ಟಾಟಾ ವಾಹನಗಳಿಗೆ ಮೇಡ್ ಇನ್ ಚೈನಾ ಬಿಡಿಭಾಗ?

Posted By:
ದೇಶದಲ್ಲಿ ಲಭ್ಯವಿರದ ವಾಹನ ಬಿಡಿಭಾಗಳನ್ನು ಚೀನಾದಿಂದ ಖರೀದಿಸುವ ಕುರಿತು ಆಲೋಚಿಸುತ್ತಿರುವುದಾಗಿ ಟಾಟಾ ಮೋಟರ್ಸ್ ಚೇರ್ಮನ್ ರತನ್ ಟಾಟಾ ಹೇಳಿದ್ದಾರೆ. ಕಾರುಗಳಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೇರಿದಂತೆ ದೇಶದಲ್ಲಿ ಲಭ್ಯವಿರದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಯೋಜನೆ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ಜಗತ್ತಿಗೆ ಅಗ್ಗದ ಕಾರು ನಿರ್ಮಿಸಿ ಕೊಟ್ಟ ಟಾಟಾ ಮೋಟರ್ಸ್ ದೇಶದಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ವಾಹನಗಳನ್ನು ಉತ್ಪಾದಿಸುತ್ತಿಲ್ಲ. ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೋಟರ್ಸ್ ಸೇರಿದಂತೆ ಹೆಚ್ಚಿನ ಕಂಪನಿಗಳು ದೇಶದಲ್ಲಿ ಆಟೋಮ್ಯಾಟಿಕ್ ಕಾರುಗಳನ್ನು ಉತ್ಪಾದಿಸುತ್ತಿವೆ. ಹೀಗಾಗಿ ಟಾಟಾ ಕೂಡ ಆಟೋಮ್ಯಾಟಿಕ್ ಆಗಿ ಇಂತಹ ಗೇರ್ ಕಾರುಗಳನ್ನು ಉತ್ಪಾದಿಸುವ ಯೋಜನೆಯಲ್ಲಿದೆ.

ಚೀನಾದಲ್ಲಿ ಬಿಡಿಭಾಗಗಳು ಅಗ್ಗವಾಗಿ ದೊರಕುವುದು ಕೂಡ ಕಂಪನಿಗೆ ಲಾಭವಾಗಲಿದೆ. ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೇರಿದಂತೆ ಹಲವು ಬಿಡಿಭಾಗಗಳನ್ನು ನೆರೆ ರಾಷ್ಟ್ರಗಳಿಂದ ಖರೀದಿಸಲಾಗುವುದು ಎಂದು ರತನ್ ಟಾಟಾ ಹೇಳಿದ್ದಾರೆ.

ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕಂಪನಿಯ ಟ್ರಕ್ ಗಳು, ಸೆಡಾನ್ ಮತ್ತು ಯುಟಿಲಿಟಿ ವಾಹನಗಳ ಲಾಭವು ಕಳೆದ ಮೂರು ವರ್ಷಗಳಲ್ಲೇ ಕಡಿಮೆ ಮಟ್ಟಕ್ಕೆ ತಲುಪಿದೆ. ಟೊಯೊಟಾ ಮೋಟರ್ ಮತ್ತು ಫೋರ್ಡ್ ಕಂಪನಿಗಳು ಟಾಟಾ ಷೇರುಗಳಿಗೆ ಕನ್ನ ಹಾಕುತ್ತಿವೆ.

"ಅತ್ಯಧಿಕ ಬೇಡಿಕೆಯಿರುವ ಸೆಗ್ಮೆಂಟಿಗೆ ಪ್ರವೇಶಿಸುವುದು ಕಂಪನಿಗೆ ಅಗತ್ಯವಾಗಿದೆ. ಇದಕ್ಕಾಗಿ ದೇಶದ ಪೂರೈಕೆದಾರರು ಪೂರೈಕೆ ಮಾಡಲಾಗದ ಬಿಡಿಭಾಗಗಳಿಗೆ ಚೀನಾವನ್ನು ಅವಲಂಬಿಸುವುದು ಸರಿಯಾದ ಕ್ರಮ" ಎಂದು ಉದ್ಯಮ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

English summary
Indian auto giant Tata Motors is planning to buy auto components not available in the country from China, said company chairman Ratan Tata. The carmaker is looking to offer its cars with automatic transmission for which components are not available in India.
Story first published: Tuesday, July 10, 2012, 14:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark