ಕಾಂಪ್ಯಾಕ್ಟ್ ಅಂಬಾಸಡರ್ ಸೆಡಾನ್ ಕಾರ್ ಬರಲಿದೆಯಂತೆ!

Posted By:
To Follow DriveSpark On Facebook, Click The Like Button
HM to Launch compact Ambassador by 2012
ಒಂದು ಕಾಲದಲ್ಲಿ ದೇಶದ ರಸ್ತೆಯಲ್ಲಿ ರಾಜನಾಗಿ ಮೆರೆದ ಐಕಾನಿಕ್ ಅಂಬಾಸಡರ್ ಕಾರುಗಳನ್ನು ಈಗ ಕೇಳುವರಿಲ್ಲ. ಆದರೆ ಈ ವರ್ಷ ಹಿಂದೂಸ್ತಾನ್ ಮೋಟರ್ಸ್ ಅಂಬಾಸಡರ್ ಕಾರುಗಳಿಗೆ ಪುನರ್ಜನ್ಮ ನೀಡುವ ನಿರೀಕ್ಷೆಯಿದೆ. ನೂತನ ಕಾಂಪ್ಯಾಕ್ಟ್ ಸೆಡಾನ್ ಅಂಬಾಸಡರ್ ಕಾರೊಂದು ಈ ವರ್ಷ ದೇಶದ ರಸ್ತೆಗಿಳಿಯಲಿದೆ ಎಂದು ವರದಿಗಳು ಹೇಳಿವೆ.

ಕಾಂಪ್ಯಾಕ್ಟ್ ಸೆಡಾನ್ ಆವೃತ್ತಿಯಾಗಿ ಆಗಮಿಸಲಿರುವ ಅಂಬಾಸಡರ್ ಉದ್ದ ನಾಲ್ಕು ಮೀಟರಿಗಿಂತ ಕಡಿಮೆ ಇರಲಿದೆ. ಭಾರತ ಸರಕಾರ ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಕಾರುಗಳಿಗೆ ಅಬಕಾರಿ ಸುಂಕ ವಿನಾಯಿತಿ ಮಾಡಿರುವುದರ ಲಾಭ ಪಡೆಯಲು ಅಂಬಾಸಡರ್ ನಿರ್ಧರಿಸಿದೆಯಂತೆ.

ವರದಿಗಳ ಪ್ರಕಾರ ನೂತನ ಅಂಬಾಸಡರ್ ಕಾರು 1.8 ಲೀಟರ್ ಪೆಟ್ರೋಲ್ ಅಥವಾ ಸಿಎನ್ ಜಿ ಎಂಜಿನ್ ಹೊಂದಿರಲಿದೆಯಂತೆ. ಡೀಸೆಲ್ ಆವೃತ್ತಿಯು 1.5 ಲೀಟರ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಆದ್ರೆ ಹೊಸ ಅಂಬಾಸಡರ್ ಕಾರಿನಲ್ಲಿ ಕಾಮನ್ ರೈಲ್ ಡೀಸೆಲ್ ಎಂಜಿನ್ ಇರುವುದೇ ಎಂದು ಖಚಿತವಾಗಿಲ್ಲ.

ಈಗ ದೇಶದ ರಸ್ತೆಯಲ್ಲಿ ಹೆಚ್ಚು ಮಾಡರ್ನ್ ಆಗಿರುವ ಮಾರುತಿ ಡಿಜೈರ್, ಟಾಟಾ ಮಾಂಝಾ ಇತ್ಯಾದಿ ಕಾಂಪ್ಯಾಕ್ಟ್ ಸೆಡಾನ್ ಕಾರುಗಳಿವೆ. ಈ ಸಮಯದಲ್ಲಿ ಐಕಾನಿಕ್ ಅಂಬಾಸಡರ್ ಕಾಂಪ್ಯಾಕ್ಟ್ ಸೆಡಾನ್ ಕಾರುಗಳು ಬೇಡಿಕೆ ಪಡೆದುಕೊಳ್ಳಬಹುದೇ? ಕಾದುನೋಡಬೇಕಿದೆ.

English summary
Country's oldest car maker Hindustan motors to launch compact Ambassador by this year. The new ambassador will be come up below 4 meter category to crab government duty exemption. The compact ambassador will equipp with 1.5 liter common rail diesel engine.
Story first published: Friday, February 10, 2012, 14:53 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark