ಇಕೊಸ್ಪೋರ್ಟ್ ಎಫೆಕ್ಟ್; ಡಸ್ಟರ್ ಮಾರಾಟ ಕುಸಿತ

Written By:

ಕಳೆದ ಒಂದು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ರೆನೊ ಡಸ್ಟರ್ ಮಾರಾಟದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ದೇಶಿಯ ಮಾರುಕಟ್ಟೆಗೆ ಫೋರ್ಡ್ ಇಕೊಸ್ಪೋರ್ಟ್ ಭರ್ಜರಿ ಎಂಟ್ರಿ ಕೊಟ್ಟಿರುವುದೇ ಇಂತಹದೊಂದು ಕುತೂಹಲಕಾರಿ ಬೆಳವಣಿಗೆಗೆ ಕಾರಣವಾಗಿದೆ.

ಕಳೆದ 12 ತಿಂಗಳ ಮಾರಾಟದಲ್ಲೂ ಏರಿಕೆ ಕಂಡಿದ್ದ ರೆನೊ ಡಸ್ಟರ್ ಮಾರಾಟ ಜುಲೈ ತಿಂಗಳಲ್ಲಿ ಮಾತ್ರ 3,089 ಯುನಿಟ್‌ಗಳಿಗೆ ಸೀಮಿತಗೊಂಡಿದೆ. ನಿಮ್ಮ ಮಾಹಿತಿಗಾಗಿ ರೆನೊ ಡಸ್ಟರ್ 2012 ಜುಲೈ ತಿಂಗಳಲ್ಲಿ 7.19 ಲಕ್ಷ ರು. ದರಗಳಲ್ಲಿ ಲಾಂಚ್ ಆಗಿತ್ತು.

ತದಾ ಬಳಿಕ ಪ್ರತಿ ತಿಂಗಳಲ್ಲೂ ಸರಾಸರಿ 5,000 ಯುನಿಟ್ ಮಾರಾಟ ಕಂಡುಕೊಳ್ಳುವಲ್ಲಿ ಕಂಪನಿಯು ಯಶಸ್ವಿಯಾಗಿತ್ತು. ಈ ಪೈಕಿ 2013 ಮಾರ್ಚ್ ತಿಂಗಳಲ್ಲಿ 6,313 ಯುನಿಟ್ ಮಾರಾಟದ ಸಂಖ್ಯೆಯನ್ನು ದಾಟಿತ್ತು.

ಆದರೆ ಜೂನ್ ತಿಂಗಳಲ್ಲಿ 5.59 ಲಕ್ಷ ರು.ಗಳಿಗೆ ಫೋರ್ಡ್ ಇಕೊಸ್ಪೋರ್ಟ್ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿರುವಂತೆಯೇ ಡಸ್ಟರ್ ಹಿನ್ನಡೆ ಅನುಭವಿಸಿದೆ. ಜಾಗತಿಕವಾಗಿ 2013ರ ಅತ್ಯುತ್ತಮ ಕಾರೆಂಬ ಮನ್ನಣೆಗೆ ಪಾತ್ರವಾಗಿದ್ದ ಡಸ್ಟರ್ ಹಿಂದಿಕ್ಕಿರುವ ಇಕೊಸ್ಪೋರ್ಟ್ ಬಿಡುಗಡೆಯಾದ ಮೊದಲ ಮೂರು ವಾರಗಳಲ್ಲೇ 30,000ಕ್ಕೂ ಹೆಚ್ಚು ಮುಗಂಡ ಬುಕ್ಕಿಂಗ್ಸ್ ದಾಖಲಿಸಿಕೊಂಡಿತ್ತು.

ಫೋರ್ಡ್ ಇಕೊಸ್ಪೋರ್ಟ್ ಜುಲೈ ತಿಂಗಳಲ್ಲಿ 7,867 ಯುನಿಟ್ ಮಾರಾಟವನ್ನು ದಾಖಲಿಸಿಕೊಂಡಿದೆ. ಈ ಮೂಲಕ ಫೋರ್ಡ್ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇಕಡಾ 26ರಷ್ಟು ಏರಿಕೆ ದಾಖಲಿಸಿಕೊಂಡಿದೆ.

ಮತ್ತೊಂದೆಡೆ 2012 ಸಾಲಿಗಿಂತಲೂ ಉತ್ತಮ ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿರುವ ರೆನೊ ಶೇಕಡಾ 60ರಷ್ಟು ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿದೆ. ಆದರೆ ಇಕೊಸ್ಪೋರ್ಟ್ ಹೋಲಿಸಿದಾಗ ಡಸ್ಟರ್ ಮಾರಾಟದಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

English summary
Renault Duster records lowest sales in 1 year. This is probably due to the launch of Ford EcoSport, which is available at an ex-showroom price of Rs 5.59 lakh.
Story first published: Friday, August 2, 2013, 14:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark