ಪ್ಯೂಜೊ ಎಂಟು ಸಾವಿರ ಉದ್ಯೋಗ ಕಡಿತ

Posted By:
To Follow DriveSpark On Facebook, Click The Like Button
ಆಟೋಮೋಟಿವ್ ವಿಭಾಗವು ನಷ್ಟದಲ್ಲಿರುವುದರಿಂದ ಫ್ರಾನ್ಸಿನ ವಾಹನ ತಯಾರಿಕಾ ಕಂಪನಿ ಪಿಎಸ್ಎ ಪ್ಯೂಜೊ ಸಿಟ್ರೊಯಿನ್ ಸುಮಾರು 8 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ. ಜೊತೆಗೆ ಅಸೆಂಬಲ್ ಘಟಕಕ್ಕೆ ಬಾಗಿಲು ಹಾಕಲು ಕಂಪನಿ ನಿರ್ಧರಿಸಿದೆ.

ಪ್ಯಾರೀಸ್ ಸಮೀಪದ ಅಲ್ನೆ ಘಟಕ ಮುಚ್ಚುವುದರಿಂದ ಸುಮಾರು 3 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಮತ್ತೊಂದು ಘಟಕದಲ್ಲಿ ಸುಮಾರು 1,400ರಷ್ಟು ಉದ್ಯೋಗ ಕಡಿತ ಮಾಡಲು ಕಂಪನಿ ನಿರ್ಧರಿಸಿದೆ. ಶೀಘ್ರದಲ್ಲಿ ಕಂಪನಿಯ ಸುಮಾರು 8 ಸಾವಿರ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಪ್ಯೂಜೊ ಪ್ರಕಟಣೆಯಲ್ಲಿ ಹೇಳಿದೆ.

"ಬಿಕ್ಕಟ್ಟಿನಿಂದ ನಷ್ಟ ಹೆಚ್ಚಾಗುತ್ತಿದೆ. ಕಂಪನಿಯ ಪ್ರಾಜೆಕ್ಟುಗಳು ಅನಿಶ್ಚಿತತೆಯಲ್ಲಿವೆ" ಎಂದು ಉದ್ಯೋಗ ಕಡಿತ ಪ್ರಕಟಿಸಿದ ನಂತರ ಕಂಪನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿಲಿಪ್ ವೆರಿನ್ ಹೇಳಿದ್ದಾರೆ.

"ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕಂಪನಿಯ ನಿವ್ವಳ ನಷ್ಟ 700 ದಶಲಕ್ಷ ಯುರೋ ತಲುಪಿದೆ" ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಕಂಪನಿಯು ದೇಶದಲ್ಲೂ ಘಟಕವೊಂದನ್ನು ಸ್ಥಾಪಿಸಲು ನಿರ್ಧರಿಸಿತ್ತು. ಆದರೆ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಆ ಯೋಜನೆಯನ್ನು ಮುಂದೂಡಿದೆ.

ಪ್ಯೂಜೊ ಕಂಪನಿಯು ಪ್ರಸಕ್ತ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಪ್ಯೂಜೊ 508 ಡಿ ಎಂಬ ಕಾರನ್ನು ಅನಾವರಣ ಮಾಡಿತ್ತು.

English summary
French automaker Peugeot Citroen announced 8,000 job cuts and the closure of an assembly plant as it struggles with mounting losses at the core automotive division.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark