ಮಾರುತಿ ಎರ್ಟಿಗಾ, ಮಹೀಂದ್ರ ಎಕ್ಸ್‌ಯುವಿಗೆ ಧನ್ಯವಾದ

Posted By:

ದೇಶದ ಕಾರು ಮಾರುಕಟ್ಟೆಯಲ್ಲಿ ಯಾವಾಗಲೂ ಸಣ್ಣಕಾರುಗಳೇ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ನಂತರ ಸೆಡಾನ್ ಮತ್ತು ತದನಂತರ ಮಲ್ಟಿ ಯುಟಿಲಿಟಿ ವೆಹಿಕಲ್ ಮಾರಾಟವಾಗುತ್ತಿದ್ದವು. ಇದೊಂದು ಅಲಿಖಿತ ಸಂಪ್ರದಾಯದಂತೆ ಮುಂದುವರೆಯುತ್ತಿತ್ತು. ಆದರೆ..

ಆದರೆ ಪ್ರಪ್ರಥಮ ಬಾರಿಗೆ ಮಲ್ಟಿ ಯುಟಿಲಿಟಿ ವಾಹನ ಮಾರಾಟವು ಸೆಡಾನ್ ಕಾರುಗಳ ಮಾರಾಟವನ್ನು ಹಿಂದಿಕ್ಕಿದೆ. ಹ್ಯಾಚ್ ಬ್ಯಾಕ್ ನಂತರ ಅತ್ಯಧಿಕ ಮಾರಾಟದ ಎರಡನೇ ಸೆಗ್ಮೆಂಟ್ ಆಗಿ ಎಂಯುವಿಗಳು ಹೊರಹೊಮ್ಮಿವೆ. ಥ್ಯಾಂಕ್ಸ್ ಮಹೀಂದ್ರ ಎಕ್ಸ್‌ಯುವಿ500.

To Follow DriveSpark On Facebook, Click The Like Button

ಸೆಡಾನ್ ಕಾರು ಮಾರಾಟವನ್ನು ಎಂಯುವಿ ಸೆಗ್ಮೆಂಟ್ ಹಿಂದಿಕ್ಕಿಲು ಮಹೀಂದ್ರ ಎಕ್ಸ್ ಯುವಿ ಮತ್ತು ಮಾರುತಿ ಎರ್ಟಿಗಾ ಪ್ರಮುಖ ಕಾರಣ. ಇಲ್ಲಿವರೆಗೆ ಟೊಯೊಟಾ ಇನ್ನೋವಾ ಮಾತ್ರ ಈ ಸೆಗ್ಮೆಂಟಿನಲ್ಲಿ ಪಾರುಪತ್ಯ ನಡೆಸುತ್ತಿತ್ತು. ಇದೀಗ ಎರ್ಟಿಗಾ, ಎಕ್ಸ್ ಯುವಿ ಆಗಮಿಸಿ ಎಂಯುವಿ ಮಾರುಕಟ್ಟೆಯ ಪಾಲು ಹಿಗ್ಗಿಸಿಕೊಂಡಿವೆ.

ಸೆಡಾನ್ ಕಾರುಗಳ ದರದ ಆಸುಪಾಸಿನಲ್ಲಿ ದೊರಕುವ ಮಹೀಂದ್ರ ಎಕ್ಸ್ ಯುವಿ 500 ಕಾರು ಅತ್ಯಧಿಕ ಸಂಖ್ಯೆಯಲ್ಲಿ ಬೇಡಿಕೆ ಪಡೆದುಕೊಂಡಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಸುಮಾರು 9 ಸಾವಿರ ಎಕ್ಸ್ ಯುವಿಗಳು ಮಾರಾಟವಾಗಿದ್ದವು. ಆದರೆ ಅದೇ ಸಮಯದಲ್ಲಿ ಟೊಯೊಟಾ ಕೊರೊಲಾ ಆಲ್ಟಿಸ್, ಷೆವರ್ಲೆ ಕ್ರೂಝ್, ಹೋಂಡಾ ಸಿವಿಕ್ ಮತ್ತು ಸ್ಕೋಡಾ ಲಾರಾ ಮಾರಾಟ ಕೇವಲ 6,500 ಯುನಿಟ್ ಆಗಿತ್ತು.

ಡಿ ಸೆಗ್ಮೆಂಟಿನಲ್ಲಿ XUV 500 ಪ್ರಾಬಲ್ಯ ಮೆರೆದೆರೆ, ಸಿ ಸೆಗ್ಮೆಂಟಿನಲ್ಲಿ ಎರ್ಟಿಗಾ ಪಾರುಪತ್ಯ ನಡೆಸಿತ್ತು. ಸೆ ಸೆಗ್ಮೆಂಟಿನಲ್ಲಿ ಮಾರಾಟ ಕಾಣುವ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಫೋರ್ಡ್ ಫಿಯೆಸ್ಟಾ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಿದೆ.

ಎರ್ಟಿಗಾ ರಸ್ತೆಗಿಳಿದ ಮೊದಲ ತಿಂಗಳಲ್ಲೇ ಸುಮಾರು 6,500 ಯುನಿಟ್ ಮಾರಾಟವಾಗಿತ್ತು. ಆದರೆ ಇನ್ನೋವಾ 20 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟವಾಗಿತ್ತು.

English summary
The Indian car market had a clear hierarchy in terms of sales volumes. Hatchbacks stand at the top spot followed by sedans and the MUVs But the previous quarter ending June has revealed a marked difference in this hierarchy. MUVs have overtaken sedans to become the second best selling vehicles behind hatchbacks.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark