ಮರ್ಸಿಡಿಸ್ ಅಗ್ಗದ ಬಿಕ್ಲಾಸ್ ಕಾರು ರಸ್ತೆಗೆ, ದರವೆಷ್ಟು?

Posted By:

ಮರ್ಸಿಡಿಸ್ ಬೆಂಝ್ ಇಂಡಿಯಾ ನೂತನ ಬಿ ಕ್ಲಾಸ್ ಸ್ಪೋರ್ಟ್ಸ್ ಟೂರರ್ ಕಾರನ್ನು ದೇಶಕ್ಕೆ ಪರಿಚಯಿಸಿದೆ. ಇದರ ದರ ಸುಮಾರು 21.49 ಲಕ್ಷ ರುಪಾಯಿ. ಜರ್ಮನ್ ಕಾರು ಕಂಪನಿಯು ದೇಶದ ರಸ್ತೆಗೆ ಪರಿಚಯಿಸಿದ ಅಗ್ಗದ ಕಾರಿದು. ಕಂಪನಿಯ ಉಳಿದ ಕಾರುಗಳೆಲ್ಲ ಇದಕ್ಕಿಂತ ದುಬಾರಿಯಾಗಿವೆ.

ನೂತನ ಬಿ-ಕ್ಲಾಸ್ ಕಾರಿನ ಬುಕ್ಕಿಂಗ್ (ಸೆ 18) ಆರಂಭವಾಗಿದೆ. ಆದರೆ ಈ ಕಾರು ಗ್ರಾಹಕರ ಕೈ ಸೇರಲು ಗ್ರಾಹಕರು ಜನವರಿ 2013ರವರೆಗೆ ಕಾಯುವುದು ಅನಿವಾರ್ಯ. ನೂತನ ಬಿಕ್ಲಾಸ್ ಕಾರು ಒಂದು ಎಂಜಿನ್ ಮತ್ತು ಎರಡು ಆವೃತ್ತಿಗಳಲ್ಲಿ ದೊರಕುತ್ತದೆ.

* ಮರ್ಸಿಡಿಸ್ ಬೆಂಝ್ ಬಿ180: ದರ- 21.49 ಲಕ್ಷ ರು.

* ಮರ್ಸಿಡಿಸ್ ಬೆಂಝ್ ಬಿ 180 ಸ್ಪೋರ್ಟ್: ದರ- 24.87 ಲಕ್ಷ ರು.

ದೇಶದ ಯುವ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ನೂತನ ಕಾರನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯ ಡೀಲರುಗಳು ಈ ಹಿಂದೆಯೇ ಬಿಕ್ಲಾಸ್ ಕಾರನ್ನು ಬುಕ್ಕಿಂಗ್ ಮಾಡಲು ಅವಕಾಶ ಕೊಟ್ಟಿದ್ದರು. ಈಗಾಗಲೇ ಬುಕ್ಕಿಂಗ್ ಮಾಡಿರುವರಿಗೆ ಮುಂದಿನ ಕೆಲವೇ ದಿನಗಳಲ್ಲಿ ಕಾರನ್ನು ಕಂಪನಿಯು ಡೆಲಿವರಿ ಮಾಡಲಿದೆ.

ನೂತನ ಕಾರಿನ ಕೆಲವು ಫೀಚರುಗಳು

* 7ಜಿ ಡ್ಯೂಯಲ್ ಕ್ಲಚ್ ಟ್ರಾನ್ಸ್ ಮಿಷನ್

* ಬ್ಲೂಟೂಥ್ ಕನೆಕ್ಟಿವಿಟಿ

* ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್(ನೋಡಲು ಐಪ್ಯಾಡ್ ನಂತೆ ಇದೆ).

* ಏಳು ಏರ್ ಬ್ಯಾಗ್, ಡಿಸ್ಕ್ ಬ್ರೇಕ್, ಅಟೆನ್ಷನ್ ಅಸಿಸ್ಟ್ ಸೇರಿದಂತೆ ಹಲವು ಸುರಕ್ಷತೆಯ ಫೀಚರುಗಳು

* ಇಂಧನ ದಕ್ಷತೆ ಹೆಚ್ಚಿಸುವ ಇ-ಸ್ಟಾರ್ಟ್/ಸ್ಟಾಪ್ ಬಟನ್.

* ಮೈಲೇಜ್: 14.8 ಕಿ.ಮೀ.

* ಬಿ ಕ್ಷೆನನ್ ಹೆಡ್ ಲ್ಯಾಂಫ್

English summary
Mercedes-Benz India has launched its new B-Class Sports Tourer with a price tag of Rs.21.49 lakhs. This will mean the new B-Class is the German premium carmaker's cheapest car in India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark