ವೆಂಟೊ ಮತ್ತು ಪೊಲೊ ಕಾರುಗಳ ದರ ಹೆಚ್ಚಾಗುತ್ತಾ?

Posted By:
ಹಬ್ಬದ ಅವಧಿಗೆ ಕಾರೊಂದು ಖರೀದಿಸಬೇಕೆಂದು ನೀವು ಪ್ಲಾನ್ ಮಾಡಿರಬಹುದು. ಆದರೆ ಇದೀಗ ಕಾರು ಕಂಪನಿಗಳು ದರ ಹೆಚ್ಚಿಸುವ ಪ್ರಕ್ರಿಯೆಯಲ್ಲಿವೆ. ನೀವು ಫೋಕ್ಸ್ ವ್ಯಾಗನ್ ಪೊಲೊ ಮತ್ತು ವೆಂಟೊ ಕಾರು ಖರೀದಿಸಲು ಯೋಜಿಸುತ್ತಿದ್ದರೆ ಶೀಘ್ರದಲ್ಲಿ ಖರೀದಿಸುವುದು ಒಳ್ಳೆಯದು.

ಜರ್ಮನಿಯ ಕಾರು ತಯಾರಿಕಾ ಕಂಪನಿ ಫೋಕ್ಸ್ ವ್ಯಾಗನ್ ಶೀಘ್ರದಲ್ಲಿ ಪೊಲೊ ಮತ್ತು ವೆಂಟೊ ಕಾರುಗಳ ದರವನ್ನು ಶೀಘ್ರದಲ್ಲಿ ಹೆಚ್ಚಿಸಲು ಯೋಜಿಸಿದೆ. ಶೀಘ್ರದಲ್ಲಿ ಫೋಕ್ಸ್ ವ್ಯಾಗನ್ ಕಂಪನಿಯ ಅತ್ಯಧಿಕ ಮಾರಾಟದ ಖ್ಯಾತಿಯ ಇವೆರಡು ಕಾರುಗಳ ದರ ಶೇಕಡ 3ರಷ್ಟು ಏರಿಕೆ ಕಾಣಲಿದೆ.

ಈಗಾಗಲೇ ಕಾರು ಕಂಪನಿಗಳು ದರ ಹೆಚ್ಚಳ ಕಾರ್ಯಕ್ರಮಕ್ಕೆ ಚಾಲನೆ ನೀಡಿಯಾಗಿದೆ. ತೀರಾ ಇತ್ತೀಚೆಗೆ ಟೊಯೊಟಾ ಕಂಪನಿಯು ದರ ಹೆಚ್ಚಳ ಮಾಡುವುದಾಗಿ ಪ್ರಕಟಿಸಿತ್ತು. ಆದರೆ ಫೋಕ್ಸ್ ವ್ಯಾಗನ್ ಕಂಪನಿಯು ಅಧಿಕೃತವಾಗಿ ಇನ್ನೂ ದರ ಹೆಚ್ಚಳ ಪ್ರಕಟಿಸಿಲ್ಲ. ಶೀಘ್ರದಲ್ಲಿ ಕಂಪನಿಯು ದರ ಹೆಚ್ಚಳ ಪ್ರಕಟಿಸುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ.

ಕಳೆದ ಜೂನ್ ತಿಂಗಳಲ್ಲಿ ಫೋಕ್ಸ್ ವ್ಯಾಗನ್ ಕಂಪನಿಯ ಕಾರು ಮಾರಾಟ ಆಶಾದಾಯಕವಾಗಿಲ್ಲ. ನೂತನ ದರ ಹೆಚ್ಚಳವು ಕಾರು ಮಾರಾಟಕ್ಕೆ ಹಿನ್ನಡೆ ಉಂಟು ಮಾಡುವ ನಿರೀಕ್ಷೆಯಿದೆ. ಆರಂಭದಲ್ಲಿ ಪೊಲೊ ಮತ್ತು ವೆಂಟೊ ಕಾರುಗಳು ಅತ್ಯುತ್ತಮ ಕಾರ್ಯಕ್ಷಮತೆಯ ಹಿನ್ನಲೆಯಲ್ಲಿ ಜನಮಾನಸವನ್ನು ಸೆಳೆದಿತ್ತು. ಆದರೆ ಇದೀಗ ಈ ಕಾರುಗಳಿಗೆ ಪೈಪೋಟಿ ನೀಡುವಂತಹ ಸಾಕಷ್ಟು ಕಾರುಗಳು ಮಾರುಕಟ್ಟೆಯಲ್ಲಿವೆ. ಇವು ಫೋಕ್ಸ್ ವ್ಯಾಗನ್ ಇಂಡಿಯಾಕ್ಕೆ ಕೊಂಚ ಹಿನ್ನಡೆ ಉಂಟು ಮಾಡಿವೆ.

ಫೋಕ್ಸ್ ವ್ಯಾಗನ್ ಪೊಲೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಪೊಲೊ ಆವೃತ್ತಿಗಳ ದೆಹಲಿ ಎಕ್ಸ್ ಶೋರೂಂ ದರ ಈ ಕೆಳಗಿನಂತೆ ಇವೆ.

ಪೊಲೊ ಟ್ರೆಂಡ್ ಲೈನ್(ಪೆಟ್ರೋಲ್): 4.57 ಲಕ್ಷ ರುಪಾಯಿ.

ಪೊಲೊ ಕಂಫರ್ಟ್ ಲೈನ್(ಪೆ): 5.08 ಲಕ್ಷ ರು.

ಪೊಲೊ ಹೈ ಲೈನ್(ಪೆ): 6.04 ಲಕ್ಷ ರು.

ಪೊಲೊ ಹೈಲೈನ್ 1.6(ಪೆ) 6.38 ಲಕ್ಷ ರು.

ಪೊಲೊ ಟ್ರೆಂಡ್ ಲೈನ್(ಡೀಸೆಲ್): 5.59 ಲಕ್ಷ ರು.

ಪೊಲೊ ಕಂಫರ್ಟ್ ಲೈನ್(ಡೀ): 6.10 ಲಕ್ಷ ರು.

ಪೊಲೊ ಹೈ ಲೈನ್(ಡೀ): 7.06 ಲಕ್ಷ ರು.

ಪೊಲೊ ಕಾರಿನ ಸೆಡಾನ್ ಆವೃತ್ತಿ ವೆಂಟೊ. ವೆಂಟೊ ಸೆಡಾನ್ ಆವೃತ್ತಿಯು ಫೋಕ್ಸ್ ವ್ಯಾಗನ್ ಕಂಪನಿಯ ಅತ್ಯಧಿಕ ಮಾರಾಟದ ಕಾರು ಕೂಡ ಹೌದು. ಸದ್ಯ ವೆಂಟೊ ಆವೃತ್ತಿಗಳ ದರ ಈ ಕೆಳಗಿನಂತೆ ಇವೆ.

ವೆಂಟೊ ಟ್ರೆಂಡ್ ಲೈನ್(ಎಂಟಿ): 6.99 ಲಕ್ಷ ರು.

ವೆಂಟೊ ಟ್ರೆಂಡ್ ಲೈನ್(ಡೀಸೆಲ್): 7.99 ಲಕ್ಷ ರು.

ವೆಂಟೊ ಹೈಲೈನ್(ಎಂಟಿ): 8.23 ಲಕ್ಷ ರು.

ವೆಂಟೊ ಹೈಲೈನ್(ಎಟಿ): 9.21 ಲಕ್ಷ ರು.

ವೆಂಟೊ ಹೈಲೈನ್(ಡೀ): 9.23 ಲಕ್ಷ ರು.

English summary
Volkswagen , the German carmaker is said to be planning to increase the price of the Polo and Vento in a few days. According to reports, VW's best selling cars will soon be costlier by as much as 3%.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark