500 ಸಿಬ್ಬಂದಿ ನೇಮಕಾತಿಗೆ ಮಾರುತಿ ಸುಜುಕಿ ನಿರ್ಧಾರ

ದೇಶದ ಬೃಹತ್ ಪ್ರಯಾಣಿಕ ಕಾರು ತಯಾರಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಸುಮಾರು 500 ಸಿಬ್ಬಂದಿ ನೇಮಕಾತಿ ಮಾಡಲು ಯೋಜಿಸಿದೆ. ಕಂಪನಿಯು ಮಾನೆಸರ್ ಘಟಕಕ್ಕೆ ನೂತನ ನೇಮಕಾತಿ ಮಾಡಲಿದೆ. ಇಲ್ಲಿ ಕಂಪನಿಯು ಎರಡು ಘಟಕ ಹೊಂದಿದೆ. ಒಂದು ಘಟಕ ಕಳೆದ ವರ್ಷವಷ್ಟೇ ಆರಂಭವಾಗಿತ್ತು. ಇಲ್ಲಿ ಕಂಪನಿಯು ಡೀಸೆಲ್ ಕಾರುಗಳನ್ನು ನಿರ್ಮಿಸುತ್ತಿದೆ.

ಪ್ರಸಕ್ತ ವರ್ಷದಿಂದ ಡೀಸೆಲ್ ಕಾರುಗಳ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿರುವುದು ಸಿಬ್ಬಂದಿ ಹೆಚ್ಚಳ ನಿರ್ಧಾರಕ್ಕೆ ಕಾರಣವಾಗಿದೆ. ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಜೈರ್ ಕಾರುಗಳ ಬೇಡಿಕೆ ಹೆಚ್ಚಿದ್ದು, ವೇಟಿಂಗ್ ಪಿರೆಯಿಡ್ ಕೂಡ ಹೆಚ್ಚಾಗಿದೆ. ಹೀಗಾಗಿ ಕಂಪನಿಯು ತ್ವರಿತವಾಗಿ ವಾಹನ ಉತ್ಪಾದಿಸುವ ಒತ್ತಡಕ್ಕೆ ಸಿಲುಕಿದೆ.

ಇದರೊಂದಿಗೆ ಕಂಪನಿಯು ಮಾನೆಸರ್‌ನಲ್ಲಿ ಮೂರನೇ ಘಟಕವೊಂದನ್ನು ನಿರ್ಮಿಸುತ್ತಿದೆ. ಇದು ಇನ್ನು ಕೆಲವೇ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಸಿಬ್ಬಂದಿ ನೇಮಕಾತಿ ಕುರಿತು ಮಾರುತಿ ಸುಜುಕಿ ಖಚಿತಪಡಿಸಿದೆ. "ಮಾನೆಸರ್ ಬಿ ಘಟಕಕ್ಕೆ ನಮಗೆ ಹೆಚ್ಚು ಸಿಬ್ಬಂದಿ ಅಗತ್ಯವಿದೆ. ಈ ಆರ್ಥಿಕ ವರ್ಷಾಂತ್ಯದೊಳಗೆ ಸುಮಾರು 500 ಜನರನ್ನು ನೇಮಕ ಮಾಡಿಕೊಳ್ಳಲಿದ್ದಢವೆ" ಎಂದು ಮಾರುತಿ ಸುಜುಇ ಇಂಡಿಯಾ ವ್ಯವಸ್ಥಾಪಕಾಧಿಕಾರಿ(ಅಡ್ಮಿನ್) ಎಸ್ ವೈ ಸಿದ್ದಿಕ್ ಹೇಳಿದ್ದಾರೆ.

ಕಂಪನಿಯು ಶಿಕ್ಷಿತ ಟೆಕ್ನಿಶಿಯನ್, ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳಲಿದೆ. ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಸದ್ಯ ಕಂಪನಿಯು ಗುರ್‌ಗಾಂವ್ ಘಟಕದ ಸಿಬ್ಬಂದಿಗಳನ್ನು ತಾತ್ಕಾಲಿಕ ಅವಧಿಗೆ ಮಾನೆಸರಿಗೆ ಕರೆಸಿಕೊಳ್ಳುತ್ತಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

Most Read Articles

Kannada
English summary
Maruti Suzuki India has plans to hire 500 new workers at its plant in Manesar. Manesar has two production units with the second one being opened late last year. This unit is crucial for Maruti as it builds the diesel cars that are selling like hotcakes.
Story first published: Monday, April 16, 2012, 9:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X