ಅಬ್ಬಬ್ಬಾ... ಹೊಸ ಸ್ವಿಫ್ಟ್ ಡಿಜೈರ್ ನಲ್ಲಿ 150ಕ್ಕೂ ಹೆಚ್ಚು ಫೀಚರುಗಳು!!

Posted By:
To Follow DriveSpark On Facebook, Click The Like Button
New Swift Dzire 2012
ದೇಶದ ಬೃಹತ್ ಪ್ರಯಾಣಿಕ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಶೀಘ್ರದಲ್ಲಿ ನೂತನ ಸ್ವಿಫ್ಟ್ ಡಿಜೈರ್ ಸೆಡಾನ್ ಕಾರನ್ನು ಪರಿಚಯಿಸಲಿದೆ(ರಿವ್ಯೂ ಓದಿ). ನೂತನ ಡಿಜೈರ್ 2012 ಕಾರಿನ ವಿಶೇಷತೆಗಳು, ಫೀಚರುಗಳ ಕುರಿತು ಸಾಕಷ್ಟು ಸುದ್ದಿಗಳು ನೆಟ್ ಲೋಕದಲ್ಲಿ ಹರಿದಾಡುತ್ತಿವೆ. ಹಳೆಯ ಕಾರಿನ ದರದಲ್ಲೇ ನೂತನ ಡಿಜೈರ್ ನಲ್ಲಿ ಸುಮಾರು 150ಕ್ಕೂ ಹೆಚ್ಚು ಫೀಚರುಗಳಿರಲಿವೆ ಎಂಬ ಸುದ್ದಿ ಇದೀಗ ನಮಗೆ ದೊರಕಿದೆ.

ನೂತನ ಸ್ವಿಫ್ಟ್ ಡಿಜೈರ್ ಕಾರು ಫೆಬ್ರವರಿ ಒಂದನೇ ತಾರೀಖು ರಸ್ತೆಗಿಳಿಯುವ ನಿರೀಕ್ಷೆಯಿದೆ. ಮೂರು ಪೆಟ್ಟಿಗೆ ವಿನ್ಯಾಸದ ಸೆಡಾನ್ ಕಾರನ್ನು ಸಂಪೂರ್ಣವಾಗಿ ನೂತನ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿಪಡಿಸಲು ಕಂಪನಿ ನಿರ್ಧರಿಸಿದೆ. ನೂತನ ಡಿಜೈರ್ ಕಾರಿನ ಬೂಟ್ ಸ್ಥಳಾವಕಾಶವನ್ನು ಹಳೆಯ 440 ಲೀಟರಿನಿಂದ 316 ಲೀಟರಿಗೆ ತಗ್ಗಿಸಲಾಗಿದೆ.

ನೂತನ ಡಿಜೈರ್ ಕಾರಿನಲ್ಲಿ ಶೇಕಡ 70ಕ್ಕೂ ಹೆಚ್ಚು ಬಿಡಿಭಾಗಗಳನ್ನು ಸ್ವಿಫ್ಟ್ ಕಾರಿನಿಂದ ಆಮದುಮಾಡಿಕೊಳ್ಳಲಾಗಿದೆಯೆಂದು ಮೂಲಗಳು ಹೇಳಿವೆ. ಡಿಜೈರ್ ನೂತನ ವಿನ್ಯಾಸದಿಂದ ಇಂಟಿರಿಯರ್ ಹೆಚ್ಚು ಆರಾಮದಾಯಕತೆಯಿಂದ ಕೂಡಿರಲಿದೆ.

ಆಡಿಯೋ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಇಬಿಡಿ ಮತ್ತು ಎಬಿಎಸ್, ಬ್ರೇಕ್ ಅಸಿಸ್ಟ್, ಡ್ಯೂಯಲ್ ಎಸ್ಆರ್ ಎಸ್ ಏರ್ ಬ್ಯಾಗುಗಳು ಸೇರಿದಂತೆ ಹಲವು ಫೀಚರುಗಳು ನೂತನ ಡಿಜೈರ್ ಸೆಡಾನ್ ಕಾರಿನಲ್ಲಿರಲಿದೆ.

ನೂತನ ಕಾರು ಕೆ12ಎಂ ವಿವಿಟಿ 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಹೊಂದಿರಲಿದೆ. ನಾಲ್ಕು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಕೂಡ ಇದರಲಿರಲಿದೆ. ಒಂದು ಅಂದಾಜಿನ ಪ್ರಕಾರ ನೂತನ ಡಿಜೈರ್ ಕಾರಿನ ದರ 4.94 ಲಕ್ಷ ರು.ನಿಂದ 7.30 ಲಕ್ಷ ರು. ಆಸುಪಾಸಿನಲ್ಲಿರಲಿದೆ.

English summary
India’s largest car maker Maruti Suzuki will launch New Swift Dzire February 1st 2012. New Dzire expected more then 150 features and specifications.
Story first published: Friday, January 27, 2012, 11:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark