ಸಿಬಿಎಸ್ಇ ಪಠ್ಯದಲ್ಲಿ ರಸ್ತೆ ಸುರಕ್ಷತೆಯ ಪಾಠ

Posted By:
To Follow DriveSpark On Facebook, Click The Like Button
ದೇಶವು ರಸ್ತೆ ಸುರಕ್ಷತೆಯಲ್ಲಿ ವಿಶ್ವದಲ್ಲಿಯೇ ಕೆಳಮಟ್ಟದಲ್ಲಿರುವ ಹಿನ್ನಲೆಯಲ್ಲಿ, ಈ ಕುರಿತು ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಠ್ಯದಲ್ಲಿ ರಸ್ತೆ ಸುರಕ್ಷತೆ ವಿಷಯವನ್ನು ಸೇರಿಸಲು ಕೇಂದ್ರಿಯ ಸೆಕೆಂಡರಿ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ನಿರ್ಧರಿಸಿದೆ.

ಶಿಕ್ಷಣ ಸಂಶೋಧನೆ ಮತ್ತು ತಂತ್ರಜ್ಞಾನ ವಿಭಾಗದ ರಾಷ್ಟ್ರೀಯ ಒಕ್ಕೂಟ(ಎನ್‌ಸಿಇಆರ್‌ಟಿ) ನೂತನ ರಸ್ತೆ ಸುರಕ್ಷತೆ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಇತಿಹಾಸ, ವಿಜ್ಞಾನ ಮುಂತಾದ ಪಠ್ಯ ವಿಷಯಗಳಂತೆ ರಸ್ತೆ ಸುರಕ್ಷತೆಯನ್ನೂ ವಿದ್ಯಾರ್ಥಿಗಳು ಕಲಿಯಲಿದ್ದಾರೆ ಎಂದು ಸಿಬಿಎಸ್ಇ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಓದಲು ಕಷ್ಟವಾಗುವ ಪುಟಗಟ್ಟಲೆ ಪಠ್ಯದ ಬದಲಾಗಿ ಮಕ್ಕಳು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಅನುಕೂಲವಾಗುವಂತೆ ಆಸಕ್ತಿದಾಯಕ ಮಾಹಿತಿ ತುಣುಕುಗಳು ಪಠ್ಯದಲ್ಲಿರಲಿವೆಯಂತೆ. ಸುರಕ್ಷಿತ ವಾಹನ ಚಾಲನೆ, ರಸ್ತೆಯಲ್ಲಿ ಸುರಕ್ಷಿತವಾಗಿರುವುದು ಸೇರಿದಂತೆ ಹಲವು ವಿಷಯಗಳು ಪಠ್ಯದಲ್ಲಿರಲಿವೆ.

"ಮಕ್ಕಳಿಗೆ ರಸ್ತೆ ಸುರಕ್ಷತೆಯನ್ನು ಪಾಠ ಮಾಡಲು ಸುಲಭ, ಸರಳವಾದ ಅನ್ವೇಷಣಾತ್ಮಕ ವಿಧಾನವನ್ನು ರೂಪಿಸಲು ಸಿಬಿಎಸ್ಇ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಜಂಟಿಯಾಗಿ ಕೆಲಸ ಮಾಡುತ್ತಿದೆ. ನೂತನ ರಸ್ತೆ ಸುರಕ್ಷತೆ ಸಿಲೆಬಸ್ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವ ನಿರೀಕ್ಷೆಯಿದೆ" ಎಂದು ಆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಆರಂಭಿಕವಾಗಿ 8 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಪಠ್ಯದಲ್ಲಿ ಮಾತ್ರ ರಸ್ತೆ ಸುರಕ್ಷತೆ ಮಾದರಿ ಪರಿಚಯಿಸಲು ನಿರ್ಧರಿಸಲಾಗಿದೆ. "ರಾಷ್ ಡ್ರೈವಿಂಗ್ ಮಾಡುವಲ್ಲಿ ಹರೆಯದ ಯುವಕರ ಪಾಲು ಹೆಚ್ಚಿದೆ. ಇದೇ ವಯಸ್ಸಿನಲ್ಲಿ ರಸ್ತೆ ಸುರಕ್ಷತೆ ಕುರಿತು ಕಲಿತರೆ ಸುರಕ್ಷತೆ ಸವಾರಿಗೆ ಸಹಕರಿಯಾಗಲಿದೆ" ಎಂದು ಸಿಬಿಎಸ್ಇ ವಿದ್ಯಾಲಯವೊಂದರ ಪ್ರಾಂಶುಪಾಲರೊಬ್ಬರು ಹೇಳಿದ್ದಾರೆ.

ಸಂಚಾರ ಸುರಕ್ಷತೆ ಸಲಹಾ ಸಮಿತಿ(ಟಿಎಸಿ) ಜೊತೆ ಸೇರಿ ರಾಜ್ಯ ಗೃಹ ಸಚಿವಾಲಯವೂ ಮಕ್ಕಳಿಗೆ ರಸ್ತೆ ಸುರಕ್ಷತೆ ಪಠ್ಯದ ಕುರಿತು ಪರಿಶೀಲಿಸುತ್ತಿದೆ.

ಭೇಟಿ ನೀಡಿ: ಬೆಂಗಳೂರು ಟ್ರಾಫಿಕ್ ಪೊಲೀಸ್

English summary
CBSE To Add "ROAD SAFETY" In School Curriculum. According to the Joint secretary, ministry of road transport and highways Nitin R Gokarn, road safety is being related to all the subjects for classes 8 to 12 as a part of CBSE (Central Board of Secondary Education) syllabus.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark