ಡಿಜೈರ್ ಮೂಲಕ ಡಿಂಗ್ ಡಾಂಗ್ ಮಾಡಲಿದೆಯೇ ಮಾರುತಿ

New Swift Dzire
ದೇಶದ ಬೃಹತ್ ಪ್ರಯಾಣಿಕ ಕಾರು ಕಂಪನಿ ಮಾರುತಿ ಸುಜುಕಿ ಇಂಡಿಯಾ(ಎಂಎಸ್ಐ) ಮಾರುಕಟ್ಟೆ ಕಳೆದ ವರ್ಷ ಕೊಂಚ ಹಿನ್ನಡೆಯನ್ನು ಅನುಭವಿಸಿತ್ತು. ಇದೀಗ ಕಂಪನಿಯು ನೂತನ ಡಿಜೈರ್ ಮೂಲಕ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.

ನೂತನ ಡಿಜೈರ್ ಸೆಡಾನ್ ಕಾರಿನ ದರವನ್ನು ಹಳೆಯ ಡಿಜೈರಿಗಿಂತ 25-30 ಸಾವಿರ ರು. ಕಡಿಮೆಗೆ ಕಂಪನಿ ಮಾರಾಟ ಮಾಡುತ್ತಿದೆ. ಇದು ಕೂಡ ಈ ಕಾರಿನ ಬೇಡಿಕೆ ಹೆಚ್ಚಳಕ್ಕೆ ನೆರವಾಗುವ ನಿರೀಕ್ಷೆಯಿದೆ.

"ಆಟೋಮ್ಯಾಟಿಕ್ ಟ್ರಾನ್ಸ್ ಮೀಷನ್ ಸೇರಿದಂತೆ ಹಲವು ಆಸಕ್ತಿದಾಯಕ ಬದಲಾವಣೆಗಳನ್ನು ನಮ್ಮ ಎಂಜಿನಿಯರುಗಳು ಮಾಡಿದ್ದಾರೆ. ಇದರಿಂದ ನಗರದ ಯುವ ಕುಟುಂಬಗಳ ಸವಾರಿಗೆ ನೂತನ ಡಿಜೈರ್ ಹೆಚ್ಚು ಅನುಕೂಲಕರವಾಗಿದೆ" ಎಂದು ಕಂಪನಿಯ ಎಂಡಿ ಶಿಂಝೊ ನಕನಿಶಿ ಹೇಳಿದ್ದಾರೆ.

ಎಂಟ್ರಿ ಸೆಡಾನ್ ಮಾರುಕಟ್ಟೆಯ ನಾಯಕ ಡಿಜೈರ್ ಗೆ ಈಗ ಅತ್ಯಧಿಕ ಬೇಡಿಕೆಯಿದೆ. ಕಂಪನಿಯು ನೀಡುವ ಲೆಕ್ಕದ ಪ್ರಕಾರ ತಿಂಗಳಿಗೆ 8-9 ಸಾವಿರ ಡಿಜೈರ್ ಕಾರುಗಳು ಮಾರಾಟವಾಗುತ್ತಿದೆಯಂತೆ.

ನೂತನ ಡಿಜೈರ್ ಪೆಟ್ರೋಲ್ ಆವೃತ್ತಿ ದರ ಸುಮಾರು 4.79 ಲಕ್ಷ ರು.ನಿಂದ 6.19 ಲಕ್ಷ ರು.ವರೆಗಿದೆ. ಡೀಸೆಲ್ ಆವೃತ್ತಿ ದರ 5.9 ಲಕ್ಷ ರು.ನಿಂದ ಆರಂಭವಾಗುತ್ತದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Maruti Suzuki India expects the new Dzire to creat a huge Sales. Entry level sedan new Dzire price between Rs 4.79 lakh and Rs 6.19 lakh.
Story first published: Thursday, February 23, 2012, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X