Just In
Don't Miss!
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೊಯೊಟಾ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭ
ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಪ್ರಥಮ ಬಾರಿಗೆ ಉಪನಾಯಕ ಪಟ್ಟ ಗಳಿಸಿದ್ದ ಕೋಹ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮವಾಗಿ ಆಡಿ ಗಮನಸೆಳೆಯುತ್ತಿದ್ದಾರೆ. ಇದೀಗ ರಾಟ್ ಕೊಹ್ಲಿಯನ್ನು ಕಂಪನಿಯ ನೂತನ ಬ್ರಾಂಡ್ ಅಂಬಾಸಡರ್ ಆಗಿ ಟೊಯೊಟಾ ಮೋಟರ್ಸ್ ನೇಮಕಮಾಡಿಕೊಂಡಿದೆ.
"ಯಶಸ್ಸಿಗೆ ಬೆಂಬಲ ಮತ್ತು ಹುರುಪು ನೀಡುವ ಟೊಯೊಟಾ ನನಗೆ ಅಚ್ಚುಮೆಚ್ಚು" ಎಂದು ಬ್ರಾಂಡ್ ಅಂಬಾಸಡರ್ ಆಗಿ ನೇಮಕಗೊಂಡ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ. ದೇಶದ ಯುವಕರನ್ನು ಡ್ರೈವಿಂಗ್ ಮೂಲಕ ಸಂಪರ್ಕ ಕಲ್ಪಿಸುವ ಟೊಯೊಟಾದ ಕುರಿತು ಅವರು ಈ ಸಂದರ್ಭದಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
"ವಿರಾಟ್ ಕೊಹ್ಲಿ ನಮ್ಮ ಕಂಪನಿಯ ಬ್ರಾಂಡ್ ಅಂಬಾಸಡರ್ ಆಗಿದ್ದಾರೆಂದು ಘೋಷಿಸಲು ನಮಗೆ ಸಂತೋಷವಾಗುತ್ತಿದೆ. ನಮ್ಮ ವಾಹನಗಳ ಮೂಲಕ ಗ್ರಾಹಕರಿಗೆ ಪ್ಯಾಷನ್. ತಾಕತ್ತು, ಶಕ್ತಿ, ಸಂತೋಷ, ಮೋಜು, ಸಡಗರ ಇತ್ಯಾದಿ ಭಾವನೆ ಹೆಚ್ಚಿಸುವಲ್ಲಿ ಕೊಹ್ಲಿ ನೆರವಾಗಲಿದ್ದಾರೆ" ಎಂದು ಟೊಯೊಟಾ ಕಿರ್ಲೊಸ್ಕರ್ ಮಾರುಕಟ್ಟೆ ವಿಭಾಗದ ಉಪ ಸಹಾಯಕ ನಿರ್ದೇಶಕ ಸಂದೀಪ್ ಸಿಂಗ್ ಹೇಳಿದ್ದಾರೆ.
ಎಟಿಯೋಸ್ ಮತ್ತು ಎಟಿಯೋಸ್ ಲಿವಾ ಟೊಯೊಟಾ ಕಂಪನಿಯು ಇತ್ತೀಚಿನ ಪ್ರಮುಖ ಕಾರುಗಳಾಗಿವೆ. ಕಂಪನಿಯು ದೇಶದ ಯುವಕರನ್ನು ಪ್ರಧಾನವಾಗಿ ಗಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ಹೊರತರುತ್ತಿದೆ. ಕಂಪನಿಯ ಇನ್ನೋವಾ ಎಂಪಿವಿ ದೇಶದಲ್ಲಿ ಬೆಸ್ಟ್ ಸೆಲ್ಲರ್. ಇದು ಹತ್ತು ಹಲವು ಆವೃತ್ತಿಗಳಲ್ಲಿ ದೊರಕುತ್ತಿದೆ. ಈ ಕಾರಿನ ಸಂಪೂರ್ಣ ವಿಮರ್ಶೆ ಓದಲು ಇಲ್ಲಿ ಕ್ಲಿಕ್ ಮಾಡಿರಿ. (ಕನ್ನಡ ಡ್ರೈವ್‌ಸ್ಪಾರ್ಕ್)