250 ಕೋಟಿ ಹೂಡಿಕೆ; ಸ್ಕಾನಿಯಾ ಭರ್ಜರಿ ಎಂಟ್ರಿ: ವೋಲ್ವೋ ಯುಗಾಂತ್ಯ?

Posted By:

ಸ್ವೀಡನ್‌ನ ದೈತ್ಯ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಸ್ಕಾನಿಯಾ ಕಾಮರ್ಷಿಯಲ್ ವೆಹಿಕಲ್ಸ್ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದು, ಅದರಲ್ಲೂ ಪ್ರಮುಖವಾಗಿ ಸ್ಕಾನಿಯಾ ತಯಾರಿಕ ಘಟಕ ನಮ್ಮ ರಾಜ್ಯದಲ್ಲೇ ಆರಂಭಗೊಂಡಿರುವುದು ಇನ್ನು ಹೆಚ್ಚಿನ ಸಂತಸಕ್ಕೆ ಕಾರಣವಾಗಿದೆ.

ಬೆಂಗಳೂರು ಹೊರವಯಲದಲ್ಲಿರುವ ಕೋಲಾರ ಜಿಲ್ಲೆಯ ನರಸಾಪುರದಲ್ಲಿ 250 ಕೋಟಿಗಳಷ್ಟು ಬೃಹತ್ ಹೂಡಿಕೆ ಮಾಡಿರುವ ಸ್ಕಾನಿಯಾ. ವಾರ್ಷಿಕವಾಗಿ 2,500ರಷ್ಟು ಭಾರ ಎಳೆಯುವಿಕೆ ಟ್ರಕ್ಕುಗಳ ಜತೆಗೆ 1,000 ಐಷಾರಾಮಿ ಇಂಟರ್ ಸಿಟಿ ಬಸ್ಸುಗಳನ್ನು ಉತ್ಪಾದಿಸುವ ಯೋಜನೆ ಹೊಂದಿದೆ. ಅಲ್ಲದೆ ಏಷ್ಯಾದ ಮೊದಲ ಸ್ಕಾನಿಯಾ ಘಟಕವೆಂಬ ಹೆಮ್ಮೆಗೆ ಕರ್ನಾಟಕದ ನರ್ಸಾಪುರ ಪಾತ್ರವಾಗಿದೆ.

ನರಸಾಪುರದಲ್ಲಿ ಆರಂಭವಾಗಿರುವ ಸ್ಕಾನಿಯಾದ ಬೃಹತ್ ಜೋಡಣೆ ಘಟಕವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವರಾದ ಒಸ್ಕರ್ ಫೆರ್ನಾಂಡಿಸ್ ಮತ್ತು ಸ್ಕಾನಿಯಾ ಗ್ಲೋಬಲ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಣಧಿಕಾರಿ ಮಾರ್ಟಿನ್ ಲಂಡ್‌ಸ್ಟಡ್ ಉಪಸ್ಥಿತರಿದ್ದರು.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ಆರಾಮದಾಯಕ ಬಸ್ ಪಯಣಕ್ಕೆ ವೋಲ್ವೋ ಹೆಸರುವಾಸಿಯಾಗಿದೆ. ಇದೀಗ ಈ ವಿಸ್ತಾರವಾದ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಗುರಿಯನ್ನು ಸ್ಕಾನಿಯಾ ಹೊಂದಿದೆ. ಸ್ಕಾನಿಯಾ ನೂತನ ಘಟಕದಲ್ಲಿ ಶೇಕಡಾ 18ರಷ್ಟು ಟ್ರಕ್ ಹಾಗೂ 100ರಷ್ಟು ಬಸ್ ಬಾಡಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುವುದು.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

ಈ ಮುಖಾಂತರ ಮುಂದಿನ ಐದು ವರ್ಷಗಳ ವರೆಗೆ 800ಕ್ಕಿಂತಲೂ ಹೆಚ್ಚು ಮಂದಿಗೆ ಉದ್ಯೋಗವಕಾಶವನ್ನು ಕಲ್ಪಿಸಲಾಗುವುದು ಎಂದು ಸ್ಕಾನಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

