ಟಾಟಾ ಮೋಟಾರ್ಸ್ ವಿನೂತನ ಸ್ಪರ್ದೆ; ಟ್ವೀಟ್ ಮಾಡಿ ಸಫಾರಿ ಗೆಲ್ಲಿರಿ!

Posted By:

ಬಹುನಿರೀಕ್ಷಿತ ಟಾಟಾ ಸಫಾರಿ ಸ್ಟ್ರೋಮ್ ಬಿಡುಗಡೆ ಮಾಡಿದ ಒಂದು ದಿನ ಬಳಿಕ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರಿಗೆ ವಿನೂತನ ಸ್ಪರ್ಧೆ ಏರ್ಪಡಿಸಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್ ಪೇಜ್‌ನಲ್ಲಿ ಟ್ವೀಟ್ ಮಾಡಿ 'ಟಾಟಾ ಸಫಾರಿ ಸ್ಟ್ರೋಮ್' ಗೆಲ್ಲುವ ಅವಕಾಶ ಮುಂದಿರಿಸಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಟ್ವಿಟರ್ ಸ್ಪರ್ದೆಯ ವಿಜೇತರು ಟಾಟಾ ಸಫಾರಿ ಸ್ಟ್ರೋಮ್ ಮನೆಗೆ ಕೊಂಡೊಯ್ಯುವ ಅವಕಾಶ ಪಡೆಯಲಿದ್ದಾರೆ.

ಅಂದ ಹಾಗೆ ನೀವು ಮಾಡಬೇಕಾಗಿರುವುದಾದರೂ ಏನು?

ಸಾಮಾಜಿಕ ಜಾಲತಾಣ ಜನಪ್ರಿಯವಾಗಿರುವ ಈ ಕಾಲಘಟ್ಟದಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ- ನಿಮ್ಮಲ್ಲಿ ಟ್ವಿಟರ್ ಅಕೌಂಟ್ ಇದ್ದಲ್ಲಿ ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅಲ್ಲದೆ ಸ್ಪರ್ಧೆಯಲ್ಲಿ ಭಾಗಿಯಾಗುವ ಸ್ಪರ್ಧಾಳುವಿಗೆ ಪ್ರತಿ ದಿನ 'ಸ್ಟ್ರೋಮ್ ಸರ್ವೈವಲ್ ಕಿಟ್' ಗೆಲ್ಲುವ ಅವಕಾಶವೂ ಇದೆ.

ಮೂರು ವಲಯಗಳಲ್ಲಾಗಿ ಸ್ಪರ್ಧೆಯನ್ನು ವಿಭಜಿಸಲಾಗಿದೆ. ಇದರಲ್ಲಿ ಸರ್ವೈವಲ್, ಟ್ವಿಲೈಟ್ ಹಾಗೂ ಡೇಂಜರ್ ಜೋನ್‌ಗಳೆಂಬ ವಿಭಾಗಗಳಿವೆ. ಹೆಚ್ಚೆಚ್ಚು ಟ್ವೀಟ್ ಮಾಡಿದವರಿಗೆ ಸಫಾರಿ ಸ್ಟ್ರೋಮ್ ಗೆಲ್ಲುವ ಅವಕಾಶ ಹೆಚ್ಚಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 'ಬ್ರೇವ್‌ದಿಸ್ಟ್ರೋಮ್ ಡಾಟ್ ಕಾಮ್‌'ಗೆ ತೆರಳಿ ಮಾಹಿತಿ ಪಡೆಯಬಹುದು.

ಆಟೋಮೊಬೈಲ್ ರಂಗದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಉತ್ತೇಜನ ಜಾಸ್ತಿಯಾಗಿಯೇ ಕಂಡುಬರುತ್ತಿದೆ. ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಇರಾದೆಯನ್ನು ಕಂಪೆನಿ ಹೊಂದಿದೆ. ಈಗಾಗಾಲೇ 6.31 ಅಭಿಮಾನಿಗಳನ್ನು ಹೊಂದಿರುವ ಸಫಾರಿ ಸ್ಟ್ರೋಮ್ ಫೇಸ್‌ಬುಕ್ ಪೇಜ್‌ನಲ್ಲಿ ಬಿರುಗಾಳಿ ಬೀಸುತ್ತಿದೆ.

English summary
A day after the launch of the much-awaited Tata Safari Storme, the company has announced a three-day contest in which the winner gets to drive home the all-new Tata Safari Storme. The contest, exclusive to Twitter users, requires participants to answer a question every day in the wittiest manner possible. 

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark