ಕಾರುಗಳನ್ನು ಇನ್ಮುಂದೆ ಆಮದು ಮಾಡೋದು ಕಷ್ಟ!

Posted By:
To Follow DriveSpark On Facebook, Click The Like Button
ವಿದೇಶಿ ಕಾರುಗಳನ್ನು ಖರೀದಿಸಬಯಸುವ ದೇಶದ ಗ್ರಾಹಕರು ಎರಡೆರಡು ಬಾರಿ ಯೋಚಿಸಬೇಕಿದೆ. ಯಾಕೆಂದರೆ ಕೇಂದ್ರ ಸರಕಾರವು ಇತ್ತೀಚೆಗೆ ಬಜೆಟಿನಲ್ಲಿ ಆಮದು ಕಾರುಗಳ ಸುಂಕವನ್ನು ಹೆಚ್ಚಿಸಿದೆ. ಬಜೆಟ್ ಪ್ರಸ್ತಾಪದಿಂದಾಗಿ ಆಮದು ಮಾಡಿದ ಕಾರುಗಳು ಎಷ್ಟು ದುಬಾರಿಯಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಬಜೆಟಿನಲ್ಲಿ ಆಮದು ಮಾಡುವ ಕಾರುಗಳಿಗೆ ಲಕ್ಷ ರುಪಾಯಿ ಲೆಕ್ಕದಲ್ಲಿ ಅಬಕಾರಿ ಸುಂಕ ವಿಧಿಸಲಾಗಿತ್ತು. ಫೆರಾರಿ, ಪೊರ್ಷ್, ಲಂಬೊರ್ಗಿನಿ, ರೋಲ್ಸ್ ರಾಯ್ಸ್ ಮತ್ತು ಬೆಂಟ್ಲಿ ಕಾರುಗಳ ದರ ಕೋಟಿ ಕೋಟಿ ರುಪಾಯಿ ಇದೆ. ಇನ್ಮುಂದೆ ಈ ಕೋಟಿ ದರದ ಕಾರುಗಳಿಗೆ 20ರಿಂದ 70 ಲಕ್ಷ ರು.ವರೆಗೆ ಹೆಚ್ಚುವರಿಯಾಗಿ ಪಾವತಿಸಬೇಕಿದೆ.

ಆಮದು ಕಾರುಗಳ ದರ ಶೇಕಡ 20ರಿಂದ ಶೇಕಡ 25ರಷ್ಟು ಏರಿಕೆ ಕಾಣಲಿವೆ ಎಂದು ವರದಿಗಳು ಹೇಳಿವೆ. ಇದರಿಂದಾಗಿ ಐಷಾರಾಮಿ ಮತ್ತು ಸ್ಪೋರ್ಟ್ ಕಾರುಗಳ ಮಾರಾಟ ಕಡಿಮೆಯಾಗಲಿದೆ.

ದೇಶದಲ್ಲಿ ಕಾರುಗಳ ಆಮದು ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಕಳೆದ ವರ್ಷ ದೇಶಕ್ಕೆ ಸುಮಾರು 500 ಕಾರುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಅಬಕಾರಿ ಸುಂಕ ಹೆಚ್ಚಳದಿಂದಾಗಿ ಇಂತಹ ಹೈ ಎಂಡ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗುವ ನಿರೀಕ್ಷೆಯಿದೆ.

ಇಟಲಿಯ ಸ್ಪೊರ್ಟ್ ಕಾರು ಕಂಪನಿ ಫೆರಾರಿಯ "ಕ್ಯಾಲಿಫೋರ್ನಿಯಾ ಕನ್ವರ್ಟಿಬಲ್" ದರ 2.2 ಕೋಟಿ ರು.ನಿಂದ 2.69 ಕೋಟಿ ರು.ಗೆ ಹೆಚ್ಚಾಗಿದೆ. ಫೆರಾರಿ ಎಫ್ಎಫ್ ನಾಲ್ಕು ಡೋರಿನ ಕಾರು ದರ ಸುಮಾರು 70 ಲಕ್ಷ ರು.ನಷ್ಟು ದುಬಾರಿಯಾಗಿದೆ. ಅಂದರೆ ಎಫ್ಎಫ್ ದರ 3.42 ಕೋಟಿ ರು.ನಿಂದ 4.12 ಕೋಟಿ ರು.ಗೆ ನೆಗೆದಿದೆ.

ಲಂಬೊರ್ಗಿನಿ ಕೂಡ ಗಲಾರ್ಡೊ ಮತ್ತು ಅವೆಂಟಡೊರ್ ಕಾರಿನ ದರಗಳನ್ನು 20 ಲಕ್ಷ ರು.ನಿಂದ 40 ಲಕ್ಷ ರು.ವರೆಗೆ ಏರಿಕೆ ಮಾಡಿದೆ. ಆಸ್ಟನ್ ಮಾರ್ಟಿನ್ ಕಾರು ದರ ಕೂಡ ಸುಮಾರು 20-35 ಲಕ್ಷ ರು. ಏರಿಕೆ ಕಾಣುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
The union budget for 2012-13 has imposed higher excise taxes on cars manufactured in India and higher customs duty on imported cars.Expensive car brands such as Ferrari, Porsche, Lamborghini, Rolls-Royce and Bentley sell cars that are worth crores and the price hike will increase their prices ranging between
Story first published: Thursday, March 29, 2012, 9:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark