ಗಿನ್ನೆಸ್ ಪುಟಕ್ಕೆ ವಿಶ್ವದ ಅತಿ ಉದ್ದದ ಕಾರು

ಮೊದಲ ನೋಟಕ್ಕೆ ಇದೇನು ಕಾರು ಅಥವಾ ಬಸ್ಸೇ ಎಂಬ ಅನುಮಾನ ನಿಮ್ಮಲ್ಲಿ ಸಹಜವಾಗಿ ಮೂಡಬಹುದು. ಈ ನಿಟ್ಟಿನಲ್ಲಿ ನಾವಿದನ್ನು ಮೊದಲೇ ಸ್ಪಷ್ಟಪಡಿಸಲು ಬಯಸುತ್ತೇವೆ, ಏನೆಂದರೆ ಇದು ವಿಶ್ವದ ಅತಿ ಉದ್ದವಾದ ಕಾರು. ಕ್ಯಾಲಿಫೋರ್ನಿಯಾದ ಜೇ ಓಹ್‌ಬರ್ಗ್ ಎಂಬವರು ಈ ಕಾರಿನ ನೀರ್ಮಾಣ ಮಾಡಿದ್ದಾರೆ.

ಅಂದ ಹಾಗೆ ಪ್ರದರ್ಶನಕ್ಕಾಗಿ ವಿಶ್ವದ ಅತಿ ಉದ್ದವಾದ ಕಾರನ್ನು ಜೇ ಓಹ್‌ಬರ್ಗ್ ತಯಾರು ಮಾಡಿದ್ದರು. ಇಷ್ಟವಾದರೆ ಇದಕ್ಕೊಂದು ಹೆಸರು ಬೇಡವೇ? ಹೌದು, ಇದು ವಿಶ್ವದ ಅತಿ ಉದ್ದವಾದ ಲಿಮೊಸಿನ್ ಕಾರು ಆಗಿದೆ. ಪ್ರದರ್ಶನಕ್ಕಾಗಿ ನಿರ್ಮಿಸಿದ ಕಾರು ಇಡೀ ಜಗತ್ತಿನ ಗಮನ ಸೆಳೆಯುತ್ತಿದ್ದು, ಗಿನ್ನೆಸ್ ಪುಟಕ್ಕೆ ಸೇರ್ಪಡೆಗೊಂಡಿದೆ.

ಆರಂಭದಲ್ಲಿ ಅತ್ಯಂತ ಸಣ್ಣ ಬಜೆಟ್‌ನಲ್ಲಿ ಕಾರು ನಿರ್ಮಿಸಲು ಜೇ ಯೋಜನೆ ಹಾಕಿಕೊಂಡಿದ್ದರು. ಆದರೆ ವಿಶ್ವದ ಅತಿ ಉದ್ದವಾದ ಕಾರು ನಿರ್ಮಾಣ ಕುರಿತಾಗಿನ ಸುದ್ದಿ ವೈರಲ್ ರೀತಿಯಾಗಿ ಹರಡುತ್ತಿರುವಂತೆಯೇ ಜನರು ಇದರಲ್ಲಿ ಹಲವು ರೀತಿಯ ಬಳಕೆಗಳನ್ನು ಹುಡುಕತೊಡಗಿದರು.

ಲಿಮೊಸಿನ್ ಕಾರಿನ ಟಯರ್‌ಗಳೆಷ್ಟು?
100 ಫೀಟ್ ಉದ್ದವಿರುವ ವಿಶ್ವದ ಅತಿ ಉದ್ದವಾದ ಲಿಮೊಸಿನ್ ಕಾರಿಗೆ ಟಯರ್‌ಗಳೆಷ್ಟಿವೆ ಎಂಬುದು ಗೊತ್ತೇ..? ಬರೋಬ್ಬರಿ 26 ಟಯರ್‌ಗಳನ್ನು ಈ ಕಾರಿಗೆ ಜೋಡಿಸಲಾದಿದೆ.

ಡ್ರೈವಿಂಗ್ ಹೇಗಿರಬಹುದು..?
ಲಿಮೋಸಿನ್ ಕಾರನ್ನು ಚಾಲನೆ ಮಾಡುವುದು ಸ್ವಲ್ಪ ಕಷ್ಟಕರ. ತಿರುವುಗಳಲ್ಲಂತೂ ಇದರ ಪರಿಸ್ಥಿತಿ ಅಯ್ಯೋ ಪಾಪ ಅನ್ನಿಸುತ್ತಿದೆ. ಅದಕ್ಕಾಗಿಯೇ ಮುಂಭಾಗ ಹಾಗೂ ಹಿಂಭಾಗದಲ್ಲಿ ಡ್ರೈವರ್ ಕ್ಯಾಬಿನ್ ಆಳವಡಿಸಲಾಗಿದೆ. ಅಂದ್ರೆ ಇಬ್ಬರು ಚಾಲಕರು ಹೆಚ್ಚು ಹೊಂದಾಣಿಕೆಯಿಂದ ಕಾರು ಚಲಾಯಿಸಿದ್ದಲ್ಲಿ ಹೆಚ್ಚಿನ ತೊಂದರೆಯಿಲ್ಲದೆ ಕಾರು ಮುಂದಕ್ಕೆ ಸಾಗಬಹುದು.

ಇಷ್ಟೊಂದು ಉದ್ದವಾದ ಕಾರಿಗೆ ಅಮೆರಿಕದಲ್ಲಿ ಮಾನ್ಯತೆಯಿಲ್ಲ. ಹಾಗಾಗಿ ವಿವಾಹ, ಪ್ರದರ್ಶನ ಹಾಗೂ ಮತ್ತಿತ್ತರ ಸಮಾರಂಭಗಳಲ್ಲಿ ಮಾತ್ರ ಲಿಮೊಸಿನ್ ಕಾರುಗಳನ್ನು ಬಳಸಲಾಗುತ್ತಿದೆ.

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X