ಹ್ಯುಂಡೈ ಇಯಾನ್ ಮೈಲೇಜ್ ಲೀಟರಿಗೆ 26.3 ಕಿ.ಮೀ.!
ಈ ಸಣ್ಣಕಾರು ಪ್ರತಿಲೀಟರ್ ಪೆಟ್ರೋಲಿಗೆ 26.3 ಕಿ.ಮೀ. ಮೈಲೇಜ್ ನೀಡುವುದಾಗಿ ಪಿಲಿಫೈನಿನಲ್ಲಿರುವ ಇಯಾನ್ ವಿತರಕರು ಹೇಳುತ್ತಾರೆ. ಆದರೆ ಭಾರತದಲ್ಲಿ ಈ ಕಾರಿನ ಮೈಲೇಜ್ ಪ್ರತಿಲೀಟರಿಗೆ 21.3 ಕಿ.ಮೀ. ಇದೆ. ಆದರೆ ಪಿಲಿಫೈನ್‌ನಲ್ಲಿ ನಡೆಸಿದ ಪರೀಕ್ಷಾರ್ಥ ಚಾಲನೆಯಲ್ಲಿ ಈ ಕಾರು 26.3 ಕಿ.ಮೀ. ಮೈಲೇಜ್ ನೀಡಿರುವುದು ಸಾಬೀತಾಗಿದೆಯಂತೆ.
ದೇಶದ ಮಾರುಕಟ್ಟೆಗೆ ಪರಿಚಯಿಸಿದ 800ಸಿಸಿ ಎಂಜಿನ್ ಆಯ್ಕೆಯಲ್ಲೇ ಅಲ್ಲಿಗೂ ಇಯಾನ್ ಪರಿಚಯಿಸಲಾಗಿದೆ. ಇದು 55 ಹಾರ್ಸ್ ಪವರ್ ಮತ್ತು 75 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇತ್ತೀಚೆಗೆ ದೇಶದಲ್ಲೂ ಹ್ಯುಂಡೈ ಇಯಾನ್ ಮಾರಾಟ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ.
ದೇಶದ ಬದಲಾದಂತೆ ಮೈಲೇಜ್ ಬದಲಾಯಿಸಿಕೊಂಡ ಇಯಾನ್ ಕುರಿತು ಕೊಂಚ ಅಚ್ಚರಿ ಮೂಡುತ್ತದೆ. ಅಲ್ಲಿನ ರಸ್ತೆಯ ಸ್ಥಿತಿಗತಿ ಮೈಲೇಜ್ ಹೆಚ್ಚಾಗಲು ಕಾರಣವಾಯಿತೇ ಎನ್ನುವುದರ ಕುರಿತು ಯಾವುದೇ ಮಾಹಿತಿಯಿಲ್ಲ.
ಭಾರತದಲ್ಲಿ ಇಯಾನ್ ಆರು ಆವೃತ್ತಿಗಳಲ್ಲಿ ದೊರಕುತ್ತದೆ. ಆರಂಭಿಕ ಆವೃತ್ತಿ ಡಿ-ಲೈಟ್ ದರ ಸುಮಾರು 2.69 ಲಕ್ಷ ರು. ಆಗಿದೆ. ಟಾಪ್ ಎಂಡ್ ಸ್ಪೋರ್ಟ್ಸ್ ಆವೃತ್ತಿ ದರ ಸುಮಾರು 3.71 ಲಕ್ಷ ರುಪಾಯಿ ಇದೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









