ಬುಲೆಟ್ ಕಾರು ಕವಚದಲ್ಲಿ ನರೇಂದ್ರ ಮೋದಿ

Posted By:

ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ವಿರೋಧ ಕಡೆಗಣಿಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪಕ್ಷದ '2014 ಲೋಕಸಭಾ ಚುನಾವಣಾ ಪ್ರಚಾರ ಸಮಿತಿ' ಅಧ್ಯಕ್ಷರಾಗಿ ಭಾನುವಾರ ನೇಮಿಸಲಾಗಿತ್ತು. ಈ ನಡುವೆ ಮೋದಿ ತನ್ನ ತವರೂರಿನಿಂದಲೇ ಬುಲೆಟ್ ಪ್ರೂಫ್ ವಾಹನದೊಂದಿಗೆ ಸಭೆಗೆ ಆಗಮಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಒಟ್ಟಾರೆಯಾಗಿ 400ರಷ್ಟು ರಾಷ್ಟ್ರೀಯ ನಾಯಕರಿಗೆ ಗೋವಾ ಪೊಲೀಸ್ ಭದ್ರತೆ ಒದಗಿಸಿತ್ತು.

ನಿಮಗೆಲ್ಲರಿಗೂ ತಿಳಿದಿದ್ದ ಹಾಗೆ ಕಳೆದ ವಾರ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ಬಿಜೆಪಿ 'ರಾಷ್ಟ್ರೀಯ ಕಾರ್ಯಕಾರಿಣಿ' ಸಭೆ ಹಲವು ವಿಚಾರಗಳಿಂದಾಗಿ ಪ್ರಾಮುಖ್ಯತೆ ಗಿಟ್ಟಿಸಿಕೊಂಡಿತ್ತು. ಬಿಜೆಪಿ ಜತೆ ಮುನಿಸಿಕೊಂಡಿದ್ದ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಸಭೆಯಿಂದ ದೂರವುಳಿದಿದ್ದರೆ ಅಪಾರ ಜನಬೆಂಬಲದೊಂದಿಗೆ ಮೋದಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಗೋವಾದಲ್ಲಿ ಬುಲೆಟ್ ಪ್ರೂಫ್ ವಾಹನಗಳಿಲ್ಲ...

ಇಲ್ಲಿ ಆಸಕ್ತಿದಾಯಕ ವಿಚಾರವೆಂದರೆ ಗೋವಾದಲ್ಲಿ ಒಂದೇ ಒಂದು ಬುಲೆಟ್ ಪ್ರೂಫ್ ವಾಹನವಿಲ್ಲ. ಇದೇ ಕಾರಣಕ್ಕಾಗಿ ಮೋದಿ ತಮ್ಮ ಸ್ವಂತ ಬುಲೆಟ್ ಫ್ರೂಫ್ ಕಾರಿನಲ್ಲೇ ಝಡ್ ಪ್ಲಸ್ ಭದ್ರತೆಯೊಂದಿಗೆ ಸಭೆಗೆ ಆಗಮಿಸಬೇಕಾಯಿತು. ಒಟ್ಟು ಮೂವರು ನಾಯಕರುಗಳಿಗೆ ಝಡ್ ಪ್ಲಸ್ ಸುರಕ್ಷತೆ ಒದಗಿಸಲಾಗಿತ್ತು. ಆದರೆ ಸುರಕ್ಷತೆ ದೃಷ್ಟಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಈ ಪೈಕಿ ಮೋದಿ ತಮ್ಮ ತವರೂರಿನಿಂದಲೇ ವಾಹನ ತರಿಸಿದ್ದರು. ಇದಕ್ಕೆ ಶಸ್ತ್ರಸಜ್ಜಿತ ಯೋಧರು ಬೆಂಗಲಾವಲಾಗಿ ಬಂದಿದ್ದರು.

ಗೋವಾದಲ್ಲಿ ಬುಲೆಟ್ ಫ್ರೂಪ್ ವಾಹನಗಳ ಕೊರತೆಯಿರುವುದರಿಂದ ನೆರೆಯ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಿಂದ ಹೈ ಎಂಡ್ ವಾಹನಗಳನ್ನು ತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿರುವ ನಾಯಕ ಆಗಿರುವುದರಿಂದಲೇ ಸಹಜವಾಗಿಯೇ ಜೀವ ಬೆದರಿಕೆ ಹೆಚ್ಚುತ್ತಲೇ ಇವೆ. ಇದೇ ಕಾರಣಕ್ಕಾಗಿ ಗರಿಷ್ಠ ಮಟ್ಟದ ಭದ್ರತೆ ಒದಗಿಸಲಾಗುತ್ತಿದೆ.

ಅಷ್ಟಕ್ಕೂ ಮೋದಿ ಕಾರು ಯಾವುದೆಂಬುದನ್ನು ತಿಳಿಯುವ ನಿಮ್ಮಲ್ಲಿದೆಯೇ ಇಲ್ಲಿದೆ ನೋಡಿ ಫೋಟೊ ಗ್ಯಾಲರಿ...

ನರೇಂದ್ರ ಮೋದಿ ಸ್ಕಾರ್ಪಿಯೊ ಪಯಣ

ಇತರೆ ರಾಜಕಾರಣಿಗಳಿಂದ ಭಿನ್ನವಾಗಿ ತಮ್ಮ ಅಧಿಕೃತ ಪಯಣಕ್ಕಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಸ್ಕಾರ್ಪಿಯೊ ಕಾರನ್ನು ಬಳಕೆ ಮಾಡುತ್ತಾರೆ.

ಝಡ್ ಪ್ಲಸ್ ಭದ್ರತೆ

ಸಹಜವಾಗಿಯೇ ಬೆದರಿಕಾ ಕರೆಗಳಿರುವುದರಿಂದ ರಾಷ್ಟ್ರ ಮಟ್ಟದ ರಾಜಕಾರಣಿಗಳಿಗೆ ಗರಿಷ್ಠ ಮಟ್ಟದ ಝಡ್ ಪ್ಲಸ್ ಭದ್ರತೆ ಒದಗಿಸಲಾಗುತ್ತದೆ.

ಬೆಂಗಾವಲು ಪಡೆ

ಬುಲೆಟ್ ಪ್ರೂಫ್ ಕಾರುಗಳಿಗೆ ವಿಶೇಷ ತರಬೇತಿ ಪಡೆದ ಸೇನಾ ಯೋಧರು ಬೆಂಗಲಾವಲಾಗಿ ಕಾರಿಗೆ ರಕ್ಷಣೆ ನೀಡುತ್ತಾರೆ.

ಗರಿಷ್ಠ ಭದ್ರತೆ

ಬಿಜೆಪಿಯಿಂದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿರುವುದರಿಂದ ಸಹಜವಾಗಿಯೇ ಮೋದಿಗೆ ನೀಡುತ್ತಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ.

ನರೇಂದ್ರ ಮೋದಿ

ಇದೀಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

English summary
Since a bulletproof vehicle was not available in Goa, Gujarath Chief Minister Narendra Modi brought his own bullet proof car to goa.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark