ಹಳೆಕಾರು, ಹಳೆಬೈಕು ಖರೀದಿ ಮಾರಾಟಕ್ಕೆ ಕನ್ನಡ ತಾಣ

ಕನ್ನಡದ ಪ್ರಪ್ರಥಮ ವಾಹನ ವೆಬ್ಸೈಟ್ "ಕನ್ನಡ ಡ್ರೈವ್‌ಸ್ಪಾರ್ಕ್" ಓದುಗರಿಗೆ ಆಪ್ತಸುದ್ದಿಯೊಂದು ಇಲ್ಲಿದೆ. ಇಲ್ಲಿವರೆಗೆ ಈ ತಾಣ ವಾಹನ ಲೋಕದ ಸುದ್ದಿ, ವಿಮರ್ಶೆ, ಸಲಹೆಗಳಿಗೆ ಸೀಮಿತವಾಗಿತ್ತು. ಕಾರುಬೈಕು ಆಸಕ್ತರಿಗೆ ಅಷ್ಟು ಸಾಲದು ಅನ್ನೋ ಸಂಗತಿ ನಮಗೆ ಗೊತ್ತು. ಹೀಗಾಗಿ ಒಂದಿಷ್ಟು ಹೊಸ ಟೂಲ್‌ಗಳನ್ನು ನಾವು ಪರಿಚಯಿಸಿದ್ದೇವೆ.

ಕಾರು ಆಯ್ಕೆ ಮಾಡಲು ನೆರವಾಗುವ ಮ್ಯಾಜಿಕ್ ಟೂಲ್ ಬಗ್ಗೆ ಈ ಹಿಂದೆ ತಿಳಿಸಿದ್ದೇವು. ಇದು ಕಡಿಮೆ ಸಮಯದಲ್ಲಿ ಹೆಚ್ಚು ಮಾಹಿತಿಯನ್ನು ಪಡೆಯುವ ಸರಳ ವ್ಯವಸ್ಥೆ. ಈ ಮ್ಯಾಜಿಕ್ ಟೂಲ್‌ಗೆ ಮನಸೋತು ಸಾಕಷ್ಟು ಓದುಗರು ಮೆಚ್ಚುಗೆಯ ಪತ್ರಗಳನ್ನು, ಇಮೇಲುಗಳನ್ನು ನಮಗೆ ತಲುಪಿಸಿದ್ದಾರೆ. ಫೋನ್ ಕರೆಗಳನ್ನೂ ಮಾಡಿದ್ದಾರೆ. ನಿಮ್ಮ ಪ್ರತಿಕ್ರಿಯೆ ನಮಗೂ ತೃಪ್ತಿ ತಂದಿದೆ.

ಹೆಚ್ಚಿನ ಓದುಗರು ಸೆಕೆಂಡ್ ಹ್ಯಾಂಡ್ ಕಾರು ಮತ್ತು ಬೈಕುಗಳ ಕುರಿತು ಆಸಕ್ತಿ ತೋರಿದ್ದಾರೆ. ನನ್ನ ಬೈಕ್ ಮಾರೋದು ಹೇಗೆ? ನನಗೊಂದು ಸೆಕೆಂಡ್ ಹ್ಯಾಂಡ್ ಕಾರು ಬೇಕಿತ್ತು, ನಿಮ್ಮ ತಾಣದಲ್ಲಿ ದೊರಕುವುದೇ? ಇತ್ಯಾದಿ ಪ್ರಶ್ನೆಗಳೂ ನಮಗೆ ಬಂದಿವೆ.

ವಾಹನ ಪತ್ರಿಕೋದ್ಯಮವೆಂದರೆ ಹಾಗೆ. ಓದುಗರಿಗೆ ವಾಹನದ ಮಾಹಿತಿಯನ್ನು ನೀಡುವ ಜೊತೆಗೆ ಅವರಿಗೆ ಅನುಕೂಲವಾಗುವಂತೆ ವಾಹನ ಖರೀದಿ ಮಾರಾಟಕ್ಕೂ ಅವಕಾಶವನ್ನೂ ಕಲ್ಪಿಸಬೇಕಾಗುತ್ತದೆ. ಕನ್ನಡ ಡ್ರೈವ್‌ಸ್ಪಾರ್ಕ್ ಕೂಡ ತನ್ನ ಪ್ರೀತಿಯ ಓದುಗರಿಗೆ ಉಚಿತವಾಗಿ ತಮ್ಮ ಹಳೆಕಾರು, ಹಳೆಬೈಕು ಮಾರಾಟಮಾಡಲು ವೇದಿಕೆ ಕಲ್ಪಿಸಿದೆ.

ಹೊಸ ಕಾರು ಖರೀದಿಸುವುದು ಸುಲಭ. ಆದರೆ ಹಳೆ ಕಾರು ಮಾರಾಟ/ಖರೀದಿ ಕೊಂಚ ಕಷ್ಟ. ಹೊಸ ಕಾರಿನ ಮಾಹಿತಿ ಶೋರೂಂಗಳಲ್ಲಿ ಅಥವಾ ಇಂಟರ್ನೆಟಿನಲ್ಲಿ ದೊರಕುತ್ತದೆ. ಆದರೆ ಸೆಕೆಂಡ್ ಹ್ಯಾಂಡ್ ವಾಹನಗಳ ಬಗ್ಗೆ ಡೀಲರುಗಳು ಅಥವಾ ನಿಮ್ಮ ಪರಿಚಿತರಲ್ಲಿ ವಿಚಾರಿಸಬೇಕಾಗುತ್ತದೆ.

ಕನ್ನಡ ಡ್ರೈವ್‌ಸ್ಪಾರ್ಕ್ ಇನ್ಮುಂದೆ ಈ ಡೀಲರ್ ಮತ್ತು ಸ್ನೇಹಿತರ ಕಾರ್ಯವನ್ನು ಮಾಡಿಕೊಡುತ್ತದೆ. ನಮ್ಮ ಸಮೂಹದ Click.in ಜೊತೆ ಸೇರಿ ಸೆಕೆಂಡ್ ಹ್ಯಾಂಡ್ ವಾಹನಗಳ ಜಾಹೀರಾತು ತಾಣವನ್ನು ನಿರ್ಮಿಸಿದೆ. ಇಲ್ಲಿ ನಿಮ್ಮಲ್ಲಿರುವ ವಾಹನಗಳನ್ನು ಮಾರಾಟ ಮಾಡಬಹುದು. ಆಥವಾ ಇಲ್ಲಿ ನಿಮಗೆ ಇಷ್ಟವಾದ ಮಾಡೆಲ್ ಕಾರು ಬೈಕ್ ಗಳನ್ನು ನಿಮ್ಮ ನಗರದಲ್ಲಿ ಖರೀದಿಸಬಹುದು. ಇಷ್ಟು ಮಾತ್ರವಲ್ಲದೇ ಡ್ರೈವರ್, ಡ್ರೈವಿಂಗ್ ಕ್ಲಾಸ್ ಜಾಹೀರಾತುಗಳನ್ನೂ ನೀವಿಲ್ಲಿ ನೀಡಬಹುದು.

ಉದಾಹರಣೆಗೆ ನಿಮ್ಮಲ್ಲೊಂದು ಸೆಕೆಂಡ್ ಹ್ಯಾಂಡ್ ಕಾರು ಇದೆ ಎಂದಿಟ್ಟುಕೊಳ್ಳಿ. ನಮ್ಮ ಈ ತಾಣಕ್ಕೆ ಬಂದು ಅಲ್ಲಿರುವ ಸರಳ ಅರ್ಜಿಯಲ್ಲಿ ಕಾರಿನ ಸಾಮಾನ್ಯ ವಿವರಗಳನ್ನು ಬರೆದು ಬಿಟ್ಟಾರಾಯ್ತು. ನಿಮ್ಮ ಫೋನ್ ನಂಬರ್ ಮತ್ತು ಇಮೇಲ್‌ಗೆ ಅಪ್‌ಡೇಟ್‌ಗಳು ಬರುತ್ತವೆ. ನಿಮ್ಮ ವಾಹನದ ಚಿತ್ರಗಳನ್ನೂ ಹಾಕಲು ಅವಕಾಶವಿದೆ.

ನಮ್ಮ ಸೆಕೆಂಡ್ ಹ್ಯಾಂಡ್ ಕಾರುಬೈಕುಗಳ ತಾಣ ಒಮ್ಮೆ ನೋಡಿಬಿಡಿ.

ಒಂದಿಷ್ಟು ಸಲಹೆಗಳು

* ವಾಹನ ಖರೀದಿಗೆ ಮುನ್ನ ತಿಳಿದಿರಲಿ

* ವಾಹನ ಖರೀದಿಗೆ ಯಾವೆಲ್ಲ ದಾಖಲೆ, ಮಾಹಿತಿ ನೀಡಬೇಕು?

Most Read Articles

Kannada
English summary
Here is some good news for kannada.drivespark.com readers. We have now launched a new search engine for our readers interested to buy or sell used car. Just click on the below link to see our used car search engine.
Story first published: Tuesday, May 8, 2012, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X