ಡಸ್ಟರ್ vs ಎರ್ಟಿಗಾ: ಯಾವುದು ಬೆಟರ್

Posted By:
<ul id="pagination-digg"><li class="next"><a href="/four-wheelers/2012/ertiga-vs-duster-engine-mileage-compare-002577.html">Next »</a></li></ul>
To Follow DriveSpark On Facebook, Click The Like Button
ಮಾರುತಿ ಸುಜುಕಿ ಎರ್ಟಿಗಾ ಮತ್ತು ರೆನೊ ಡಸ್ಟರ್ ಇತ್ತೀಚೆಗೆ ದೇಶದ ರಸ್ತೆಗೆ ಆಗಮಿಸಿದ ಕಾರುಗಳು. ಅದರಲ್ಲಿ ಎರ್ಟಿಗಾ ಎಲ್ ಯುವಿ ಕೆಟಗರಿಗೆ ಸೇರಿದರೆ, ಡಸ್ಟರ್ ಎಸ್ ಯುವಿ ಕುಟುಂಬಕ್ಕೆ ಸೇರುತ್ತದೆ. ಇವೆರಡೂ ಕಾರುಗಳಲ್ಲಿ ಸಾಕಷ್ಟು ಸಾಮ್ಯತೆ ಮತ್ತು ಭಿನ್ನತೆಗಳು ಗಮನ ಸೆಳೆಯುತ್ತವೆ. ಇವೆರಡು ಕಾರುಗಳ ಪುಟ್ಟ ಹೋಲಿಕೆ ಇಲ್ಲಿದೆ.

ದರ: ರೆನೊ ಡಸ್ಟರ್ ಆರಂಭಿಕ ದರ 7.19 ಲಕ್ಷ ರುಪಾಯಿ. ಮಾರುತಿ ಸುಜುಕಿ ಎರ್ಟಿಗಾ ಆರಂಭಿಕ ದರ 6.12 ಲಕ್ಷ ರುಪಾಯಿ. ಇವೆರಡೂ ಎಕ್ಸ್ ಶೋರೂಂ ದರಗಳು. ಎಂಪಿವಿ ಮತ್ತು ಎಸ್ ಯುವಿ ನಡುವೆ ದರ ಅಂತರ ಕಡಿಮೆಯಿದೆ. ದರದ ವಿಷಯದಲ್ಲಿ ಎರ್ಟಿಗಾ ಅಗ್ಗ.

ಎಕ್ಸ್ ಟೀರಿಯರ್: ರೆನೊ ಡಸ್ಟರ್ - ಉದ್ದ 4315 ಮಿ.ಮೀ, ಅಗಲ 1,822 ಮಿ.ಮೀ., ಎತ್ತರ 1,695 ಮಿ.ಮೀ. ಮತ್ತು ವೀಲ್ ಬೇಸ್ 2,673 ಮಿ.ಮೀ. ಮಾರುತಿ ಎರ್ಟಿಗಾ ಕಾರಿನ ಉದ್ದ 4,265 ಮಿ.ಮೀ., ಅಗಲ 1,695 ಮಿ.ಮೀ., ಎತ್ತರ 1,685 ಮಿ.ಮೀ. ಮತ್ತು ವೀಲ್ ಬೇಸ್ 2,740 ಮಿ.ಮೀ. ಇದೆ. ಹೀಗಾಗಿ ಗಾತ್ರದಲ್ಲಿ ಅಷ್ಟೇನೂ ವ್ಯತ್ಯಾಸ ಗೋಚರವಾಗುವುದಿಲ್ಲ.

ಇಂಟಿರಿಯರ್: ದಸ್ಟರ್ ಇಂಟಿರಿಯರ್ ಸುಂದರವಾಗಿದ್ದು, ಅತ್ಯುತ್ತಮ ಗುಣಮಟ್ಟದ ಮೆಟಿರಿಯಲ್ಸ್ ಇರುವುದರಿಂದ ಆರಾಮದಾಯಕ ಸವಾರಿಗೆ ಪೂರಕವಾಗಿದೆ. ವಿನ್ಯಾಸ ಅತ್ಯುತ್ತಮವಾಗಿದ್ದು, ಹತ್ತು ಹಲವು ಫೀಚರುಗಳಿವೆ. ಡಸ್ಟರ್ ಇಂಟಿರಿಯರ್ ಗುಣಮಟ್ಟವೂ ಎರ್ಟಿಗಾ ಕಾರಿಗಿಂತ ಅತ್ಯುತ್ತಮವಾಗಿ ಗೋಚರಿಸುತ್ತದೆ. ಆದರೆ ಎರ್ಟಿಗಾಕ್ಕೆ ಹೋಲಿಸಿದರೆ ಡಸ್ಟರ್ ವಿನ್ಯಾಸ ಸರಳವಾಗಿದೆ. ಎರ್ಟಿಗಾ ಡ್ಯಾಷ್ ಬೋರ್ಡ್ ಸ್ವಿಫ್ಟ್ ಅಥವಾ ಡಿಜೈರ್ ನಂತೆ ಸ್ಪೋರ್ಟಿಯಾಗಿ ಭಾಸವಾಗುತ್ತದೆ. ಮೆಟಿರಿಯಲ್ ಗುಣಮಟ್ಟ ಉತ್ತಮ, ವಿನ್ಯಾಸವೂ ಓಕೆ.

ಸ್ಥಳಾವಕಾಶ ವಿಷಯದಲ್ಲಿ ಎರ್ಟಿಗಾ ಉದ್ದವಾಗಿದೆ. ಆದರೆ ಎರ್ಟಿಗಾದಷ್ಟು ಅಗಲವಾಗಿಲ್ಲ. ಎರ್ಟಿಗಾದಲ್ಲಿ ಮೂರು ಸಾಲಿನ ಸೀಟುಗಳಿವೆ. ಡಸ್ಟರ್ ಕಾರಿನಲ್ಲಿ 5 ಸೀಟು ಮಾತ್ರವಿದೆ. ಆದರೆ ಡಸ್ಟರ್ ಲಗೇಜ್ ಸ್ಥಳಾವಕಾಶ ವಿಶಾಲವಾಗಿದೆ. ಎರ್ಟಿಗಾದಲ್ಲಿ 7 ಜನರು ಕುಳಿತರೆ ಬೂಟ್ ಸ್ಥಳಾವಕಾಶ, ಲಗೇಜ್ ಸ್ಥಳಾವಕಾಶ ಕಡಿಮೆಯಿದೆ. ಆದರೆ ಎರ್ಟಿಗಾ ಐದು ಸೀಟು ಮಾತ್ರ ಬಳಕೆ ಮಾಡಿದರೆ ಹಿಂಭಾಗದ ಸೀಟನ್ನು ಲಗೇಜ್ ಸ್ಥಳಾವಕಾಶವಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ.

ಇಂಟಿರಿಯರ್ ವಿಷಯದಲ್ಲಿ ಇವೆರಡೂ ಕಾರುಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ. ಹೀಗಾಗಿ ಇದೇ ಕಾರು ಬೆಟರ್ ಎಂದು ಇದಮಿತ್ಥಂ ಹೇಳುವ ಹಾಗಿಲ್ಲ.

ಮುಂದಿನ ಪುಟ ನೋಡಿ>>

<ul id="pagination-digg"><li class="next"><a href="/four-wheelers/2012/ertiga-vs-duster-engine-mileage-compare-002577.html">Next »</a></li></ul>
English summary
Maruti Suzuki Ertiga and Renault Duster comparison. Eriga and Duster Interior and Exterior comparison. Price, Dimensions comparison. Ertiga vs Duster.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark