ಜೇಮ್ಸ್ ಬಾಂಡ್ ಆಸ್ಟನ್ ಮಾರ್ಟಿನ್ ಕಾರು ಹರಾಜು

Posted By:
To Follow DriveSpark On Facebook, Click The Like Button
ಜೇಮ್ಸ್ ಬಾಂಡ್ ಬಳಸಿದ ಅದ್ದೂರಿ ಕಾರೊಂದು ಕ್ರಿಸ್ಟೈಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.. ಜೇಮ್ಸ್ ಬಾಂಡ್ ಹೆಚ್ಚಿನ ಸಿನಿಮಾಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದ ಈ ಕಾರು ಸುಮಾರು 50 ವರ್ಷಕ್ಕಿಂತಲೂ ಹಳೆಯದು.

ಆಸ್ಟನ್ ಮಾರ್ಟಿನ್ ಕಾರು ಆರು ಲೀಟರಿನ ವಿ12 ಡಿಬಿಎಸ್ ಎಂಜಿನ್ ಹೊಂದಿದ್ದು, ಎರಡು ಡೋರಿನ ಕೂಪೆ ಆವೃತ್ತಿಯಾಗಿದೆ. ಇದು ಸುಮಾರು 1 ಲಕ್ಷ ಪೌಂಡ್ ನಿಂದ 1.5 ಲಕ್ಷ ಪೌಂಡ್ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.

ಈ ಕಾರನ್ನು ಅಕ್ಟೋಬರ್ ಐದರಂದು ಹರಾಜು ಮಾಡಲಾಗುವುದು ಎಂದು ಸಂಘಟಕರು ಹೇಳಿದ್ದಾರೆ. ಅಕ್ಟೋಬರ್ ಐದು ವಿಶ್ವ ಜೇಮ್ಸ್ ಬಾಂಡ್ ದಿನವಾಗಿದೆ.

ಜೇಮ್ಸ್ ಬಾಂಡ್ ಚಿತ್ರದ ಐದು ಜನಪ್ರಿಯ ಕಾರುಗಳು: ಆಸ್ಟನ್ ಮಾರ್ಟಿನ್ ಡಿಬಿ5, ಲೋಟಸ್ ಎಸ್ಪ್ರಿಟ್ ಎಸ್1, ಬಿಎಂಡಬ್ಲ್ಯು 750ಐಎಲ್, ಸಿಟ್ರೊಯಿನ್ 2ಸಿವಿ, ಆಸ್ಟನ್ ಮಾರ್ಟಿನ್ ವಿ20 ವ್ಯಾಂಗಿಷ್.

1964ರಲ್ಲಿ ಗೋಲ್ಡ್ ಫಿಂಗರ್ ಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ಆಸ್ಟನ್ ಮಾರ್ಟಿನ್ ಡಿಬಿ5 ಕಾರು ಬಳಕೆಯಾಗಿತ್ತು. ನಂತರ ಥಂಡರ್ ಬಾಲ್ ಚಿತ್ರದಲ್ಲೂ ಆಸ್ಟನ್ ಮಾರ್ಟಿನ್ ಡಿಬಿ5 ಬಳಕೆ ಮಾಡಲಾಗಿತ್ತು. ಈ ಕಾರಲ್ಲಿ ರಹಸ್ಯ ಕ್ಯಾಮರಾ, ಬದಲಾವಣೆ ಮಾಡಬಹುದಾದ ನಂಬರ್ ಪ್ಲೇಟ್, ರಹಸ್ಯ ಗನ್‌ಗಳು ಈ ಕಾರಿನಲ್ಲಿದ್ದು ನೋಡುಗರಲ್ಲಿ ಥ್ರಿಲ್ ಮೂಡಿಸಿದ್ದವು.

ಜೇಮ್ಸ್ ಬಾಂಡ್ ಚಿತ್ರದಲ್ಲಿ ಬಳಕೆಯಾಗಿದ್ದ ಈ ಆಸ್ಟನ್ ಮಾರ್ಟಿನ್ ಡಿಬಿ4 ಕಾರು 2010ರಲ್ಲಿ 41 ಲಕ್ಷ ಡಾಲರಿಗೆ ಹರಾಜಾಗಿತ್ತು. ಇದೀಗ ಮತ್ತೊಂದು ಆಸ್ಟನ್ ಮಾರ್ಟಿನ್ ಕಾರನ್ನು ಕೂಡ ಹರಾಜಿನಲ್ಲಿದೆ.

English summary
James Bond's Aston Martin sports car going on sale on Global James Bond Day. Aston Martin 6 Litre V12 DBS 2-Door Coupe.
Story first published: Saturday, September 8, 2012, 11:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark