ಹ್ಯುಂಡೈ ಇಯಾನ್ vs ಮಾರುತಿ ಆಲ್ಟೊ: ಫಲಿತಾಂಶ ನೋಡಿ

Posted By:

ಕಳೆದ ಐದು ವರ್ಷಗಳಿಂದ ಮಾರುತಿ ಸುಜುಕಿ ಆಲ್ಟೊ ಸಣ್ಣಕಾರು ಮಾರುಕಟ್ಟೆಯಲ್ಲಿ ಅನಾಭಿಷಿಕ್ತ ರಾಜನಂತೆ ಮೆರೆಯುತ್ತಿದೆ. ಪ್ರತಿತಿಂಗಳು ಮಾರಾಟ ಹೆಚ್ಚಿಸಿಕೊಳ್ಳುತ ಸಾಗುವ ಆಲ್ಟೊಗೆ ನಮ್ಮ ರಸ್ತೆಯಲ್ಲಿ ಕೆಲವು ವರ್ಷಗಳಿಂದ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಆಲ್ಟೊಗೆ ದಿಗಿಲು ಉಂಟು ಮಾಡುವಂತೆ ಹ್ಯುಂಡೈ ಕಂಪನಿಯು ಇಯಾನ್ ಎಂಬ ಪುಟ್ಟ ಸುಂದರ ಕಾರನ್ನು ಪರಿಚಯಿಸಿತ್ತು.

ಹ್ಯುಂಡೈ ಇಯಾನ್ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರಸ್ತೆಗಿಳಿದಿತ್ತು. ಮೊದಲ ತಿಂಗಳೇ ಸುಮಾರು 6 ಸಾವಿರ ಇಯಾನ್ ಮಾರಾಟವಾಗಿತ್ತು. (ಆಲ್ಟೊ ಪ್ರತಿತಿಂಗಳು 30 ಸಾವಿರಕ್ಕಿಂತಲೂ ಹೆಚ್ಚು ಮಾರಾಟವಾಗುತ್ತಿದೆ). ಸಣ್ಣಕಾರು ಮಾರುಕಟ್ಟೆಯಲ್ಲಿ ಆಲ್ಟೊ ಪಾಲಿಗೆ ಕನ್ನ ಹಾಕುವ ಸೂಚನೆಯನ್ನು ಈ ಮೂಲಕ ಇಯಾನ್ ನೀಡಿತ್ತು.

ಇದೀಗ ಇಯಾನ್ ಆಗಮಿಸಿ 9 ತಿಂಗಳು ಕಳೆದಿದೆ. ಇಯಾನ್ ಮಾರಾಟದ ಮೌಲ್ಯ ಮಾಪನ ಮಾಡಲು ಇದು ಸೂಕ್ತ ಸಮಯವೂ ಹೌದು. ಹಬ್ಬದ ಸಮಯದಲ್ಲಿ ರಸ್ತೆಗಿಳಿದ ಕಾರಣ ಸಹಜವಾಗಿಯೇ ಆರಂಭದಲ್ಲಿ ಇಯಾನ್ ಮಾರಾಟ ಭರ್ಜರಿಯಾಗಿತ್ತು.

ಹ್ಯುಂಡೈ ಇಯಾನ್ ಫ್ಲೂಡಿಕ್ ವಿನ್ಯಾಸದಿಂದಾಗಿ ಆಲ್ಟೊಗಿಂತಲೂ ಸುಂದರವಾಗಿ ಕಾಣುತ್ತದೆ. ಆದರೆ ದೇಶದ ವಾಹನ ಖರೀದಿದಾರರು ಸೌಂದರ್ಯ ನೋಡಿ ಮೋಸ ಹೋಗುವುದು ಕಡಿಮೆ. ಇಯಾನ್ ದರ ಸುಮಾರು 3 ಲಕ್ಷ ರು. ಆಸುಪಾಸಿನಲ್ಲಿದೆ. ಅಂದರೆ ಆಲ್ಟೊಗಿಂತ ಕೊಂಚ ದುಬಾರಿ. ಇಯಾನ್ ಡಿ-ಲೈಟ್ ಆವೃತ್ತಿಯಲ್ಲಿ ಏರ್ ಕಂಡಿಷನ್ ಅಥವಾ ಪವರ್ ಸ್ಟಿಯರಿಂಗ್ ಮುಂತಾದ ಫೀಚರುಗಳಿಲ್ಲ.

ಇಯಾನ್ ಹೈ ಎಂಡ್ ಇಬಿಡಿ ಆವೃತ್ತಿ ಮೂಲಕ ಆಲ್ಟೊ ಕೆ10ಗೂ ಪೈಪೋಟಿ ನೀಡಲು ಹ್ಯುಂಡೈ ಪ್ರಯತ್ನಿಸಿದೆ.

ಹೀಗೆ ಹ್ಯುಂಡೈ ಇಯಾನ್ ಮತ್ತು ಆಲ್ಟೊ ನಡುವೆ ಪೈಪೋಟಿ ಆರಂಭವಾಗುವ ಸಮಯದಲ್ಲಿ ದುರಾದೃಷ್ಟವಶಾತ್ ಪೆಟ್ರೋಲ್ ದರ ದುಬಾರಿಯಾಗಲು ಆರಂಭಿಸಿತ್ತು. ಪರಿಣಾಮವಾಗಿ ಸಣ್ಣ ಪೆಟ್ರೋಲ್ ಕಾರುಗಳ ಬೇಡಿಕೆ ತಗ್ಗತೊಡಗಿತು. ಆಲ್ಟೊ ಮಾರಾಟ ತಿಂಗಳಿಗೆ 20 ಸಾವಿರ ಯುನಿಟಿಗೆ ತಲುಪಿತು.

ಹ್ಯುಂಡೈ ಕಂಪನಿಯು ಡಿಲೈಟ್ ಪ್ಲಸ್ ಎಂಬ ಇಯಾನ್ ಆವೃತ್ತಿ ಪರಿಚಯಿಸುವ ಮೂಲಕ ಮಾರಾಟ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಗ್ರಾಹಕರನ್ನು ಸೆಳೆಯಲು ಇದಕ್ಕೂ ಸಾಧ್ಯವಾಗಿಲ್ಲ.

ಆಲ್ಟೊಗಿಂತ ಇಯಾನ್ ದರ ದುಬಾರಿಯಾಗಿರುವುದು ಮಾರಾಟಕ್ಕೆ ಹಿನ್ನೆಡೆ ನೀಡಿದೆ. ಇಯಾನ್ ಮಾರಾಟ ಪ್ರತಿತಿಂಗಳು 10 ಸಾವಿರ ಯುನಿಟ್ ಆಸುಪಾಸಿನಲ್ಲಿದೆ. ಎಂಟ್ರಿ ಲೆವೆಲ್ ಕಾರುಗಳಲ್ಲಿ ಈ ಮಾರಾಟ ಕಡಿಮೆ ಎಂದೇ ಹೇಳಬೇಕು.

ಇಯಾನ್ ಮಾರಾಟ ಇಳಿಕೆಗೆ ಗ್ರಾಹಕರ ಮನಸ್ಥಿತಿಯೂ ಪ್ರಮುಖ ಕಾರಣ. ಜನರು ಮಾರುತಿಯನ್ನು ನಂಬುವಷ್ಟು ಹ್ಯುಂಡೈಯನ್ನು ನಂಬುತ್ತಿಲ್ಲ.

English summary
The Maruti Suzuki Alto has been the undisputed best seller month after month since over five years. The only sign of competition came in the form of the Hyundai Eon late last year. The Hyundai Eon Vs Maruti Alto was a much discussed topic even before Hyundai had made an official announcement about its launch.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more