'ಮೇಡ್ ಇನ್ ಇಂಡಿಯಾ' ಇಕೊಸ್ಪೋರ್ಟ್ ಆಸ್ಟ್ರೇಲಿಯಾಕ್ಕೆ ರಫ್ತು

Posted By:
ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆಗೆ ಇನ್ನೇನು ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ಕಾರು ಪ್ರಿಯರಿಗೆ ಮತ್ತೊಂದು ಸಂತಸದ ಸುದ್ದಿ ಬಂದಿದ್ದು, ಭಾರತದಲ್ಲಿ ತಯಾರಿಯಾದ ಈ ಕಾಂಪಾಕ್ಟ್ ಎಸ್‌ಯುವಿ ಕಾರು ಆಸ್ಟ್ರೇಲಿಯಾಕ್ಕೆ ರಫ್ತಾಗಲಿದೆ.

ಅಮೆರಿಕಾ ಮೂಲದ ಫೋರ್ಡ್ ಕಂಪನಿಯ ಇಕೊಸ್ಪೋರ್ಟ್ ಆವೃತ್ತಿ 2013 ಜೂನ್ ತಿಂಗಳಲ್ಲಿ ಭಾರತಕ್ಕೆ ಪರಿಚಯವಾಗಲಿದೆ. ಆ ಬಳಿಕ 'ಮೇಡ್ ಇನ್ ಇಂಡಿಯಾ' ಇಕೊಸ್ಪೋರ್ಟ್ ಕಾರು ಡಿಸೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಪರಿಚಯವಾಗಲಿದೆ.

ಆಸ್ಟ್ರೇಲಿಯಾದಲ್ಲಿ 20 ಸಾವಿರ ಆಸ್ಟ್ರೇಲಿಯನ್ ಡಾಲರ್‌ಗಳಿಗೆ ಗ್ರಾಹಕರ ಕೈಕೆಟಗಲಿದೆ. ಇದರೊಂದಿಗೆ ಭಾರತ ಕೂಡಾ ವಿಶ್ವ ದರ್ಜೆಯ ಕಾರು ನಿರ್ಮಾಣದ ಹೆಗ್ಗಳಿಕೆಯನ್ನು ಪಡೆಯಲಿದೆ.

ಭಾರತದಂತೆ ಆಸ್ಟ್ರೇಲಿಯಾದಲ್ಲೂ ರೈಟ್ ಹ್ಯಾಂಡ್ ಡ್ರೈವಿಂಗ್ ವ್ಯವಸ್ಥೆ ಇರುವುದರಿಂದ ಇದಕ್ಕೆ ಸಮಾನವಾದ ಮಾಡೆಲ್ ಬಿಡುಗಡೆ ಮಾಡಲು ಹೆಚ್ಚು ನೆರವಾಗಲಿದೆ. ಆಸ್ಟ್ರೇಲಿಯಾದಲ್ಲಿ ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಇಕೊಸ್ಪೋರ್ಟ್ ಲಭ್ಯವಾಗಲಿದೆ. ಇದರಲ್ಲಿ 1.0 ಲೀಟರ್ ಇಕೊಬೂಸ್ಟ್ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ Ti-VCT, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಇರಲಿದೆ.

ಹಾಗಿದ್ದರೂ 1.5 ಲೀಟರ್ ಡೀಸೆಲ್ ನಿಯಂತ್ರಿತ ಮಾದರಿ ಕಾಂಗಾರೂ ನಾಡನ್ನು ಪ್ರವೇಶಿಸುವ ಸಾಧ್ಯತೆಗಳಿಲ್ಲ. ಇನ್ನು ಭಾರತದಲ್ಲಿರುವಂತೆಯೇ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

English summary
After launching the much awaited compact SUV Ford EcoSport in India in June 2013, the American car maker will export the built in India EcoSport models to Australia. The Australian market will get the compact SUV in December 2013, at around 20,000 Australian Dollars.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark