007- ಏ ದೋಸ್ತಿ ಹಮ್ ನಹೀ ಚೋಡೆಂಗೆ

By Nagaraja

ಏ ದೋಸ್ತಿ ಹಮ್ ನಹೀ ಚೋಡೆಂಗೆ...ಹೌದು, ಜೇಮ್ಸ್ ಬಾಂಡ್ ಹಾಗೂ ಆಸ್ಟನ್ ಮಾರ್ಟಿನ್ ಕುರಿತು ಹೇಳುವಾಗ ಹಿಂದಿ ಚಿತ್ರವೊಂದರ ಈ ಹಾಡು ನೆನಪಿಗೆ ಬರುತ್ತದೆ.

ಎಂದೋ ನೋಡಿದ್ದ ಜೇಮ್ಸ್ ಬಾಂಡ್ ಚಿತ್ರಗಳನ್ನೊಮ್ಮೆ ನೆನಪಿಸಿಕೊಳ್ಳಿ. ಆಕಾಶಕ್ಕೆ ನೆಗೆಯುವ ಅದ್ಭುತ ಕಾರುಗಳು, ಸಾಗರದೊಳಗೆ ಈಜುವ ಕಾರುಗಳು, ಕಾರಿನೊಳಗಿನಿಂದ ಹೊರಬರುವ ಗನ್ ಗಳನ್ನು ನೋಡಿ ಅಬ್ಬಾಬ್ಬಾ ಎಂದವರೆಷ್ಟೋ ಮಂದಿ. ಯಾಕೆಂದರೆ ಜೇಮ್ಸ್ ಬಾಂಡ್ ಹಾಗೂ ಆಸ್ಟನ್ ಮಾರ್ಟಿನ್ ನಂಟು ಇಂದು ನಿನ್ನೆಯದಲ್ಲ. 48 ವರ್ಷಗಳ ಹಿಂದೆ ಮೊದಲ ಬಾರಿಗೆ ಬಾಂಡ್ ಚಿತ್ರದಲ್ಲಿ ಆಸ್ಟನ್ ಮಾರ್ಟಿನ್ ಕಾರು ಪ್ರದರ್ಶಿಸಲಾಗಿತ್ತು. ಆ ಬಳಿಕ ಬಾಂಡ್ ಬಹುತೇಕ ಚಿತ್ರಗಳ ರೋಚಕ, ಸಾಹಿಸಿಕ ದೃಶ್ಯಗಳಲ್ಲಿ ಆಸ್ಟನ್ ಮಾರ್ಟಿನ್ ಕಾರುಗಳು ಭಾರಿ ಜನಪ್ರಿಯತೆ ಗಿಟ್ಟಿಸತೊಡಗಿತು.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಸ್ಟನ್ ಮಾರ್ಟಿನ್ ಕಾರುಗಳಿಲ್ಲದ ಹೊರತು ಬಾಂಡ್ ಚಿತ್ರ ಅಪೂರ್ಣ. ಬಾಂಡ್ ಚಿತ್ರಗಳಲ್ಲಿ ಆಸ್ಟನ್ ಕಾರುಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡಲಾಗುತ್ತಿತ್ತು.

1964ರಲ್ಲಿ ಮೊದಲ ಬಾರಿಗೆ ಈ ಬ್ರಿಟಿಷ್ ವಾಹನ ತಯಾರಕರಾದ ಆಸ್ಟನ್ ಮಾರ್ಟಿನ್ ಕಾರುಗಳನ್ನು ಬಳಸಲಾಗಿತ್ತು. ಬಾಂಡ್ ಚಿತ್ರವಾದ ಗೋಲ್ಡ್‌ಫಿಂಗರ್‌ನಲ್ಲಿ ಮೊದಲ ಬಾರಿಗೆ ಬಾಂಡ್ ಕಾರು ಪ್ರದರ್ಶಿಸಲಾಯಿತು. 48 ವರ್ಷಗಳ ಹಿಂದೆ ಆರಂಭವಾಗಿರುವ ಈ ನಂಟು ಈಗಲೂ ಮುಂದುವರಿದಿದೆ. ಪ್ರತಿಯೊಂದು ಬಾಂಡ್ ಚಿತ್ರಗಳಿಗೂ ಆಸ್ಟನ್ ಮಾರ್ಟಿನ್ ಕಾರುಗಳನ್ನು ವಿಶೇಷವಾಗಿ ತಯಾರಿಸಲಾಗುತ್ತಿದೆ. ಇದೀಗಷ್ಟೇ ತೆರೆಕಂಡ ಸ್ಕೈಫಾಲ್ ಚಿತ್ರದಲ್ಲೂ ಆಸ್ಟನ್ ಮಾರ್ಟಿನ್ ಕಾರು ಸದ್ದು ಮಾಡಿತ್ತು.

ಗೋಲ್ಡ್‌ಫಿಂಗರ್‌‍ನಲ್ಲಿ ಆಸ್ಟನ್ ಮಾರ್ಟಿನ್ ಡಿಬಿ5

1964ನೇ ಇಸವಿಯಲ್ಲಿ ಮೊದಲ ಬಾರಿಗೆ ಬಾಂಡ್ ಚಿತ್ರದಲ್ಲಿ ಆಸ್ಟನ್ ಮಾರ್ಟಿನ್ ಕಾರುಗಳನ್ನು ಬಳಸಲಾಯಿತು. ಬಾಂಡ್ ಚಿತ್ರ ಸರಣಿಯ ಮೂರನೇ ಚಿತ್ರವಾದ ಗೋಲ್ಡ್‌ಫಿಂಗರ್‌ನಲ್ಲಿ ಆಸ್ಟನ್ ಡಿಬಿ5 ಕಾರು ಬಳಕೆಯಾಗಿತ್ತು.

ಥಂಡರ್‌ಬಾಲ್‌ನಲ್ಲೂ ಆಸ್ಟನ್ ಮಾರ್ಟಿನ್ ಡಿಬಿ5

ಆ ಬಳಿಕ ಅದೇ ಡಿಬಿ5 ಕಾರನ್ನುಥಂಡರ್‌ಬಾಲ್‌ನಲ್ಲೂ ಪ್ರಯೋಗ ಮಾಡಲಾಯಿತು. ಈ ಕಾರಲ್ಲಿ ರಹಸ್ಯ ಕ್ಯಾಮರಾ, ಬದಲಾವಣೆ ಮಾಡಬಹುದಾದ ನಂಬರ್ ಪ್ಲೇಟ್, ರಹಸ್ಯ ಗನ್‌ಗಳು ಈ ಕಾರಿನಲ್ಲಿದ್ದು ನೋಡುಗರಲ್ಲಿ ಥ್ರಿಲ್ ಮೂಡಿಸಿದ್ದವು.

ಆನ್ ಹೆರ್ ಮೆಜೆಸ್ಟಿ ಸಿಕ್ರೇಟ್ ಸರ್ವಿಸ್

1969ರಲ್ಲಿ ತೆರೆಕಂಡ ಪತ್ತೆದಾರಿ ಬಾಂಡ್ ಚಿತ್ರದಲ್ಲಿ ಮತ್ತೊಂದು ಆಸ್ಟನ್ ಮಾರ್ಟಿನ್ ಕಾರು ಪ್ರದರ್ಶಿಸಲಾಯಿತು. ಆನ್ ಹೆರ್ ಮೆಜೆಸ್ಟಿಸ್ ಸಿಕ್ರೇಟ್ ಸರ್ವಿಸ್ ಚಿತ್ರದ ಆಕ್ಷನ್ ದೃಶ್ಯಗಳಲ್ಲಿ ಆಸ್ಟನ್ ಮಾರ್ಟಿನ್ ಪ್ರಯೋಗ ನೋಡಗರಲ್ಲಿ ರೋಮಾಂಚನಕ್ಕೆ ಕಾರಣವಾಗಿತ್ತು.

ಲಿವಿಂಗ್ ಡೇಲೈಟ್ಸ್‌ನಲ್ಲಿ ಆಸ್ಟನ್ ಮಾರ್ಟಿನ್

ಆ ಬಳಿಕ ಸುಮಾರು 20 ವರ್ಷಗಳ ಬಳಿಕ ಅಂದರೆ 1987ರಲ್ಲಿ ಬಾಂಡ್ ಪಾತ್ರದಲ್ಲಿ ಕಾಣಿಸಿಕೊಂಡ ತಿಮೊತಿ ಡಾಲ್ಟನ್ ಜಗತ್ತಿನ ಮುಂದೆ ಆಸ್ಟನ್ ಮಾರ್ಟಿನ್ ವಿ8 ಕಾರನ್ನು ಮತ್ತೆ ಪ್ರದರ್ಶಿಸಿದರು.

ಗೋಲ್ಡನ್ ಐ ಚಿತ್ರದಲ್ಲಿ ಡಿಬಿ5

ಗೋಲ್ಡನ್ ಐ ಚಿತ್ರದಲ್ಲಿ ಪಿಯರ್ಸ್ ಬ್ರೆಸ್ಮನ್ ಮೊದಲ ಬಾರಿಗೆ ಬಾಂಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಮಗದೊಮ್ಮೆ ಜನಪ್ರಿಯ ಆಸ್ಟನ್ ಮಾರ್ಟಿನ್ ಡಿಬಿ5 ಕಾರನ್ನು ಪ್ರಯೋಗಿಸಲಾಗಿತ್ತು.

ಡೈ ಎನದರ್ ಡೇ ಚಿತ್ರದಲ್ಲಿ ವಿ8 ವ್ಯಾಂಗಿಷ್

ಡೈ ಎನೆದರ್ ಡೇ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಬಳಸಿದ ಪ್ರಮುಖ ಕಾರಿದು. 2002ನೇ ಇಸವಿಯಲ್ಲಿ ತೆರೆಕಂಡ ಚಿತ್ರದಲ್ಲಿ ಪಿಯರ್ಸ್ ಬ್ರೆಸ್ಮೆನ್ ಬಾಂಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಕಾರ್ಯಕ್ಷಮತೆ, ಶಕ್ತಿಶಾಲಿ ಎಂಜಿನ್, ಕಣ್ಮನ ಸೆಳೆಯುವ ವಿನ್ಯಾಸ ಬೆರಗು ಹುಟ್ಟಿಸುತ್ತದೆ.

ಕಾಸಿನೊ ರಾಯಲೆಯಲ್ಲಿ ಡಿಬಿಎಸ್

2006ರಲ್ಲಿ ಜೇಮ್ಸ್ ಬಾಂಡ್ ಪತ್ತೆಧಾರಿ ಪಾತ್ರವನ್ನು ಡ್ಯಾನಿಯಲ್ ಕ್ರೇಗ್ ನಿಭಾಯಿಸ ತೊಡಗಿದರು. ಅಲ್ಲದೆ ಕಾಸಿನೊ ರಾಯಲೆ ಚಿತ್ರದಲ್ಲಿ ಆಸ್ಟನ್ ಮಾರ್ಟಿನ್ ಡಿಬಿಎಸ್ ಕಾರು ಬಳಸಲಾಯಿತು.

ಕಾಸಿನೊ ರಾಯಲೆಯಲ್ಲಿ ಬಾಂಡ್ ಆಕ್ಷನ್

ಕ್ಯಾಸಿನೊ ರಾಯಲೆ ಆಕ್ಷನ್ ರಂಗಗಳಲ್ಲಿ ಆಸ್ಟನ್ ಮಾರ್ಟಿನ್ ಕಾರನ್ನು ಅದ್ಭುತವಾಗಿ ಬಳಸಲಾಗಿತ್ತು. ಚಿತ್ರದಲ್ಲಿ ಆಸ್ಟನ್ ಮಾರ್ಟಿನ್ ಕಾರು ಏಳು ಬಾರಿ ಪಲ್ಟಿ ಹೊಡೆಯುವ ಸೀನ್ ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಕ್ವಾಂಟಮ್ ಆಫ್ ಸೋಲಾಸ್

ಆ ಬಳಿಕ ಕ್ವಾಂಟಮ್ ಆಫ್ ಸೋಲಾಸ್ ಚಿತ್ರದಲ್ಲೂ ಆಸ್ಟನ್ ಮಾರ್ಟಿನ್ ಕಾರು ಬಳಕೆ ಮಾಡಲಾಯಿತು. ಇದರಲ್ಲೂ ಡ್ಯಾನಿಯಲ್ ಕ್ರೇಗ್ ಸಾಹಸಿಕ ದೃಶ್ಯಗಳಲ್ಲಿ ಭಾಗವಹಿಸಿದರು.

ಸ್ಕೈಫಾಲ್‌ನಲ್ಲಿ ಆಸ್ಟನ್ ಮಾರ್ಟಿನ್ ರಿಟರ್ನ್

ಅಂದ ಹಾಗೆ ಜೇಮ್ಸ್ ಬಾಂಡ್ ಸರಣಿ ಚಿತ್ರಗಳ 50 ವರ್ಷಗಳ ಬಳಿಕ ಸ್ಕೈಫಾಲ್ ಚಿತ್ರ ತೆರೆಕಂಡಿತ್ತು. ಇದರಲ್ಲೂ ಡ್ಯಾನಿಯಲ್ ಕ್ರೇಗ್ ಅಭಿನಯ ಅದ್ಭುತವಾಗಿತ್ತು. ಹಳೆ ಗೋಲ್ಡ್‌ಫಿಂಗರ್ ಚಿತ್ರ ನೆನಪಿಗೆ ಬರುವಂತೆಯೇ ಮತ್ತೆ ಸ್ಕೈಫಾಲ್ ಚಿತ್ರದಲ್ಲಿ ಆಸ್ಟನ್ ಮಾರ್ಟಿನ್ ಡಿಬಿ5 ಕಾರು ಬಳಸಲಾಯಿತು.

ಏ ದೋಸ್ತಿ ಹಮ್ ನಹೀ ಚೋಡೆಂಗೆ

ಏ ದೋಸ್ತಿ ಹಮ್ ನಹೀ ಚೋಡೆಂಗೆ... ಎಂಬ ಹಿಂದಿ ಹಾಡಿನಂತೆ ಹಾಲಿವುಡ್‌ನಲ್ಲಿ ಬಾಂಡ್ ಹಾಗೂ ಆಸ್ಟನ್ ಮಾರ್ಟಿನ್ ಬಾಂಧವ್ಯ ಎಂದೆಂದಿಗೂ ಅಮರವಾಗಿದೆ.

Most Read Articles

Kannada
English summary
James Bond and Aston Martin have an iconic relation. Do you know about James Bond's cars. Check out those cars used in James Bond's movies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X