2007ರಲ್ಲಿ ಲಾರ್ಸೆಲ್ ಆಂಡ್ ಟರ್ಬೊ ಜತೆ ಪಾಲುದಾರಿಕೆ ಹಂಚಿಕೊಂಡಿದ್ದ ಸ್ಕಾನಿಯಾ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಇದೀಗ ದೇಶದಲ್ಲಿ ಭದ್ರ ನೆಲೆ ಸ್ಥಾಪಿಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

ದೇಶದಲ್ಲಿ ಮಾರಾಟ ವೃದ್ಧಿಸುವ ನಿಟ್ಟಿನಲ್ಲಿ 2011ರಲ್ಲಿ ಸ್ಕಾನಿಯಾ ಕಾರ್ಮಿಷಿಯಲ್ ವೆಹಿಕಲ್ಸ್ ಇಂಡಿಯಾಕ್ಕೆ ರೂಪು ನೀಡಲಾಗಿತ್ತು. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ವಿಶೇಷವಾಗಿಯೂ ಭಾರತಕ್ಕಾಗಿ R 500 6×4, G 460 6×4 ಮತ್ತು P 410 6×2 ಭಾರ ಎಳೆಯುವ ಟ್ರಕ್ಕುಗಳನ್ನು ಪರಿಚಿಸಿತ್ತು. ಈ ಪೈಕಿ P 410 8×4 ಗಣಿಗಾರಿಕೆ ಟಿಪ್ಪರನ್ನು 2012ರ ವರ್ಷಾಂತ್ಯದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

ಈ ನಡುವೆ ಪ್ರಸಕ್ತ ಸಾಲಿನಲ್ಲಿ ಗರಿಷ್ಠ ಸೌಲಭ್ಯಗಳನ್ನು ಒಳಗೊಂಡ ಇಂಟರ್ ಸಿಟಿ ಬಸ್ಸಿಗೂ ಹಸಿರು ನಿಶಾನೆ ತೋರಿಸಲಾಗಿತ್ತು.

ಏಷ್ಯಾದಲ್ಲೇ ಮೊದಲ ಘಟಕ

ಏಷ್ಯಾದಲ್ಲೇ ಮೊದಲ ಘಟಕ

ಇದು ಸ್ಕಾನಿಯಾದಿಂದ ಏಷ್ಯಾದಲ್ಲಿ ಸ್ಥಾಪಿತವಾಗಿರುವ ಮೊದಲ ಘಟಕವಾಗಿದೆ. ಅಂದರೆ ಭಾರತ ಸ್ಕಾನಿಯಾದ ಜಾಗತಿಕ ಪ್ರತಿನಿಧಿ ಕೂಡಾ ಎನಿಸಿಕೊಳ್ಳಲಿದ್ದು, ಜಗತ್ತಿನೆಲ್ಲೆಡೆಗೆ ಸ್ಕಾನಿಯಾ ಬಿಡಿಭಾಗಗಳನ್ನು ರಫ್ತು ಮಾಡಲಿದೆ.

ತಯಾರಿಕ ಘಟಕ

ತಯಾರಿಕ ಘಟಕ

ನರ್ಸಾಪುರ ಸ್ಥಳೀಯ ತಯಾರಿಕ ಘಟಕವು ಎರಡು ಉತ್ಪಾದಕ ವಿಭಾಗಗಳನ್ನು ಹೊಂದಿರಲಿದೆ. ಸಹಜವಾಗಿಯೇ ಇದು ಟ್ರಕ್ ಜೋಡಣೆ ಹಾಗೂ ಇನ್ನೊಂದು ಬಸ್ಸಿಗೆ ಸೇರಿರಲಿದೆ.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

ಏತನ್ಮಧ್ಯೆ ಪ್ರಸ್ತುತ ಘಟಕದಲ್ಲಿ ಜೂನ್ ತಿಂಗಳಲ್ಲೇ ಆಫ್ ರೋಡ್ ಟ್ರಕ್ ಉತ್ಪನ್ನ ಆರಂಭಗೊಂಡಿತ್ತಲ್ಲದೆ ಆನ್ ರೋಡ್ ಟ್ರಕ್ ಉತ್ಪನ್ನ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಅಂದ ಹಾಗೆ 2014 ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಸ್ ರಸ್ತೆಗಿಳಿಯುವ ನಿರೀಕ್ಷೆಯಿದೆ.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

