ಆತ್ಮವಿಮರ್ಶೆಗಿದು ಸಕಾಲವೆಂದ ರತನ್ ಟಾಟಾ

Posted By:
ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸಿಗೆ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಪ್ರಬಲ ಪ್ರತಿಸ್ಪರ್ಧಿ ಎಂದು ಷೇರುದಾರರ ಸಭೆಯಲ್ಲಿ ರತನ್ ಟಾಟಾ ಹೇಳಿದ್ದಾರೆ. ದೇಶದ ಯುಟಿಲಿಟಿ ವಾಹನ ತಯಾರಿಕಾ ಕಂಪನಿಗಳಲ್ಲಿ ಮಹೀಂದ್ರ ದೈತ್ಯವಾಗಿ ಬೆಳೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಮಹೀಂದ್ರ ಆಂಡ್ ಮಹೀಂದ್ರ ಕಂಪನಿಗೆ ಇಷ್ಟೊಂದು ಸಾಧಿಸಲು ಸಾಧ್ಯವಾಗಿರುವುದಕ್ಕೆ ನಾನು ಹೆಚ್ಚಿನ ಗೌರವ ಕೊಡುತ್ತೇನೆ. ಆದರೆ ನಮಗೆ ಅಷ್ಟು ಸಾಧಿಸಲು ಸಾಧ್ಯವಾಗಿಲ್ಲವೆಂಬುದಕ್ಕೆ ಬೇಸರ, ದುಗುಡ, ನಾಚಿಕೆಯಿದೆ" ಎಂದು ರತನ್ ಟಾಟಾ ಹೇಳಿದ್ದಾರೆ. ನಮಗಿಂತ ಮಹೀಂದ್ರ ಕಂಪನಿಯು ಯಾಕೆ ಮುಂದಿದೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವುದು ಸೂಕ್ತವೆಂದು ಟಾಟಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಪ್ರಪ್ರಥಮ ಬಾರಿಗೆ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸ್ ನ್ನು ಹಿಂದಿಕ್ಕಿದೆ. ಈ ಸಮಯದಲ್ಲಿ ಮಹೀಂದ್ರ ಕಂಪನಿಯು 61,504 ವಾಹನ ಮಾರಾಟ ಮಾಡಿದರೆ, ಟಾಟಾ ಮೋಟರ್ಸ್ 60,405 ಯುನಿಟ್ ವಾಹನ ಮಾರಾಟ ಮಾಡಿದೆ.

2012ನೇ ಆರ್ಥಿಕ ವರ್ಷದಲ್ಲಿ ಟಾಟಾ ಮೋಟರ್ಸ್ ಮೂರನೇ ಸ್ಥಾನವನ್ನು ಮರಳಿ ಪಡೆದಿತ್ತು. ಆದರೆ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೆಲವು ಸಾವಿರ ಕಾರುಗಳ ಅಂತರದಲ್ಲಿ ಮಹೀಂದ್ರ ಮೂರನೇ ಸ್ಥಾನ ಪಡೆದಿದೆ. ಟಾಟಾ ಮೋಟರ್ಸ್ ನಾಲ್ಕನೇ ಸ್ಥಾನಕ್ಕೆ ಸರಿದಿದೆ.

"ಸೋಲುಗಳು ನಾವು ಎಡವಿಬೀಳಲು ಅವಕಾಶ ನೀಡಬಹುದು" ಎಂದ ರತನ್ ಟಾಟಾ "ನಮ್ಮೆಲ್ಲ ಉದ್ಯೋಗಿಗಳು ಈ ಬದಲಾವಣೆಯ ಸಮಯದಲ್ಲಿ ಹೆಚ್ಚು ಸ್ಪಿರಿಟಿನಿಂದ ಕಂಪನಿಯನ್ನು ಮೇಲೆ ತರಲು ಯತ್ನಿಸುತ್ತಾರೆ ಎಂಬ ಭರವಸೆ ನನಗಿದೆ" ಎಂದರು.

English summary
Ratan Tata, the chairman of India's largest automobile company, Tata Motors, hails Mahindra and expressed disappointment at trailing Mahindra & Mahindra in the highly competitive passenger vehicle market.
Story first published: Saturday, August 11, 2012, 11:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark