ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

By Nagaraja

ಒಂದು ಸಾಮಾನ್ಯ ಬಸ್ ಗಂಟೆಗೆ ಎಷ್ಟು ವೇಗತೆಯಲ್ಲಿ ಚಲಿಸಬಹುದು? 60? 100? ಅಥವಾ 150?. ಹಾಗಿದ್ದರೆ ನಿಮ್ಮಊಹೆ ತಪ್ಪು. ಯಾಕೆಂದರೆ ನಾವಿಂದು ಗಂಟೆಗೆ 250 ಕೀ.ಮೀ. ವೇಗದಲ್ಲಿ ಚಲಿಸುವ ಬಸ್ಸೊಂದನ್ನು ಪರಿಚಯಿಸಲಿದ್ದೇವೆ.

ಹೌದು, ಇದು ಕೇವಲ ಅತಿ ವೇಗದಲ್ಲಿ ಚಲಿಸುವ ಬಸ್ ಮಾತ್ರವಲ್ಲದೆ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. 23 ಮಂದಿಗೆ ಹಾಯಾಗಿ ಪಯಣಿಸಬಹುದಾದ ಬಸ್ ಇದಾಗಿದೆ.

ಇನ್ನು ಈ ಬಸ್ ಬಗ್ಗೆ ಹೆಚ್ಚು ಮಾತನಾಡುವುದಾದರೆ ಹಾಲೆಂಡ್‌ನ ಮಾಜಿ ಗಗನಯಾತ್ರಿಗಳು ಈ ಐಷಾರಾಮಿ ಬಸ್ಸನ್ನು ತಯಾರಿಸಿದ್ದಾರೆ. ಪ್ರೊಪೆಸರ್ Wubbo Ockels ಮಾರ್ಗದರ್ಶನದಲ್ಲಿ ಹಾಲೆಂಡ್‌ನ Delft ಯುನಿವರ್ಸಿಟಿ ಆಫ್ ಟೆಕ್ನಾಲಜಿ ಈ ಅದ್ಭುತ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಅಂದರೆ ಇದು ಸದ್ಯಕ್ಕಂತೂ ಭಾರತಕ್ಕೆ ಪ್ರವೇಶಿಸುವ ಲಕ್ಷ್ಮಣಗಳಿಲ್ಲ. ಯಾಕೆಂದರೆ ಸದ್ಯ ದೇಶದ ರಸ್ತೆ ಪರಿಸ್ಥಿತಿ ಗಮನಿಸಿದಾಗ ಈ ಕನಸು ನನಸಾಗುವುದು ಅಸಾಧ್ಯದ ಮಾತು. ಪ್ರಸ್ತುತ ದುಬೈ ಹಾಗೂ ಅಬುದಾಬಿ ನಡುವಣ ಸಂಚಾರಕ್ಕಾಗಿ ಈ ಸೂಪರ್ ಲಗ್ಷುರಿ ಬಸ್ಸನ್ನು ಅಭಿವೃದ್ಧಿಪಡಿಸಲಾಗಿದೆ.

ವಿದ್ಯುತ್‌ನಿಂದ ಸಂಚರಿಸಲ್ಪಡುವ ಈ ಸೂಪರ್ ಲಗ್ಷುರಿ ಬಸ್ 15 ಮೀಟರ್ ಉದ್ದವಿರಲಿದೆ. ಇನ್ನು ಹೆಚ್ಚು ಪರಿಸರ ಸ್ನೇಹಿ ಬಸ್ ಮಾಡುವ ನಿಟ್ಟಿನಲ್ಲಿ ಲಿಥಿಯಮ್ ಇಯಾನ್ ಬ್ಯಾಟರಿಗಳನ್ನು ಬಳಸಲಾಗಿದ್ದು, ಬಸ್‌ನ ರೂಫ್‌ನಲ್ಲಿ ಲಗತ್ತಿಸಲಾಗಿರುವ ಸೋಲರ್ ಪ್ಯಾನಲ್‌ಗಳಿಂದ ರಿ ಚಾರ್ಜ್ ಮಾಡಬಹುದಾಗಿದೆ.

ಸೂಪರ್ ಲಗ್ಷುರಿ ಬಸ್ಸಲ್ಲಿ ಹಗುರವಾದ ಸಲಕರಣೆಗಳನ್ನು ಬಳಸಲಾಗಿದೆ. ಇದರಿಂದ ಬಸ್ ಹ್ಯಾಂಡ್ಲಿಂಗ್ ಹಾಗೂ ವೇಗತೆಯನ್ನು ಖಾತ್ರಿಪಡಿಸಬಹುದು. ಹಾಗೆಯೇ ಚಾಲಕನಿಗೆ ಸೆಂಟರ್‌ನಲ್ಲಿ ಸಿಟ್ಟಿಂಗ್ ವ್ಯವಸ್ಥೆ ನೀಡಲಾಗಿದೆ.

ಈಗಾಗಲೇ ಹಾಲೆಂಡ್ ಆಡಳಿತದಿಂದ ಕಾನೂನು ಮಾನ್ಯತೆ ಪಡೆಯುವಲ್ಲಿ ಈ ಸೂಪರ್ ಬಸ್ ಯಶಸ್ವಿಯಾಗಿದೆ. ಗಲ್ಫ್‌ನಲ್ಲಿ ವಿಶೇಷವಾಗಿ ನಿರ್ಮಿಸಲಾಗಿರುವ 'ಫಾಸ್ಟ್ ಲೇನ್ (fast lane)'ನಲ್ಲಿ ಈ ಬಸ್ ಸಂಚರಿಸುವ ನಿರೀಕ್ಷೆಯಿದೆ. ಅಂದರೆ ದುಬೈ ಹಾಗೂ ಅಬುದಾಬಿ ನಡುವಣ ದೂರವನ್ನು ಕೇವಲ 30 ನಿಮಿಷಗಳಲ್ಲಿ ತಲುಪಬಹುದಾಗಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಬಸ್ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಅಬುದಾಬಿಯ ಮಾಸ್ದರ್‌ನಲ್ಲಿ ಈಗಾಗಲೇ ಈ ಸೂಪರ್ ಲಗ್ಷುರಿ ಬಸ್ಸನ್ನು ಯಶಸ್ವಿ ಟೆಸ್ಟಿಂಗ್ ನಡೆಸಲಾಗಿದೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಇದರ ಏರೋಡೈನಾಮಿಕ್ ವಿನ್ಯಾಸ ಸೂಪರ್ ಲಗ್ಷುರಿ ಬಸ್ಸಿಗೆ ಹೆಚ್ಚಿನ ವೇಗತೆ ಗಿಟ್ಟಿಸಲು ನೆರವಾಗಲಿದೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಪ್ರಸ್ತುತ ಸೂಪರ್ ಲಗ್ಷುರಿ ಬಸ್ಸಿನ ಮುಂಭಾಗದ ವಿನ್ಯಾಸವು ನಮಗೆ ಫಾರ್ಮುಲಾ ಒನ್ ಕಾರು ಅಂತೆಯೇ ಫೆರಾರಿ Enzo ಸೂಪರ್ ಕಾರಿನ ವಿನ್ಯಾಸವನ್ನು ನೆನಪಾಗಿಸುತ್ತದೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಸೂಪರ್ ಬಸ್ಸಿನ ಹಿಂದುಗಡೆ ಎರಡು ಸೆಟ್ ಟಯರ್‌ಗಳನ್ನು ಆಳವಡಿಸಲಾಗಿದೆ. ಇದರಿಂದ ಬಸ್ಸಿಗೆ ಹೆಚ್ಚಿನ ವೇಗತೆ ಸಿಗುವುದರೊಂದಿಗೆ ಹ್ಯಾಡ್ಲಿಂಗ್ ಉತ್ತಮವೆನಿಸಲಿದೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಹಾಗೆಯೇ ಈ ಸೂಪರ್ ಬಸ್ ಎಂಟು ಜೋಡಿ ಗುಲ್ ವಿಂಗ್ ಡೋರ್‌ಗಳನ್ನು ಹೊಂದಿದೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಅಂದ ಹಾಗೆ ಈ ಸೂಪರ್ ಲಗ್ಷುರಿ ಬಸ್ ಹೆಚ್ಚು ವೇಗತೆಯನ್ನು ಪಡೆದುಕೊಂಡರೂ ದರದ ವಿಚಾರಕ್ಕೆ ಬಂದಾಗ ತುಂಬಾನೇ ದುಬಾರಿಯಾಗಿದೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಇನ್ನು ಚಾಲಕನು ಕಾಕ್‌ಪಿಟ್‌ನ ಮಧ್ಯ ಭಾಗದಲ್ಲಿ ಕುಳಿತು ಚಾಲನೆ ಮಾಡುತ್ತಾನೆ. ಇದು ಮೆಕ್‌ಲ್ಯಾರೆನ್ ಎಫ್1 ಸ್ಪೋರ್ಟ್ಸ್ ಕಾರಿಗೆ ಸಾಮತ್ಯೆಯನ್ನು ಹೊಂದಿದೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಇದರಿಂದಾಗಿ ಅಬುದಾಬಿ ಹಾಗೂ ದುಬೈ ನಡುವಣ ಅಂತರವು ಇನ್ನಷ್ಟು ತಗ್ಗಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ನೆರವು ಮಾಡಲಿದೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಈ ಸೂಪರ್ ಬಸ್ ಟೆಸ್ಟ್ ಡ್ರೈವ್ ಮಾಡಿದ ಚಾಲಕನ ಪ್ರಕಾರ ಪ್ರಸ್ತುತ ಬಸ್, ಕಾರನ್ನು ಹ್ಯಾಡ್ಲಿಂಗ್ ಮಾಡಿದ ಅನುಭವ ನೀಡುತ್ತದೆ ಎಂದಿದ್ದಾರೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಸುಮಾರು ಏಳು ಮಿಲಿಯನ್ ಯುರೋ ಖರ್ಚು ಮಾಡಿ ಈ ದುಬಾರಿ ಸೂಪರ್ ಲಗ್ಷುರಿ ಬಸ್ ತಯಾರಿಸಲಾಗಿದೆ.

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಸೂಪರ್ ಲಗ್ಷುರಿ ಬಸ್‌ನ ಆಕರ್ಷಕ ನೋಟ

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ಜಗತ್ತಿನ ಅತಿ ವೇಗದ ಸೂಪರ್ ಲಗ್ಷುರಿ ಬಸ್ಸಿದು

ನೈಜ ಪರಿಸ್ಥಿತಿಯಲ್ಲಿ ಈ ಸೂಪರ್ ಲಗ್ಷುರಿ ಬಸ್ಸಿನ ನಿರ್ವಹಣೆ ಯಾವ ರೀತಿ ಇರಲಿದೆ ಎಂಬುದು ಕುತೂಹಲ ಮೂಡಿಸಿದೆ. ಅಂದ ಹಾಗೆ ಇದು ಭಾರತಕ್ಕೆ ಪ್ರವೇಶಿಸಿದರೆ ಹೆಂಗಿರಬಹುದು? ನಿಮ್ಮ ಅಭಿಪ್ರಾಯಗಳ ಮೂಲಕ ಪ್ರತಿಕ್ರಿಯಿಸಿರಿ.

Most Read Articles

Kannada
English summary
How fast can a bus go? 60Kmph? 100Kmph? 120Kmph? No, the answer is an incredible 250kmph! The bus, aptly named as te Super Bus can reach a top speed of 250kmph without breaking a sweat. It not only offers speed but also luxury too. 23 passengers can travel in the Super Bus amidst ample luxury and comfort
Story first published: Monday, January 21, 2013, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X