹೋಳಾಗಿ ಚಿಂದಿಯಾಗಿದೆ. ಸೂಪರ್ ಕಾರುಗಳ ಸುರಕ್ಷತೆಯ ವಿಶೇಷತೆಯಿಂದಾಗಿ ಪುಣ್ಯಕ್ಕೆ ಕಾರಿನಲ್ಲಿದ್ದ ಯಾರಿಗೂ ಯಾವುದೇ ಗಂಭೀರ ಗಾಯಗಳು ಆಗಿಲ್ಲ.

ಫೆರಾರಿ ಕಾರೊಂದು ಅಫಘಾತದಲ್ಲಿ ಮೂತಿ ತುಂಡುಮಾಡಿಕೊಂಡಿದ್ದು ಬಹುಶಃ ಇದೇ ಮೊದಲು. ಅಪಘಾತದ ಸಮಯದಲ್ಲಿ ಚಾಲಕ ಮಾತ್ರವಲ್ಲದೇ ಮೂರು ಪ್ರಯಾಣಿಕರೂ ಇದ್ದರು. ಅವರಿಗೆಲ್ಲ ಸಣ್ಣಪುಟ್ಟ ಗಾಯಗಳಾಗಿವೆ.

ಫೆರಾರಿ ಕಂಪನಿಯು 612 ಆವೃತ್ತಿಯನ್ನು ಈಗ ಉತ್ಪಾದಿಸುವುದಿಲ್ಲ. ಕಳೆದ ವರ್ಷವೇ ಈ ಆವೃತ್ತಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇದು 5.8 ಲೀಟರಿನ ವಿ12 ಎಂಜಿನ್ ಹೊಂದಿದೆ. ಇದು 540 ಪಿಎಸ್ ಪವರ್ ಮತ್ತು 588 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರಲ್ಲಿ ಗಂಟೆಗೆ ಗರಿಷ್ಠ 315 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

ಇತ್ತೀಚೆಗೆ ಇಟಲಿಯಲ್ಲಿ ಲಂಬೊರ್ಗಿನಿ ಮುರ್ಸಿಲಾಗೊ, ಚಾಲಕನ ಹಿಡಿತತಪ್ಪಿ ಭೀಕರವಾಗಿ ಅಪಘಾತಗೊಂಡಿತ್ತು. ಈ ಕಾರು ಶೋರೂಂ ಹೊರಗೆ ನಿಲ್ಲಿಸಿದ ಹತ್ತು ಹೊಸ ಬಿಎಂಡಬ್ಲ್ಯು ಸೂಪರ್ ಬೈಕುಗಳಿಗೆ ಡಿಕ್ಕಿ ಹೊಡೆದು ಹಲವು ಕೋಟಿ ರುಪಾಯಿ ನಷ್ಟವುಂಟುಮಾಡಿತ್ತು.

ಇದನ್ನು ಓದಿ ನೋಡಿ: ರೋಡ್ ವಿಲನ್ ನೀನಾಗಬೇಡ ಗೆಳೆಯ..

English summary
Ferrari 612 Scaglietti sports car crashed in Russia on last Saturday due to over speed. Driver lost control of the car and slammed into a metal pole on the roadside. Thankfully no major injuries happened to the driver and passengers.
Story first published: Tuesday, July 17, 2012, 9:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark