ಪೆಟ್ರೋಲ್ vs ಡೀಸೆಲ್; ನಿಮ್ಮ ಆಯ್ಕೆ ಯಾವುದು?

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಕಾರುಗಳ ಪೈಕಿ ಯಾವುದು ಹೆಚ್ಚು ಸೂಕ್ತ ಎಂಬುದು ನಿಮ್ಮ ಗೊಂದಲಕ್ಕೆ ಕಾರಣವಾಗಿರಬಹುದು. ಪ್ರಸಕ್ತ ಪರಿಸ್ಥಿತಿಯಲ್ಲಂತೂ ಪೆಟ್ರೋಲ್ ಕಾರಿನ ಬೇಡಿಕೆ ಕಡಿಮೆಯಾಗುತ್ತಿದೆ.

ಪೆಟ್ರೋಲ್ ಕಾರಿಗೆ ಹೋಲಿಸಿದರೆ ಡೀಸೆಲ್ ಕಾರುಗಳು ಕೊಂಚ ದುಬಾರಿಯಾಗಿದೆ. ಹಾಗೆಯೇ ಇದರ ನಿರ್ವಹಣಾ ವೆಚ್ಚ ಕೂಡಾ ಅಧಿಕವಾಗಿದೆ. ಇತ್ತೇಚಿಗಿನ ಸರಕಾರದ ನಿಲುವುಗಳು ಕೂಡಾ ಡೀಸೆಲ್ ಕಾರುಗಳ ವಿರುದ್ಧವಾಗಿದೆ.

2012ನೇ ಸಾಲಿನ ಸೆಪ್ಟೆಂಬರ್ ತಿಂಗಳಿನಲ್ಲಷ್ಟೇ ಡೀಸೆಲ್‌ಗೆ ಐದು ರುಪಾಯಿ ಹೆಚ್ಚಳಗೊಳಿಸಿದ್ದ ಕೇಂದ್ರ ಸರಕಾರವು ಪ್ರಸಕ್ತ ಸಾಲಿನಲ್ಲೂ 10 ರು. ಹೆಚ್ಚಳಗೊಳಿಸುವ ಸೂಚನೆ ನೀಡಿದೆ. ಇದು ಡೀಸೆಲ್ ಕಾರುಗಳನ್ನು ಹಿಂಬಡ್ತಿಗೆ ತಳ್ಳಿದೆ.

ಕಾರು ವಿಶ್ಲೇಷಕರ ಪ್ರಕಾರ ಮುಂದಿನ ದಿನಗಳಲ್ಲಿ ಪೆಟ್ರೋಲ್ ಎಂಜಿನ್ ಕಾರುಗಳ ಬೇಡಿಕೆ ಮತ್ತೆ ಜಾಸ್ತಿಯಾಗಲಿದೆ. ಹಿಂದೆಲ್ಲ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ನಡುವೆ 25 ರು.ಗಳ ವ್ಯತ್ಯಾಸವಿತ್ತು. ಆದರೆ ಪರಿಸ್ಥಿತಿ ಬದಲಾಗಿದೆ. ಡೀಸೆಲ್ ಕಾರುಗಳು ದುಬಾರಿಯಾಗುತ್ತಿರುವುದರಿಂದ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಪೆಟ್ರೋಲ್ ಕಾರುಗಳತ್ತ ಗ್ರಾಹಕರು ವಾಲುತ್ತಿದ್ದಾರೆ.

ಕಾಮೆಂಟ್ ಬಾಕ್ಸ್ ಮುಖಾಂತರ ನಿಮ್ಮ ಅಭಿಪ್ರಾಯ ಸಲಹೆಗಳನ್ನು ನಮ್ಮ ಜತೆ ಹಂಚಿರಿ.

Most Read Articles

Kannada
English summary
There is always the question of what is the best choice when it comes down to a petrol car and a diesel car? In the current scenario we would definitely lean towards a petrol car. We look at how the demand for petrol passenger cars are steadily increasing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X