ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಫ್ಲೈಓವರ್

Written By:

ದೇಶದ ಎರಡನೇ ಅತಿದೊಡ್ಡ ಫ್ಲೈಓವರ್ ವಾಣಿಜ್ಯ ನಗರಿ ಮುಂಬೈನಲ್ಲಿ ಲೋಕಾರ್ಪಣೆಯಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಹಸಿರು ನಿಶಾನೆ ತೋರುವ ಮೂಲಕ ನೂತನ 'ಈಸ್ಟರ್ನ್ ಫ್ರಿವೇ'ಗೆ ಅಧಿಕೃತ ಚಾಲನೆ ನೀಡಿದರು.

ಅವಳಿ ಸುರಂಗ ಮಾರ್ಗ...

ಈ ನೂತನ ಈಸ್ಟರ್ನ್ ಫ್ರಿವೇನಿಂದಾಗಿ ದಕ್ಷಿಣ ಮುಂಬೈನಿಂದ ಪೂರ್ವ ನಗರದ ವರೆಗಿನ ದೂರ 45 ಕೀ.ಮೀ.ಗಳಿಂದ 17 ಕೀ.ಮೀ.ಗಳಿಗೆ ಇಳಿಕೆಯಾಗಲಿದೆ. ಇದರಿಂದ ಈ ದೂರವನ್ನು ಕೇವಲ 20 ನಿಮಿಷಗಳಲ್ಲಿ ಕ್ರಮಿಸಲು ಸಾಧ್ಯವಾಗಲಿದೆ. ಇದರ ಪ್ರಮುಖ ವೈಶಿಷ್ಟ್ಯ ಏನೆಂದರೆ 9.29 ಕೀ.ಮೀ. ಉದ್ದದ ಫ್ಲೈ ಓವರ್ ಜತೆಗೆ 550 ಮೀಟರ್ ಉದ್ದದ ಅವಳಿ ಸುರಂಗ ಮಾರ್ಗ ನಿರ್ಮಿಸಲಾಗಿದೆ.

ಯಾರಿಗೆ ಪ್ರಯೋಜನ..?

ಇದೀಗ 40,000ಕ್ಕೂ ಹೆಚ್ಚು ವಾಹನಗಳು ಈ ಫ್ಲೈವರ್‌ನ ಪ್ರಯೋಜನ ಪಡೆಯಬಹುದಾಗಿದೆ. ಇದರೊಂದಿಗೆ ಸಿಎಸ್‌ಟಿ ಹಾಗೂ ಚೆಂಬೂರ್ ನಡುವಣ ಅಂತರ 45 ನಿಮಿಷಗಳಿಂದ 20 ನಿಮಿಷಗಳಿಗೆ ಇಳಿಕೆಯಾಗಲಿದೆ.

ಸಿಗ್ನಲ್ ಫ್ರಿ ಪಯಣ...

ಸಿಗ್ನಲ್ ಫ್ರಿ ಪಯಣ...

ಇಲ್ಲಿ ಗಮನಾರ್ಹ ಅಂಶವೆಂದರೆ ವಾಹನ ಸವಾರರಿಗೆ ಸಿಗ್ನಲ್ ಫ್ರೀ ಪಯಣ ಖಾತ್ರಿಪಡಿಸುತ್ತದೆ.

ಸುಗಮ ಪಯಣ...

ಸುಗಮ ಪಯಣ...

ಮುಂಬೈನ ಪ್ರಮುಖ ವಾಣಿಜ್ಯ ಜಿಲ್ಲೆಗಳಾದ ದಕ್ಷಿಣ ಮುಂಬೈನಿಂದ ಪೂರ್ವ ನಗರ ಪ್ರದೇಶಗಳಿಗೆ ದೂರ ಕಡಿಮೆಯಾಗಲಿದ್ದು, ಕೇವಲ 20 ನಿಮಿಷಗಳಲ್ಲಿ ತಲುಪಬಹುದಾಗಿದೆ.

ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಫ್ಲೈಓವರ್

ನೂತನ ಫ್ಲೈ ಓವರ್‌ನಿಂದ ನವಿ ಮುಂಬೈ, ಪ್ವೆಲ್, ಪುಣೆ ಹಾಗೆ ಗೋವಾ ಪ್ರದೇಶಗಳಿಗೆ ಹೊರಡುವವರಿಗೆ ನೆರವಾಗಲಿದೆ.

ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಫ್ಲೈಓವರ್

ಐದು ವರ್ಷಗಳ ಹಿಂದೆ ಅಂದರೆ 2008ನೇ ಇಸವಿಯಲ್ಲಿ ಆರಂಭವಾಗಿದ್ದ ಈ ಯೋಜನೆಗೆ ಸರಕಾರ 1,250 ಕೋಟಿ ರು.ಗಳನ್ನು ವ್ಯಯ ಮಾಡಿದೆ.

ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಫ್ಲೈಓವರ್

ಕೇಂದ್ರದಿಂದ ವಿಐಪಿಗಳ ಅಲಭ್ಯತೆ ಕಾಡಿರುವುದು ಉದ್ಘಾಟನಾ ವಿಳಂಬವಾಗಲು ಕಾರಣವಾಗಿದೆ. ಆದರೆ ಜನಸಾಮಾನ್ಯರಿಂದ ಒತ್ತಡ ಹೆಚ್ಚಿದಂತೆ ಬಹುನಿರೀಕ್ಷಿತ ಫ್ಲೈ ಓವರ್ ಲೋಕಾರ್ಪಣೆಯಾಗಿದೆ.

Eastern freeway

Eastern freeway

Eastern freeway

Eastern freeway

English summary
The 13.59 kilometre-long Eastern Freeway, aimed at reducing travel time for cars between suburbs and South Mumbai, was inaugurated by Maharashtra Chief Minister Prithviraj Chavan.
Story first published: Saturday, June 15, 2013, 8:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark