ಹ್ಯುಂಡೈ ಗ್ರಾಂಡ್ ಐ10 ಖರೀದಿಸುವ ಯೋಜನೆ ಇದೆಯಾ?

Written By:

ಮಾಧ್ಯಮಗಳಲ್ಲಿ ಈಗಾಗಲೇ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವ ಹ್ಯುಂಡೈ ಬಹುನಿರೀಕ್ಷಿತ ಗ್ರಾಂಡ್ ಐ10 ಕಾರು ಹಲವು ಕಾರಣಗಳಿಂದಾಗಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿರುವ ಹ್ಯುಂಡೈ ಗ್ರಾಂಡ್ ಐ10 ಅನಧಿಕೃತ ಬುಕ್ಕಿಂಗ್ ಆರಂಭಗೊಂಡಿದೆಯಂತೆ!

ವೆರಿಯಂಟ್ಸ್ ಹಾಗೂ ದರಗಳ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗದ ಹೊರತಾಗಿಯೂ ಗ್ರಾಹಕರನ್ನು ಸೆಳೆಯುವಲ್ಲಿ ಗ್ರಾಂಡ್ ಐ10 ಯಶಸ್ವಿಯಾಗಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ರು. 5000 ಪಾವತಿಸಿ ಡೀಲರುಗಳ ಬಳಿ ಗ್ರಾಂಡ್ ಐ10 ಕಾರಿಗಾಗಿ ಮುಗಂಡ ಬುಕ್ಕಿಂಗ್ ಕಾಯ್ದಿರಿಸಿಕೊಳ್ಳಬಹುದಾಗಿದೆ. ತದಾ ಬಳಿಕ ಗ್ರಾಂಡ್ ಐ10 ಲಾಂಚ್ ಆದ ಕೆಲವೇ ದಿನಗಳಲ್ಲಿ ಕಾರಿನ ವಿತರಣೆ ಕಾರ್ಯ ಆರಂಭಗೊಳ್ಳಲಿದೆ.

To Follow DriveSpark On Facebook, Click The Like Button

ನೂತನ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರು ಐ10 ಹಾಗೂ ಐ20 ನಡುವೆ ಕಾಣಿಸಿಕೊಳ್ಳಲಿದೆ. ಇದರಲ್ಲಿ 1.2 ಲೀಟರ್ ಕಪ್ಪ ಪೆಟ್ರೋಲ್ ಎಂಜಿನ್ ಹಾಗೂ 1.1 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಮೋಟಾರ್ ಎಂಜಿನ್ ಆಳವಡಿಸಲಾಗುವುದು. ಇನ್ನು ಇದರ ದರ 4.5 ಲಕ್ಷ ರು.ಗಳ ಅಸುಪಾಸಿನಲ್ಲಿರುವ ಸಾಧ್ಯತೆಯಿದೆ.

ನೂತನ ಐ10 ಗ್ರಾಂಡ್, ಸ್ವಯಂಚಾಲಿತ ಮಡಚಬಹುದಾದ ಹೊರಂಗಿನ ಮಿರರ್, ಮ್ಯೂಸಿಕ್ ಸಿಸ್ಟಂ ಜತೆ 1 ಜಿಬಿ ಮೆಮರಿ ಸ್ಟೋರೆಜ್, ರಿಯರ್ ಎಸಿ ವೆಂಟ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಕೂಲ್ಡ್ ಗ್ಲೋವ್ ಬಾಕ್ಸ್, 14 ಇಂಚು ಅಲಾಯ್ ವೀಲ್, ಸ್ಟಾರ್ಟ್/ಸ್ಟಾಪ್ ಬಟನ್, ಸ್ಮಾರ್ಟ್ ಕೀ, ಏರ್ ಬ್ಯಾಗ್ ಹಾಗೂ ಎಬಿಎಸ್ ತಂತ್ರಜ್ಞಾನಗಳನ್ನು ಹೊಂದಿರಲಿದೆ. ಒಟ್ಟಿನಲ್ಲಿ ಮುಂಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಜಾಗತಿಕವಾಗಿ ಪ್ರದರ್ಶನ ಕಾಣಲಿರುವ ಗ್ರಾಂಡ್ ಐ10 ಆ ಬಳಿಕ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ.

English summary
various dealers have unofficially started accepting bookings for the Grand i10 with the belief of delivering the car within few days of the launch.
Story first published: Wednesday, August 28, 2013, 14:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark