ಕಾರು ಸಾಲದ ಮೇಲಿನ ಬಡ್ಡಿದರ ಇಳಿಸಿದ ಎಸ್‌ಬಿಐ

Posted By:

ಕಾರು ಖರೀದಿ ಸಾಲದ ಮೇಲಿನ ಬಡ್ಡಿದರವನ್ನು ಶೇಕಡ 0.5ರಷ್ಟು ಇಳಿಕೆ ಮಾಡಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ರೆಪೊ ದರಗಳನ್ನು 0.5ರಷ್ಟು ಕಡಿತ ಮಾಡಿದ ನಂತರ ವಾಹನ ಬಡ್ಡಿದರ ಕಡಿಮೆ ಮಾಡಿದ ಪ್ರಪ್ರಥಮ ಬ್ಯಾಂಕ್ ಇದಾಗಿದೆ.

ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರ ಇಳಿಕೆ ಮಾಡಿದ ಸಂದರ್ಭದಲ್ಲಿ ಬ್ಯಾಂಕುಗಳು ವಾಹನ ಸಾಲದ ಬಡ್ಡಿ ಇಳಿಸುವ ಸೂಚನೆಯನ್ನು ಕನ್ನಡ ಡ್ರೈವ್‌ಸ್ಪಾರ್ಕ್ ನೀಡಿತ್ತು. ಈಗ ಶೇಕಡ 11ರಿಂದ ಶೇಕಡ 14.5ರವರೆಗಿನ ಬಡ್ಡಿದರದಲ್ಲಿ ಕಾರು ಸಾಲ ದೊರಕುತ್ತಿದೆ. ಇನ್ನೊಂದು ವಾರದಲ್ಲಿ ಈ ಬಡ್ಡಿದರವು ಇಳಿಕೆ ಕಾಣುವ ನಿರೀಕ್ಷೆಯಿದೆ.

ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರು ಸಾಲದ ಬಡ್ಡಿದರ ಕಡಿಮೆ ಮಾಡಿರುವುದರಿಂದ ಉಳಿದ ಬ್ಯಾಂಕುಗಳು ಬಡ್ಡಿದರ ಇಳಿಕೆ ಪ್ರಕಟಿಸುವ ನಿರೀಕ್ಷೆಯಿದೆ. ಯಾಕೆಂದರೆ ಯಾವುದೇ ಬ್ಯಾಂಕ್ ಕೂಡ ತಮ್ಮ ಗ್ರಾಹಕರು ಕಡಿಮೆ ಸಾಲ ದೊರಕುವ ಬೇರೆ ಬ್ಯಾಂಕಿಗೆ ಹೋಗುವುದನ್ನು ಬಯಸುವುದಿಲ್ಲ.

ಬಡ್ಡಿದರ ಹೆಚ್ಚಿರುವ ಹಿನ್ನಲೆಯಲ್ಲಿ ಹೆಚ್ಚಿನ ಜನರು ಕಾರು ಖರೀದಿ ಯೋಜನೆಯನ್ನು ಮುಂದೆ ತಳ್ಳುತ್ತಿದ್ದಾರೆ. ದರ ಕಡಿಮೆಯಾದರೆ ಶೋರೂಂನತ್ತ ಗ್ರಾಹಕರು ಮುಖ ಮಾಡುವ ನಿರೀಕ್ಷೆಯನ್ನು ಕಾರು ಡೀಲರುಗಳು ವ್ಯಕ್ತಪಡಿಸಿದ್ದಾರೆ.

ಇಂಧನ ದರ ಹೆಚ್ಚಳ ಮತ್ತು ಸಾಲದ ಮೇಲಿನ ಬಡ್ಡಿದರ ಹೆಚ್ಚಳ ಹಿನ್ನಲೆಯಲ್ಲಿ ದೇಶದ ವಾಹನೋದ್ಯಮ ಕಳೆದ ಮೂರು ತಿಂಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಬಡ್ಡಿದರ ಇಳಿಕೆಯ ಪ್ರಸಕ್ತ ವಿದ್ಯಮಾನ ಕಾರು ಮಾರುಕಟ್ಟೆಗೆ ತಂಗಾಳಿ ಬೀಸುವ ನಿರೀಕ್ಷೆಯಿದೆ.

English summary
State Bank Of India has announced a 0.5% cut in car loan rates. The largest Indian bank is the first one to announce a reduction in car loan rates after the Reserve Bank Of India (RBI) reduced repo rates by 50 basis points or 0.5%.
Story first published: Tuesday, April 24, 2012, 9:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark