ಬ್ರಿಟನ್‌ನಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳಿಗೆ ನಿಷೇಧ?

Written By:

ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ಕಾರುಗಳನ್ನು ನಿಷೇಧಿಸುವಂತೆ ಬ್ರಿಟನ್‌ನ ರಾಜಕೀಯ ಪಕ್ಷವೊಂದು ಬೇಡಿಕೆ ಮುಂದಿರಿಸಿದೆ. ಬ್ರಿಟನ್ ಸಮ್ಮಿಶ್ರ ಸರಕಾರದ ಮಿತ್ರಪಕ್ಷವಾಗಿರುವ ಲಿಬೆರಲ್ ಡೆಮೋಕ್ರಾಟ್ಸ್ ಈ ಮಹತ್ತರ ಪ್ರಸ್ತಾಪವನ್ನು ಮುಂದಿರಿಸಿದ್ದು, 2040ರ ವೇಳೆಗೆ ಬ್ರಿಟನ್ ರಸ್ತೆಗಳಲ್ಲಿ ಓಡಾಡುವ ಡೀಸೆಲ್ ಹಾಗೂ ಪೆಟ್ರೋಲ್ ಚಾಲಿತ ಪ್ರಯಾಣಿಕ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಬೇಡಿಕೆಯಿರಿಸಿದೆ.

ಹಸಿರು ಭವಿಷ್ಯದ ಭಾಗವಾಗಿ ಇಂತಹದೊಂದು ಪ್ರಸ್ತಾಪ ಇಡಲಾಗಿದೆ. ಈ ಮುಖಾಂತರ ಪಳೆಯುಳಿಕೆಗಳಿಂದ ಸಂಗ್ರಹವಾಗುವ ಇಂಧನಗಳಿಗೆ ಗುಡ್ ಬೈ ಹೇಳಲು ಗುರಿಯಿರಿಸಿಕೊಳ್ಳಲಾಗಿದೆ. ಅಂದರೆ ಭವಿಷ್ಯದಲ್ಲಿ ಬ್ರಿಟನ್ ರಸ್ತೆಗಳಲ್ಲಿ ಹೈಬ್ರಿಡ್ ಹಾಗೂ ವಿದ್ಯುತ್ ಚಾಲಿತ ಕಾರುಗಳು ಮಾತ್ರ ಚಲಿಸಲಿದೆ.

ಪ್ರಸ್ತುತ ಪ್ರಸ್ತಾಪವು ಹಲವು ವಿವಿಧ ವಾದ ಪ್ರತಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಸರಿಯಾದ ಮುಂದಾಲೋಚನೆ ಇಲ್ಲದೆ ಇದನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭದ ವಿಚಾರವಲ್ಲ. ಪ್ರಮುಖವಾಗಿಯೂ ಹೈಬ್ರಿಡ್ ಕಾರುಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳಂತಹ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಡಲಾಗಿದೆ.

ಇದೇ ಸಂದರ್ಭದಲ್ಲಿ ಈಗಿರುವ ಟೋಲ್ ಆಧಾರಿತ ತೆರಿಗೆ ಪಾವತಿ ಬದಲಾಗಿ ವ್ಯತ್ಯಸ್ತ ರಸ್ತೆ ಟ್ಯಾಕ್ಸಿ ಆಳವಡಿಸುವ ಕುರಿತಾಗಿಯೂ ಪ್ರಸ್ತಾಪ ಮುಂದಿರಿಸಲಾಗಿದೆ.

English summary
Liberal Democrats, a UK political party which is a part of the ruling coalition government, has come out with a controversial proposal which will certainly not sit well with hardcore automobile enthusiasts. The proposal is to completely ban petrol and diesel passenger vehicles from UK roads by 2040.
Story first published: Tuesday, August 13, 2013, 15:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark