124 ದಿನಗಳಲ್ಲಿ ಆಲ್ಟೊ 1 ಲಕ್ಷ ಮಾರಾಟ ದಾಖಲೆ

Written By:
ಎಂಟ್ರಿ ಲೆವೆಲ್ ಕಾರು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿರುವ ಮಾರುತಿ ಸುಜುಕಿ ಮಾರುತಿ ಆಲ್ಟೊ 800, 124 ದಿನಗಳಲ್ಲೇ 1,00,000 ಯುನಿಟ್ ಮಾರಾಟ ದಾಖಲಿಸುವ ಮೂಲಕ ಹೊಸ ಅಲೆಯೆಬ್ಬಿಸಲು ಕಾರಣವಾಗಿದೆ.

ಆಲ್ಟೊ ಮಾರಾಟ ದೇಶದ ಮಧ್ಯಮ ವರ್ಗದ ಜನರಲ್ಲಿ ಮಾರುತಿ ಜನಪ್ರಿಯತೆಯನ್ನು ಸಾರುತ್ತಿದೆ. ಕಳೆದ ನಾಲ್ಕು ತಿಂಗಳೊಳಗೆ ಒಂದು ಲಕ್ಷ ಸೇಲ್ಸ್ ದಾಟುವ ಮೂಲಕ 2012-13ನೇ ಸಾಲಿನಲ್ಲಿ ಅತಿ ವೇಗದಲ್ಲಿ ಮಾರಾಟಗೊಂಡ ಕಾರು ಮಾಡೆಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಲ್ಟೊ ಫ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣಗೊಂಡಿದ್ದ ಆಲ್ಟೊ 2012 ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಂಡಿತ್ತು. ಕಂಪನಿಯ ಪ್ರಕಾರ ಬಿಡುಗಡೆ ಮೊದಲೇ 10,000ಕ್ಕೂ ಹೆಚ್ಚು ಯುನಿಟ್‌ಗಳು ಮುಂಗಡ ಬುಕ್ಕಿಂಗ್ ದಾಖಲಾಗಿದ್ದವು.

796 ಸಿಸಿ ಎಂಜಿನ್ ಜತೆ ಹೆಚ್ಚಿನ ಸುರಕ್ಷಾ ಮಾನದಂಡ ಡ್ರೈವರ್ ಸೀಟ್ ಏರ್‌ಬ್ಯಾಗ್ ಅನುಸರಿಸಿರುವುದು ಇನ್ನಷ್ಟು ಆಕರ್ಷಣೆಗೆ ಕಾರಣವಾಗಿತ್ತು.

English summary
Within four months of its launch, the Alto 800′s managed to pass the momentous landmark of 100,000 units, making it India’s fastest selling car in 2012-13. To be precise the Alto 800 managed to clock 1 lakh units within 124 days of its launch.
Story first published: Thursday, April 18, 2013, 15:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark