ಸ್ಕೋಡಾ ಸೂಪರ್ಬ್ ಕಾರಲ್ಲಿ ಛತ್ರಿ ಇಡೋದು ಎಲ್ರಿ?
ಒದ್ದೆ ಕೊಡೆಯನ್ನು ಕಾರಿನಲ್ಲಿ ಎಲ್ಲೆಂದರಲ್ಲಿ ಇಡುವ ಕಷ್ಟ ಇನ್ಮುಂದೆ ಸ್ಕೋಡಾ ಸೂಪರ್ಬ್ ಗ್ರಾಹಕರಿಗಿಲ್ಲ. ಸ್ಕೋಡಾ ಸೂಪರ್ಬ್ ಕಾರಿನಲ್ಲಿ ಹೊಸ ಅಂಬ್ರೆಲ್ಲಾ ಹೋಲ್ಡರ್ ಇದೆ. ಆರಾಮವಾಗಿ ಪುಟ್ಟಕೊಡೆಯನ್ನು ಮಡುಚಿ ಇದರ ಒಳಗಿಡಬಹುದಾಗಿದೆ. ಅಂದ ಹಾಗೆ ಈ ಅಂಬ್ರೆಲ್ಲಾ ಹೋಲ್ಡರ್ ಕಾರಿನ ಹಿಂಭಾಗದ ಡೋರಿನಲ್ಲಿದೆ.
ಒದ್ದೆ ಕೊಡೆ ಇಟ್ಟು ಕಾರಿನ ಡೋರ್ ಅಥವಾ ಇಂಟಿರಿಯರ್ ಒಳಗೆ ನೀರು ತುಂಬಬಹುದೇ ಎಂದು ಭಯಪಡಬೇಕಿಲ್ಲ. ನೂತನ ಅಂಬ್ರೆಲ್ಲಾ ಹೋಲ್ಡರನ್ನು ವಿಶೇಷವಾಗಿ ರೂಪಿಸಲಾಗಿದೆ. ಈ ಹೋಲ್ಡರಿನಲ್ಲಿ ವಿಶೇಷ ದ್ವಾರವಿದ್ದು, ಕೊಡೆಯಲ್ಲಿದ್ದ ನೀರು ಸರಾಗವಾಗಿ ಹೊರಗೆ ಹೋಗುತ್ತದೆ. ಕಾರಿನ ಯಾವುದೇ ಭಾಗಗಳಿಗೆ ಹಾನಿಯಾಗುವ ಅಪಾಯವಿಲ್ಲ.
ವಿಶೇಷವೆಂದರೆ ಇಂತಹ ಫೀಚರ್ ರೋಲ್ಸ್ ರಾಯ್ಸ್ ಫಾಂಟೊಮ್, ಘೋಸ್ಟ್ ಮತ್ತು ಬೆಂಟ್ಲಿ ಮುಲ್ಸಾನ್ ಇತ್ಯಾದಿ ದುಬಾರಿ ಕಾರುಗಳಲ್ಲಿ ಮಾತ್ರವಿತ್ತು. ಇದೀಗ ಸ್ಕೋಡಾ ಸೂಪರ್ಬ್ ಗ್ರಾಹಕರಿಗೂ ಇಂತಹ ವಿಶೇಷ ಫೀಚರಿನ ಸೌಲಭ್ಯ ದೊರಕಿದೆ. ಸ್ಕೋಡಾ ಸೂಪರ್ಬ್ ಕಾರಿನ ಆರಂಭಿಕ ದರ 18 ಲಕ್ಷ ರುಪಾಯಿ ಇದೆ.


Click it and Unblock the Notifications









