ಸುತ್ತಮುತ್ತ ಸೇವೆ ಆರಂಭಿಸಿದ ಹ್ಯುಂಡೈ ಮೋಟರ್ಸ್

ಹ್ಯುಂಡೈ ಮೋಟರ್ಸ್ ಇಂಡಿಯಾ ಕಂಪನಿಯು ದೇಶದಾದ್ಯಂತ ಆರನೇ ಆವೃತ್ತಿಯ "ಆಲ್ ವೇಸ್ ಅರೌಂಡ್" ಅಭಿಯಾನ ಆರಂಭಿಸಿದೆ. ಜೂನ್ 24ರಿಂದ ಆರಂಭವಾದ ಈ ಅಭಿಯಾನದಲ್ಲಿ ಗ್ರಾಹಕರು ತಮ್ಮ ಹತ್ತಿರದ ಸ್ಥಳಗಳಲ್ಲಿ ಕಾರುಗಳನ್ನು ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳಬಹುದು. ಕಂಪನಿಯು ಕಳೆದ ವರ್ಷ ಈ ಅಭಿಯಾನವನ್ನು ದೇಶದ 8,383 ಸ್ಥಳಗಳಲ್ಲಿ ಆಯೋಜಿಸಿತ್ತು.

ಪ್ರಸಕ್ತ ವರ್ಷದ ಅಭಿಯಾನವು ಕಳೆದ ವರ್ಷಕ್ಕೆ ಹೋಲಿಸಿದರೆ ವಿಸ್ತರಿಸಲಿದೆ. ಅಂದರೆ ಕಂಪನಿಯು ಸುಮಾರು 8,800 ಪ್ರದೇಶಗಳಲ್ಲಿ ಡಿಸೆಂಬರ್ ಅಂತ್ಯದವರೆಗೆ ಈ ಚೆಕಪ್ ಕ್ಯಾಂಪ್ ನಡೆಸಲಿದೆ. ಅಂದ ಹಾಗೆ ಈ ಕ್ಯಾಂಪ್ ಕೇವಲ ಶನಿವಾರ ಮತ್ತು ಭಾನುವಾರ ಮಾತ್ರವಿರಲಿದೆ.

ವಿಶೇಷವೆಂದರೆ ಈ ಕ್ಯಾಂಪ್ ಕೇವಲ ಸರ್ವಿಸ್ ಸ್ಟೇಷನ್, ಶೋರೂಂನಲ್ಲಿ ಮಾತ್ರವಲ್ಲದೇ ಹತ್ತಿರದ ಶಾಪಿಂಗ್ ಮಾಲ್, ಮಲ್ಟಿಫ್ಲೆಕ್ಸ್ ಇತ್ಯಾದಿಗಳಲ್ಲಿಯೂ ಇರಲಿದೆ. ಗ್ರಾಹಕರಿಗೆ ಆದಷ್ಟು ಸನಿಹದಲ್ಲಿ ಸೇವೆ ನೀಡುವುದು ಕಂಪನಿಯ ಉದ್ದೇಶವಾಗಿದೆ. ಹ್ಯುಂಡೈ ಸೇವೆ ಸಮರ್ಪಕವಾಗಿಲ್ಲವೆನ್ನುವರ ಮನಸ್ಸನ್ನು ಕಂಪನಿಯು ಈ ಮೂಲಕ ಮಾರ್ಪಾಡಿಸಲು ಪ್ರಯತ್ನಿಸುತ್ತಿದೆ ಎನ್ನಬಹುದು.

ಹತ್ತಿರದ ಸ್ಥಳಗಳಲ್ಲಿ ಕ್ಯಾಂಪ್ ಆಯೋಜಿಸುವುದರಿಂದ ಗ್ರಾಹಕರ ಸಮಯವೂ ಉಳಿಯಲಿದೆ. ಇದಕ್ಕಾಗಿ ಹೆಚ್ಚು ವೆಚ್ಚವೂ ಮಾಡಬೇಕಿಲ್ಲ. ಉದಾಹರಣೆಗೆ ಶಾಪಿಂಗ್ ಮಾಲ್ ನಲ್ಲಿರುವ ಕ್ಯಾಂಪಿಗೆ ಕಾರನ್ನು ಕೊಟ್ಟು ಗ್ರಾಹಕರು ಶಾಪಿಂಗ್ ಮಾಡಲು ಹೋಗಬಹುದಾಗಿದೆ. ಮಲ್ಟಿ ಫ್ಲೆಕ್ಸ್ ಕ್ಯಾಂಪಿಗೆ ಕೊಟ್ಟು ಆರಾಮವಾಗಿ ಸಿನಿಮಾ ನೋಡಬಹುದು. ಈ ಕ್ಯಾಂಪುಗಳಲ್ಲಿ ಅತ್ಯುತ್ತಮ ತರಬೇತಿ ಪಡೆದ ಟೆಕ್ನಿಷಿಯನ್ ಗಳು ಇದ್ದಾರೆಂದು ಕಂಪನಿಯು ಭರವಸೆ ನೀಡಿದೆ.

"ಗ್ರಾಹಕರಿಗೆ ಟ್ರಬಲ್ ಫ್ರೀ ಸೇವೆ ನೀಡುವುದು ನಮ್ಮ ಉದ್ದೇಶ. ಕಂಪನಿಯು ಮಾರಾಟ ಸೇವೆ ಮಾತ್ರವಲ್ಲದೇ ನಂತರವೂ ಗ್ರಾಹಕರೊಂದಿಗೆ ಇರುತ್ತದೆ. ಇದಕ್ಕಾಗಿ ಕಂಪನಿಯು ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದು, ಗ್ರಾಹಕ ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ" ಎಂದು ಕಂಪನಿಯ ನಿರ್ದೇಶಕರಾದ ಅರವಿಂದ್ ಸಕ್ಸೆನಾ ಹೇಳಿದ್ದಾರೆ.

Most Read Articles

Kannada
English summary
Hyundai Motor India has launched the 6th edition of its nationwide service initiative - ‘Always Around' campaign. Starting from June 24 the ‘Hyundai Always Around' campaign will provide free check-ups for its customers at convenient locations. Last year the camp was organized at around 8,383 locations all over the country.
Story first published: Monday, June 25, 2012, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X