ಈ ಸಂದರ್ಭದಲ್ಲಿ ಮಾತನಾಡಿರುವ ಕರ್ನಾಟಕ ಸಿಎಂ ಸಿದ್ಧರಾಮಯ್ಯ, ಇಷ್ಟು ದೊಡ್ಡ ಕಂಪನಿಯು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಿರುವುದು ಹೆಮ್ಮೆಗೆ ಕಾರಣವಾಗಿದ್ದು, ಸ್ಕಾನಿಯಾದ ಸ್ಥಾಪನೆಯು ಈ ಪ್ರದೇಶದ ಕೈಗಾರಿಕಾ ಬೆಳವಣಿಗೆ ಮಾತ್ರವಲ್ಲದೆ ಗಮನಾರ್ಹ ಉದ್ಯೋಗವಕಾಶ ಸೃಷ್ಟಿ ಮಾಡಲು ನೆರವಾಗುತ್ತದೆ ಎಂದಿದ್ದಾರೆ.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

35 ಎಕ್ರೆ ಪ್ರದೇಶದಲ್ಲಿ ಹರಡಿರುವ ಸ್ಕಾನಿಯಾದ ಹೊಸ ಘಟಕವು ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದಲ್ಲಿ ಕಾರ್ಯಚರಿಸಲಿದೆ. ಅಂದರೆ ಬಿಡಿಭಾಗಗಳ ಜೋಡಣೆ ನರಸಾಪುರದಲ್ಲಿ ನಡೆಯಲಿದೆ. ಅಲ್ಲದೆ ಮುಂದಿನ ವರ್ಷದಲ್ಲಿ ಉತ್ಪಾದನೆಯನ್ನು ಶೇಕಡಾ 100ರಷ್ಟು ಸ್ಥಳೀಯವಾಗಿಸುವ ಗುರಿ ಹೊಂದಿದೆ.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

ಮುಂದಿನ ದಿನಗಳಲ್ಲಿ ದೇಶದ ಪ್ರಮುಖ 50 ನಗರಗಳಲ್ಲಿ ಡೀಲರ್‌ಶಿಪ್ ಹೊಂದುವುದು ಸ್ಕಾನಿಯಾ ಇರಾದೆಯಾಗಿದೆ. ಈ ನಿಟ್ಟಿನಲ್ಲಿ ಮಾರಾಟ ಹಾಗೂ ಸರ್ವೀಸ್ ಔಟ್ಲೆಟ್‌ಗಳನ್ನು ತೆರುದುಕೊಳ್ಳುವ ಮೂಲಕ ವ್ಯಾಪಾರ ಕುದುರಿಸಿಕೊಳ್ಳಲಿದೆ.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

ಅಷ್ಟಕ್ಕೂ ಇಂತಹ ಪ್ರೀಮಿಯಂ ಟ್ರಕ್ಕುಗಳ ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 70 ಲಕ್ಷಗಳಷ್ಟು ದುಬಾರಿಯಾಗಿರಲಿದೆ. ಈ ಮುಖಾಂತರ ವಾರ್ಷಿಕವಾಗಿ 20-25ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಿದೆ.

ನರಸಾಪುರದಲ್ಲಿ ಸ್ಕಾನಿಯಾ ಬೃಹತ್ ಘಟಕ ಆರಂಭ

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಾರತ ವಾಣಿಜ್ಯ ಮಾರುಕಟ್ಟೆಯಲ್ಲಿ ಸ್ಕಾನಿಯಾ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಈ ವಿಭಾಗದಲ್ಲಿ ಸ್ವೀಡನದ್ದೇ ಆಗಿರುವ ವೋಲ್ವೋ ಹಾಗೂ ಜರ್ಮನಿಯ ಮರ್ಸಿಡಿಸ್ ಬೆಂಝ್ ಕೂಡಾ ಕಾಣಿಸಿಕೊಂಡಿದೆ.

ಸ್ಕಾನಿಯಾ ನರಸಾಪುರ ಘಟಕ ಉದ್ಘಾಟನೆ- ವೀಡಿಯೋ ವೀಕ್ಷಿಸಿ

English summary
Scania inaugurated its first manufacturing facility in India, an initial investment of nearly € 30 million. The facility in Narasapura, near Bangalore, will have an annual capacity for approximately 2,500 trucks and 1,000 inter-city coaches.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more