ಪುಟ್ಟ ಹ್ಯುಂಡೈ ಇಯಾನ್ ಕಾರಿಗೆ ಭರ್ಜರಿ ಬೇಡಿಕೆ

Posted By:
ಆರಂಭ ಸ್ವಲ್ಪ ಸ್ಲೋ ಆಗಿದ್ರೂ ಇಯಾನ್ ಕಾರಿನ ಮಾರಾಟವೀಗ ವೇಗ ಪಡೆದುಕೊಂಡಿದೆ. ಕಂಪನಿಯು ಎಲ್ ಪಿಜಿ ಆವೃತ್ತಿ ಕೂಡ ಪರಿಚಯಿಸಿದ ಹಿನ್ನಲೆಯಲ್ಲಿ ಇಯಾನ್ ಕಾರುಗಳು ಬೇಡಿಕೆ ಹೆಚ್ಚಿಸಿಕೊಳ್ಳುತ್ತಿವೆ. ಇಷ್ಟು ಮಾತ್ರವಲ್ಲದೇ ಕಂಪನಿಯು ಇಯಾನ್ ಕಾರಿನ ರಫ್ತು ವಹಿವಾಟು ಕೂಡ ಆರಂಭಿಸಿದೆ. ಶೀಘ್ರದಲ್ಲಿ ಇಯಾನ್ ನೇಪಾಲಕ್ಕೂ ಪ್ರಯಾಣ ಬೆಳೆಸಲಿದೆ.

ಆಕರ್ಷಕ ವಿನ್ಯಾಸ, ನಿರ್ಮಾಣ ಗುಣಮಟ್ಟ, ಇಂಧನ ದಕ್ಷತೆ ಮತ್ತು ಕಣ್ಮನ ಸೆಳೆಯುವ ಇಂಟಿರಿಯರ್ ಹೊಂದಿರುವ ದೆಹಲಿ ಎಕ್ಸ್ ಶೋರೂಂ ದರ 2.69 ಲಕ್ಷ ರು. ಆಸುಪಾಸಿನಲ್ಲಿದೆ. ಹೆಚ್ಚಿನ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಚ್ ಕಾರುಗಳಿಗೆ ಹೋಲಿಸಿದರೆ ಇದು ಅಗ್ಗದ ಕಾರು. ಸ್ಯಾಂಟ್ರೊ ಎಕ್ಸ್ ಶೋರೂಂ ದರ 2.80 ಲಕ್ಷ ರು. ಆಸುಪಾಸಿನಲ್ಲಿದೆ.

ದಿನೇ ದಿನೇ ಗಣನೀಯವಾಗಿ ಇಯಾನ್ ಕಾರು ಮಾರಾಟ ಹೆಚ್ಚಿಸಿಕೊಳ್ಳುತ್ತಿದೆ. ಇಲ್ಲಿವರೆಗೆ ಸುಮಾರು 50 ಸಾವಿರ ಯುನಿಟ್ ಇಯಾನ್ ಕಾರುಗಳು ಮಾರಾಟವಾಗಿವೆಯಂತೆ. ಕಂಪನಿಯು ಈಗಾಗಲೇ ಎಲ್ ಪಿಜಿ ಮತ್ತು ಡಿಲೈಟ್ ಪ್ಲಸ್ ಇಯಾನ್ ಆವೃತ್ತಿ ಪರಿಚಯಿಸಿರುವುದು ಇಯಾನ್ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

ಓದಿ: ಇಯಾನ್ ಸಂಪೂರ್ಣ ವಿಮರ್ಶೆ

English summary
Hyundai Eon Sale touches 50,000 Unit. After witnessing slow start for Eon, finally Hyundai managed to sell 50k unit Sale.
Story first published: Wednesday, February 29, 2012, 17:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark