ಭಾರತಕ್ಕೆ ಫೋರ್ಡ್ ಫಿಗೊ ಸೆಡಾನ್ ಕಾರು ಬರುತ್ತಂತೆ!

Posted By:

ಕೆಲವು ವರ್ಷಗಳ ಹಿಂದೆಯಷ್ಟೇ ಭಾರತ ಮಾರುಕಟ್ಟೆ ಪ್ರವೇಶಿಸಿದ್ದ ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್ ಕಾರು ಭಾರಿ ಯಶಸ್ಸನ್ನು ಕಂಡಿತ್ತು. ಇದರ ಬೆನ್ನಲ್ಲೇ ಅಮೆರಿಕ ಮೂಲಕ ಪ್ರತಿಷ್ಠಿತ ಕಾರು ತಯಾರಕ ಸಂಸ್ಥೆಯಾದ ಫೋರ್ಡ್, ಫಿಗೊ ತಲಹದಿಯಲ್ಲೇ ನೂತನ ಸೆಡಾನ್ ಎಂಟ್ರಿ ಲೆವೆಲ್ ಕಾರು ತಯಾರಿಸುತ್ತಿದೆ.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಈಗಾಗಲೇ ಬ್ರೆಜಿಲ್‌ನಲ್ಲಿ ಯಶಸ್ವಿ ಟೆಸ್ಟಿಂಗ್ ಹಂತ ಪೂರ್ಣಗೊಳಿಸಿರುವ ಫೋರ್ಡ್ ಫಿಗೊ ಎಂಟ್ರಿ ಲೆವೆಲ್ ಸೆಡಾನ್ ಭಾರತ ಮಾರುಕಟ್ಟೆಯನ್ನು ಸದ್ಯದಲ್ಲೇ ಪ್ರವೇಶಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಅಂದ ಹಾಗ ಫೋರ್ಡ್ ಫಿಗೊ ಸೆಡಾನ್ ಕಾರು, ಮುಂದಿನ ವರ್ಷ ಜಾಗತಿಕ ಮಾರುಕಟ್ಟೆ ಪ್ರವೇಶಿಸಲಿದೆ. ಇದು ಮಾರುತಿ ಸುಜುಕಿ ಡಿಜೈರ್ ಹಾಗೂ ಹೋಂಡಾ ಅಮೇಜ್‌ಗಿಂತ ತೀರಾ ವಿಭಿನ್ನವಾಗಿರಲಿದ್ದು, ನಾಲ್ಕು ಮೀಟರ್ ಉದ್ದ ಪರಿಮಿತಿಯನ್ನು ದಾಟಿದೆ.

ಹಾಗೊಂದು ವೇಳೆ ವಿಶೇಷವಾಗಿ ಭಾರತ ಮಾರುಕಟ್ಟೆಯನ್ನು ಕೇಂದ್ರಿಕರಿಸಿ ನಾಲ್ಕು ಮೀಟರ್ ಉದ್ದ ಪರಿಮಿತಿಯೊಳಗೆ ನೂತನ ಫಿಗೊ ಲಾಂಚ್ ಮಾಡಿದ್ದಲ್ಲಿ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿಗೆ ಕಾರಣವಾಗಲಿದೆ. ಅಂದರೆ ಮಾರುತಿ ಡಿಜೈರ್, ಹೋಂಡಾ ಅಮೇಜ್ ಜತೆ ಇನ್ನಷ್ಟೇ ಆಗಮನವಾಗಲಿರುವ ಹ್ಯುಂಡೈ ಐ10 ಸೆಡಾನ್ ಕಾರಿಗೆ ನೇರ ಪೈಪೋಟಿ ಎನಿಸಿಕೊಳ್ಳಲಿದೆ.

ಮುಂದಿನ ತಲೆಮಾರಿನ ಫಿಗೊ ಸೆಡಾನ್ ಎಂಟ್ರಿ ಲೆವೆಲ್ ಕಾರಿನ ವಿನ್ಯಾಸದ ಬಗ್ಗೆ ಹೆಚ್ಚಿನ ಮಾಹಿತಿಗಳು ಬಂದಿಲ್ಲವಾದರೂ ಅತ್ಯಂತ ಯಶ ಕಂಡಿರುವ ಇಕೊಸ್ಪೋರ್ಟ್ ನಮೂನೆಯ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

ford figo

ಇನ್ನು ಭಾರತದಲ್ಲಿ ಫೋರ್ಡ್ ಕ್ಲಾಸಿಕ್ ಆವೃತ್ತಿಯನ್ನು ಫಿಗೊ ಸೆಡಾನ್ ಕಾರು ಹಿಮ್ಮೆಟ್ಟಿಸಲಿದೆ. ಇದು 1.0 ಲೀಟರ್ ಇಕೊಬೂಸ್ಟ್ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ಇನ್ನು ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾದ್ದಲ್ಲಿ ನೇರ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಲಿದೆ.

English summary
US auto major Ford Motors is planning to launch a small entry level sedan that is based on the Ford Figo. It looks like the company has been working on the entry level sedan that is targeted to emerging markets like Brazil and India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark