ಹೊಸ ಪರಿಷ್ಕೃತ ಹ್ಯುಂಡೈ ಐ20 ಕಾರಿನಲ್ಲಿ ಏನಿದೆ?

Posted By:
To Follow DriveSpark On Facebook, Click The Like Button
ಗ್ರಾಹಕರಿಗೆ ಇಷ್ಟವಾಗುವಂತಹ ನೂತನ ಪರಿಷ್ಕೃತ ಆವೃತ್ತಿಯೊಂದನ್ನು ಹ್ಯುಂಡೈ ಹೊರತರಲಿದೆ. ಕಂಪನಿ ಸದ್ಯ ಅದರ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅದರ ಒಂದಿಷ್ಟು ಟೆಕ್ ಮಾಹಿತಿಗಳೂ ನಮಗೆ ಲಭ್ಯವಾಗಿದೆ.

ಇದು ಹಳೆಯ ಫ್ಯೂಡಿಕ್ ವಿನ್ಯಾಸದಲ್ಲೇ ಮುಂದುವರೆದಿದೆ. ಯುರೋಪ್ ಮಾರುಕಟ್ಟೆಗೆ ನೂತನ 1.1 ಲೀಟರ್, 3 ಸಿಲಿಂಡರ್, ಯು 2 ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಜೊತೆಗೆ ಇದರಲ್ಲಿ ಹಳೆಯ ಬ್ಲೂ ಡ್ರೈವ್ ತಂತ್ರಜ್ಞಾನವೂ ಇರಲಿದೆ.

ನೂತನ ಕಾರಿನ ಬಾಡಿಯಲ್ಲಿ ಕಂಪನಿಯ ಸಿಗ್ನೆಚರ್ ಆಕರ್ಷಕವಾಗಿ ಕಾಣುತ್ತದೆ. ಮರುವಿನ್ಯಾಸ ಮಾಡಿರುವ ಹೆಡ್ ಲ್ಯಾಂಪ್, ನೂತನ ವಿನ್ಯಾಸದ ಬಾನೆಟ್ ಮತ್ತು ರಿಮ್ ವಿನ್ಯಾಸ ಗಮನ ಸೆಳೆಯುತ್ತದೆ.

"2009ರಲ್ಲಿ ಐ20 ಕಾರು ಪರಿಚಯಿಸಿದ ನಂತರ ಯುರೋಪ್ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆ ಪಡೆದುಕೊಂಡಿದೆ. ಇದರ ದಕ್ಷತೆ, ಗುಣಮಟ್ಟ ಮತ್ತು ಸ್ಟೈಲ್ ವಿಷ್ಯದಲ್ಲಿ ಗ್ರಾಹಕರು ಇದನ್ನು ಇಷ್ಟಪಟ್ಟಿದ್ದಾರೆ. ನೂತನ ಆವೃತ್ತಿಯು ಸಾಕಷ್ಟು ಪರಿಷ್ಕೃತ ಫೀಚರುಗಳು ಮತ್ತು ಕಡಿಮೆ ಸಿಒ2 ಮಾಲಿನ್ಯ ಹೊಂದಿದೆ" ಎಂದು ಹ್ಯುಂಡೈ ಮೋಟರ್ ಯುರೋಪ್ ನ ಸಿಇಒ ಅಲೆನ್ ರಷ್ ಫೋರ್ತ್ ಹೇಳಿದ್ದಾರೆ.

ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ಕಂಪನಿ ನೀಡಲಿದೆಯಂತೆ. ಹ್ಯುಂಡೈ ಐ20: ದರ, ಮೈಲೇಜ್ ಮತ್ತು ವಿಮರ್ಶೆ ಓದಿ

English summary
Hyundai released images of new premium hatchback i20. All new i20 updated verison will available in 1.1-litre, 3-cylinder, U-II diesel engine.
Story first published: Thursday, March 8, 2012, 17:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark